ಇಂಗ್ಲೆಂಡ್​ ಸರಣಿಗೂ ಮುನ್ನವೇ ವಿರಾಟ್​ ಕೊಹ್ಲಿಗೆ ನೋಟಿಸ್​: ಸಂಕಷ್ಟದಲ್ಲಿ ಟೀಂ ಇಂಡಿಯಾ ನಾಯಕ

ಕೇರಳ ಹೈಕೋರ್ಟ್​ ಬುಧವಾರ ಕೊಹ್ಲಿಗೆ ನೋಟಿಸ್​ ನೀಡಿದೆ. ಫೆಬ್ರವರಿ 5ರಿಂದ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​​ ಆರಂಭಗೊಳ್ಳಲಿದೆ. ಅದಕ್ಕೂ ಮೊದಲೇ ಕೊಹ್ಲಿಗೆ ನೋಟಿಸ್​ ಜಾರಿಯಾಗಿದೆ.

ಇಂಗ್ಲೆಂಡ್​ ಸರಣಿಗೂ ಮುನ್ನವೇ ವಿರಾಟ್​ ಕೊಹ್ಲಿಗೆ ನೋಟಿಸ್​: ಸಂಕಷ್ಟದಲ್ಲಿ ಟೀಂ ಇಂಡಿಯಾ ನಾಯಕ
ವಿರಾಟ್​ ಕೊಹ್ಲಿ
Follow us
ರಾಜೇಶ್ ದುಗ್ಗುಮನೆ
|

Updated on:Jan 27, 2021 | 6:12 PM

ತಿರುವನಂತಪುರಂ: ಫೆಬ್ರವರಿ 5ರಿಂದ ಇಂಗ್ಲೆಂಡ್​​​ ವಿರುದ್ಧದ ಟೆಸ್ಟ್​​​ ಆರಂಭಗೊಳ್ಳಲಿದೆ. ಇದಕ್ಕೂ ಮೊದಲೇ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿಗೆ ನೋಟಿಸ್​ ಜಾರಿಯಾಗಿದೆ.

ಕೇರಳ ಹೈಕೋರ್ಟ್​ ಬುಧವಾರ ಕೊಹ್ಲಿಗೆ ನೋಟಿಸ್​ ನೀಡಿದೆ. ಆನ್​ಲೈನ್​ ರಮ್ಮಿಯ ವ್ಯಸನಿಯಾಗಲು ಬ್ರ್ಯಾಂಡ್​ ಅಂಬಾಸಿಡರ್​ಗಳು ಕಾರಣ ಎಂದು ಆರೋಪಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಆಗಿತ್ತು. ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ನಟರಾದ ತಮನ್ನಾ ಮತ್ತು ಅಜು ವರ್ಗೀಸ್ ಅವರಿಗೆ ನೋಟಿಸ್​ ನೀಡಿದೆ. ಕೊಹ್ಲಿ, ತಮನ್ನಾ ಮತ್ತು ವರ್ಗೀಸ್ ಆನ್‌ಲೈನ್ ರಮ್ಮಿಯ ಬ್ರ್ಯಾಂಡ್ ಅಂಬಾಸಿಡರ್​ಗಳಾಗಿದ್ದಾರೆ.

ಹೈಕೋರ್ಟ್ ರಾಜ್ಯ ಸರ್ಕಾರಕ್ಕೂ ನೋಟಿಸ್ ಜಾರಿಗೊಳಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೋರಿದೆ. ಆನ್‌ಲೈನ್​ಲ್ಲಿ ರಮ್ಮಿಯಂತಹ ಆಟಗಳನ್ನು ಆಡುವ ಮೂಲಕ ಅನೇಕರು ಅಪಾರ ಪ್ರಮಾಣದ ಹಣ ಮತ್ತು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಅದನ್ನು ನಿಷೇಧಿಸಬೇಕು ಎಂದು ಅರ್ಜಿದಾರರು ಹೈಕೋರ್ಟ್‌ಗೆ ಮನವಿ ಮಾಡಿದ್ದರು.

ತಿರುವನಂತಪುರದ ಕುಟ್ಟಿಚಾಲ್​ನಲ್ಲಿ 27 ವರ್ಷದ ವಿನೀತ್​ ಎಂಬುವವರು ಆನ್​ಲೈನ್​ ರಮ್ಮಿಯಲ್ಲಿ 21 ಲಕ್ಷ ಕಳೆದುಕೊಂಡಿದ್ದರು. ನಂತರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅರ್ಜಿದಾರರು ಈ ಪ್ರಕರಣವನ್ನು ಉಲ್ಲೇಖಿಸಿದ್ದಾರೆ.

ಆನ್​ಲೈನ್​ ಗ್ಯಾಬ್ಲಿಂಗ್ ಜಾಹಿರಾತು: ನಟ ಸುದೀಪ್​ಗೆ ಮದ್ರಾಸ್ ಹೈಕೋರ್ಟ್​ನಿಂದ ನೋಟಿಸ್

Published On - 6:07 pm, Wed, 27 January 21

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ