ಕೆ.ಸಿ.ಜನರಲ್ ಆಸ್ಪತ್ರೆ ಮತ್ತೈದು ಕೊವಿಡ್ ವಾರಿಯರ್ಸ್‌ಗೆ ಸೋಂಕು
ಬೆಂಗಳೂರು: ನಗರದಲ್ಲಿ ಇಂದು ಮತ್ತೆ 5 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಫ್ರಂಟ್ ಲೈನ್ ಕೊರೊನಾ ವಾರಿಯರ್ಸ್‌ಗೆ ಕೊವಿಡ್ ಕಂಟಕ ಶುರುವಾಗಿದೆ. ಕೆ.ಸಿ.ಜನರಲ್ ಆಸ್ಪತ್ರೆ ಕೊವಿಡ್ ವಾರಿಯರ್ಸ್‌ಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಇಂದು ಮತ್ತೆ ಇಬ್ಬರು ವೈದ್ಯರು, ಇಬ್ಬರು ನರ್ಸ್ ಮತ್ತು ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ಐವರಿಗೆ ಸೋಂಕು ತಗುಲಿದೆ. ಇದುವರೆಗೂ ಒಟ್ಟು 30 ವಾರಿಯರ್ಸ್‌ಗೆ ಕೊರೊನಾ ದೃಢವಾಗಿದೆ. 96 ಸ್ಟಾಫ್ ನರ್ಸ್‌ಗಳ ಪೈಕಿ ಕೆಲವರು ರಜೆಯಲ್ಲಿದ್ದಾರೆ. ಇನ್ನು ಕೆಲವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಉಳಿದ […]

ಬೆಂಗಳೂರು: ನಗರದಲ್ಲಿ ಇಂದು ಮತ್ತೆ 5 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಫ್ರಂಟ್ ಲೈನ್ ಕೊರೊನಾ ವಾರಿಯರ್ಸ್‌ಗೆ ಕೊವಿಡ್ ಕಂಟಕ ಶುರುವಾಗಿದೆ. ಕೆ.ಸಿ.ಜನರಲ್ ಆಸ್ಪತ್ರೆ ಕೊವಿಡ್ ವಾರಿಯರ್ಸ್‌ಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.
ಇಂದು ಮತ್ತೆ ಇಬ್ಬರು ವೈದ್ಯರು, ಇಬ್ಬರು ನರ್ಸ್ ಮತ್ತು ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ಐವರಿಗೆ ಸೋಂಕು ತಗುಲಿದೆ. ಇದುವರೆಗೂ ಒಟ್ಟು 30 ವಾರಿಯರ್ಸ್‌ಗೆ ಕೊರೊನಾ ದೃಢವಾಗಿದೆ. 96 ಸ್ಟಾಫ್ ನರ್ಸ್‌ಗಳ ಪೈಕಿ ಕೆಲವರು ರಜೆಯಲ್ಲಿದ್ದಾರೆ. ಇನ್ನು ಕೆಲವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಉಳಿದ 40 ಸ್ಟಾಫ್ ನರ್ಸ್‌ಗಳೇ ಸೋಂಕಿತರನ್ನ ನೋಡಿಕೊಳ್ಳಬೇಕಾಗಿದೆ. ದಿನೇ ದಿನೇ ವಾರಿಯರ್ಸ್ಗಳಲ್ಲಿ ಮಹಾಮಾರಿ ಕಾಣಿಸಿಕೊಳ್ಳುತ್ತಿರುವುದರಿಂದ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಹೇಗೆ ಕೊಡುವುದು ಎಂಬ ಆತಂಕ ಶುರುವಾಗಿದೆ.
Published On - 10:48 am, Sun, 12 July 20




