ಬೆಳಗಾವಿಯಲ್ಲಿ ನಾಯಿಯ ಜೀವ ಉಳಿಸಲು ಹೋಗಿ ಪ್ರಾಣ ತೆತ್ತ ಪಿಎಸ್​ಐ

ಬೆಳಗಾವಿ: ಕೊರೊನಾ ಭದ್ರತೆಗೆ ತೆರಳುತ್ತಿದ್ದಾಗ ಅಡ್ಡಬಂದ ನಾಯಿಯ ಜೀವ ಉಳಿಸಲು ಹೋಗಿ PSI ಎಂ.ಜಿ.ಗಣಾಚಾರಿ ಮೃತಪಟ್ಟಿರುವ ಘಟನೆ ಯಳ್ಳೂರು ಗ್ರಾಮದ ಬಳಿ ನಡೆದಿದೆ. ಯಳ್ಳೂರು ಗ್ರಾಮದಿಂದ ಪೊಲೀಸ್ ಠಾಣೆಗೆ ಬರುವಾಗ ರಸ್ತೆಯಲ್ಲಿ ನಾಯಿ ಅಡ್ಡಬಂದಿದೆ. ಈ ವೇಳೆ ನಾಯಿಯ ಜೀವ ಉಳಿಸಲು ಹೋಗಿ ಬೈಕ್​ ಸ್ಕಿಡ್ ಆಗಿದೆ. ಬೈಕ್​ನಿಂದ ಕೆಳಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಖಡೇಬಜಾರ್ ಪೊಲೀಸ್ ಠಾಣೆಯ ಪಿಎಸ್ಐ ಎಂ.ಜಿ.ಗಣಾಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ […]

ಬೆಳಗಾವಿಯಲ್ಲಿ ನಾಯಿಯ ಜೀವ ಉಳಿಸಲು ಹೋಗಿ ಪ್ರಾಣ ತೆತ್ತ ಪಿಎಸ್​ಐ
ಸಾಧು ಶ್ರೀನಾಥ್​

Updated on: Apr 23, 2020 | 10:45 AM

ಬೆಳಗಾವಿ: ಕೊರೊನಾ ಭದ್ರತೆಗೆ ತೆರಳುತ್ತಿದ್ದಾಗ ಅಡ್ಡಬಂದ ನಾಯಿಯ ಜೀವ ಉಳಿಸಲು ಹೋಗಿ PSI ಎಂ.ಜಿ.ಗಣಾಚಾರಿ ಮೃತಪಟ್ಟಿರುವ ಘಟನೆ ಯಳ್ಳೂರು ಗ್ರಾಮದ ಬಳಿ ನಡೆದಿದೆ. ಯಳ್ಳೂರು ಗ್ರಾಮದಿಂದ ಪೊಲೀಸ್ ಠಾಣೆಗೆ ಬರುವಾಗ ರಸ್ತೆಯಲ್ಲಿ ನಾಯಿ ಅಡ್ಡಬಂದಿದೆ. ಈ ವೇಳೆ ನಾಯಿಯ ಜೀವ ಉಳಿಸಲು ಹೋಗಿ ಬೈಕ್​ ಸ್ಕಿಡ್ ಆಗಿದೆ.

ಬೈಕ್​ನಿಂದ ಕೆಳಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಖಡೇಬಜಾರ್ ಪೊಲೀಸ್ ಠಾಣೆಯ ಪಿಎಸ್ಐ ಎಂ.ಜಿ.ಗಣಾಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಹಿರಿಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Published On - 9:06 am, Sat, 18 April 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us