ತಿರುವನಂತಪುರಂ: ಫೆಬ್ರವರಿ 5ರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಆರಂಭಗೊಳ್ಳಲಿದೆ. ಇದಕ್ಕೂ ಮೊದಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ನೋಟಿಸ್ ಜಾರಿಯಾಗಿದೆ.
ಕೇರಳ ಹೈಕೋರ್ಟ್ ಬುಧವಾರ ಕೊಹ್ಲಿಗೆ ನೋಟಿಸ್ ನೀಡಿದೆ. ಆನ್‌ಲೈನ್ ರಮ್ಮಿಯ ವ್ಯಸನಿಯಾಗಲು ಬ್ರ್ಯಾಂಡ್ ಅಂಬಾಸಿಡರ್ಗಳು ಕಾರಣ ಎಂದು ಆರೋಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಆಗಿತ್ತು. ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ನಟರಾದ ತಮನ್ನಾ ಮತ್ತು ಅಜು ವರ್ಗೀಸ್ ಅವರಿಗೆ ನೋಟಿಸ್ ನೀಡಿದೆ. ಕೊಹ್ಲಿ, ತಮನ್ನಾ ಮತ್ತು ವರ್ಗೀಸ್ ಆನ್‌ಲೈನ್ ರಮ್ಮಿಯ ಬ್ರ್ಯಾಂಡ್ ಅಂಬಾಸಿಡರ್ಗಳಾಗಿದ್ದಾರೆ.
ಹೈಕೋರ್ಟ್ ರಾಜ್ಯ ಸರ್ಕಾರಕ್ಕೂ ನೋಟಿಸ್ ಜಾರಿಗೊಳಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೋರಿದೆ. ಆನ್ಲೈನ್ಲ್ಲಿ ರಮ್ಮಿಯಂತಹ ಆಟಗಳನ್ನು ಆಡುವ ಮೂಲಕ ಅನೇಕರು ಅಪಾರ ಪ್ರಮಾಣದ ಹಣ ಮತ್ತು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಅದನ್ನು ನಿಷೇಧಿಸಬೇಕು ಎಂದು ಅರ್ಜಿದಾರರು ಹೈಕೋರ್ಟ್‌ಗೆ ಮನವಿ ಮಾಡಿದ್ದರು.
ತಿರುವನಂತಪುರದ ಕುಟ್ಟಿಚಾಲ್ನಲ್ಲಿ 27 ವರ್ಷದ ವಿನೀತ್ ಎಂಬುವವರು ಆನ್‌ಲೈನ್ ರಮ್ಮಿಯಲ್ಲಿ 21 ಲಕ್ಷ ಕಳೆದುಕೊಂಡಿದ್ದರು. ನಂತರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅರ್ಜಿದಾರರು ಈ ಪ್ರಕರಣವನ್ನು ಉಲ್ಲೇಖಿಸಿದ್ದಾರೆ.
ಆನ್‌ಲೈನ್ ಗ್ಯಾಬ್ಲಿಂಗ್ ಜಾಹಿರಾತು: ನಟ ಸುದೀಪ್ಗೆ ಮದ್ರಾಸ್ ಹೈಕೋರ್ಟ್ನಿಂದ ನೋಟಿಸ್
Published On - 6:07 pm, Wed, 27 January 21