AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL​ನಲ್ಲೀಗ ಶುರುವಾಗಿದೆ ಬಿಯರ್ಡ್ ಚಾಲೆಂಜ್! ಪೊಲ್ಲಾರ್ಡ್ ಚಾಲೆಂಜ್ ಸ್ವೀಕರಿಸ್ತಾರಾ ಕೊಹ್ಲಿ, ಕೇನ್, ಜಡ್ಡು?

ಮರಳುಗಾಡಿನ ಐಪಿಎಲ್ ಸಮರ ಅಭಿಮಾನಿಗಳಿಗೆ ಕಿಕ್ ನೀಡುತ್ತಿದ್ದಂತೆ, ಸ್ಟಾರ್ ಆಟಗಾರರು ಸವಾಲಿಗೆ ಪ್ರತಿಸವಾಲು ಅನ್ನೋ ಹೊಸದೊಂದು ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ಅದೇ ಬ್ರೇಕ್ ದಿ ಬಿಯರ್ಡ್ ಚಾಲೆಂಜ್. ಸದ್ಯ ಈ ಸೀಸನ್ ಐಪಿಎಲ್​ನಲ್ಲಿ ಸ್ಟಾರ್ ಆಟಗಾರರು ತಮ್ಮ ಉದ್ದನೆಯ ಗಡ್ಡಕ್ಕೆ ಕತ್ತರಿ ಹಾಕೋದಕ್ಕೆ ಶುರುಮಾಡಿದ್ದಾರೆ. ಅಷ್ಟೇ ಅಲ್ಲ.. ತಮ್ಮಂತೆ ಬಿಯರ್ಡ್​ಗೆ ಕತ್ತರಿ ಹಾಕುವಂತೆ, ಸ್ಟಾರ್ ಆಟಗಾರರಿಗೆ ಚಾಲೆಂಜ್ ಹಾಕ್ತಿದ್ದಾರೆ. ಬಿಯರ್ಡ್​ಗೆ ಕತ್ತರಿ ಹಾಕಿದ ಕೆರಾನ್ ಪೊಲ್ಲಾರ್ಡ್! ಮೊದಲಿಗೆ ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಶುರುಮಾಡಿದ್ದು ಮುಂಬೈ ಇಂಡಿಯನ್ಸ್ […]

IPL​ನಲ್ಲೀಗ ಶುರುವಾಗಿದೆ ಬಿಯರ್ಡ್ ಚಾಲೆಂಜ್! ಪೊಲ್ಲಾರ್ಡ್ ಚಾಲೆಂಜ್ ಸ್ವೀಕರಿಸ್ತಾರಾ ಕೊಹ್ಲಿ, ಕೇನ್, ಜಡ್ಡು?
ಆಯೇಷಾ ಬಾನು
|

Updated on:Oct 08, 2020 | 8:47 AM

Share

ಮರಳುಗಾಡಿನ ಐಪಿಎಲ್ ಸಮರ ಅಭಿಮಾನಿಗಳಿಗೆ ಕಿಕ್ ನೀಡುತ್ತಿದ್ದಂತೆ, ಸ್ಟಾರ್ ಆಟಗಾರರು ಸವಾಲಿಗೆ ಪ್ರತಿಸವಾಲು ಅನ್ನೋ ಹೊಸದೊಂದು ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ಅದೇ ಬ್ರೇಕ್ ದಿ ಬಿಯರ್ಡ್ ಚಾಲೆಂಜ್.

ಸದ್ಯ ಈ ಸೀಸನ್ ಐಪಿಎಲ್​ನಲ್ಲಿ ಸ್ಟಾರ್ ಆಟಗಾರರು ತಮ್ಮ ಉದ್ದನೆಯ ಗಡ್ಡಕ್ಕೆ ಕತ್ತರಿ ಹಾಕೋದಕ್ಕೆ ಶುರುಮಾಡಿದ್ದಾರೆ. ಅಷ್ಟೇ ಅಲ್ಲ.. ತಮ್ಮಂತೆ ಬಿಯರ್ಡ್​ಗೆ ಕತ್ತರಿ ಹಾಕುವಂತೆ, ಸ್ಟಾರ್ ಆಟಗಾರರಿಗೆ ಚಾಲೆಂಜ್ ಹಾಕ್ತಿದ್ದಾರೆ.

ಬಿಯರ್ಡ್​ಗೆ ಕತ್ತರಿ ಹಾಕಿದ ಕೆರಾನ್ ಪೊಲ್ಲಾರ್ಡ್! ಮೊದಲಿಗೆ ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಶುರುಮಾಡಿದ್ದು ಮುಂಬೈ ಇಂಡಿಯನ್ಸ್ ತಂಡದ ಆಲ್​ರೌಂಡರ್ ಕೆರಾನ್ ಪೊಲ್ಲಾರ್ಡ್. ಇಷ್ಟು ದಿನ ಸೊಂಪಾಗಿ ಬೆಳೆಸಿದ್ದ ತಮ್ಮ ಗಡ್ಡಕ್ಕೆ ಪೊಲ್ಲಾರ್ಡ್ ಕತ್ತರಿ ಹಾಕಿದ್ದಾರೆ. ಕತ್ತರಿ ಹಾಕಿ ಪೋಸ್ ಕೊಟ್ಟಿದ್ದಷ್ಟೇ ಅಲ್ಲ. ನನ್ನಂತೆ ಬಿಯರ್ಡ್​ಗೆ ಕತ್ತರಿ ಹಾಕುವಂತೆ, ಐಪಿಎಲ್​ನಲ್ಲಿರೋ ಸ್ಟಾರ್ ಆಟಗಾರರಿಗೆ ಚಾಲೆಂಜ್ ಹಾಕಿದ್ದಾರೆ.

ಪೊಲ್ಲಾರ್ಡ್ ಚಾಲೆಂಜ್ ಸ್ವೀಕರಿಸಿದ ದಿನೇಶ್ ಕಾರ್ತಿಕ್ ಪೊಲ್ಲಾರ್ಡ್ ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಸ್ವೀಕರಿಸಿರೋ ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್, ತಮ್ಮ ಗಡ್ಡಕ್ಕೂ ಕತ್ತರಿ ಹಾಕಿ ಪೋಸ್ ಕೊಟ್ಟಿದ್ದಾರೆ.

ಪೊಲ್ಲಾರ್ಡ್ ಚಾಲೆಂಜ್ ಸ್ವೀಕರಿಸ್ತಾರಾ ಕೊಹ್ಲಿ, ಕೇನ್, ಜಡ್ಡು? ಪೊಲ್ಲಾರ್ಡ್ ಹಾಕಿದ ಚಾಲೆಂಜ್ ಕಾರ್ತಿಕ್ ಸ್ವೀಕರಿಸುತ್ತಿದ್ದಂತೆ, ಅಭಿಮಾನಿಗಳ ಕಣ್ಣು ಈ ಮೂವರ ಮೇಲೆ ಬಿದ್ದಿದೆ. ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ, ಚೆನ್ನೈ ತಂಡದ ರವೀಂದ್ರ ಜಡೇಜಾ ಮತ್ತು ಹೈದ್ರಾಬಾದ್ ತಂಡದ ಕೇನ್ ವಿಲಿಯಮ್ಸನ್, ತಮ್ಮ ಸುಂದರವಾದ ಬಿಯರ್ಡ್​ನಿಂದಲೇ ಎಟ್ರಾಕ್ಟನ್ ಕಾಪಾಡಿಕೊಂಡಿದ್ದಾರೆ. ಈ ಮೂವರು ಕಳೆದ ಎರಡು ವರ್ಷಗಳಿಂದ ಕಾಪಾಡಿಕೊಂಡು ಬಂದಿರೋ ತಮ್ಮ ನೀಟಾದ ಗಡ್ಡಕ್ಕೆ ಕತ್ತರಿ ಹಾಕ್ತಾರಾ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

2017ರ ಐಪಿಎಲ್​ನಲ್ಲೂ ಶುರುವಾಗಿತ್ತು ಈ ಚಾಲೆಂಜ್! ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಶುರುವಾಗಿದ್ದು 2017ರ ಐಪಿಎಲ್​ನಿಂದ. ಆವತ್ತು ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯಾ ಮತ್ತು ರವೀಂದ್ರ ಜಡೇಜಾ ತಮ್ಮ ಬಿಯರ್ಡ್​ಗೆ ಕತ್ತರಿ ಹಾಕಿದ್ರು. ಈ ಸೀಸನ್​ನಲ್ಲಿ ಕೆರಾನ್ ಪೊಲ್ಲಾರ್ಡ್ ಬ್ರೇಕ್ ದಿ ಬಿಯರ್ಡ್ ಚಾಲೆಂಜ್​ಗೆ ಮತ್ತೆ ಚಾಲನೆ ಕೊಟ್ಟಿದ್ದಾರೆ. ಈ ಚಾಲೆಂಜ್ ಅನ್ನ ಕೊಹ್ಲಿ, ಜಡ್ಡು, ಕೇನ್ ಸ್ವೀಕರಿಸಿದ್ರೆ, ಅರ್ಥಪೂರ್ಣವಾಗೋದ್ರಲ್ಲಿ ಅನುಮಾನವೇ ಇಲ್ಲ.

https://www.instagram.com/p/CGB2ehXAs6N/?utm_source=ig_web_copy_link

Published On - 8:46 am, Thu, 8 October 20