AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಧಾನಿಯ ಜನರಿಗೆ ಟ್ರಾಫಿಕ್‌ ಸಮಸ್ಯೆಯಿಂದ ಮುಕ್ತಿ ಕೊಡಿಸಲು ಬರ್ತಿದೆ ಸಬ್ ಅರ್ಬನ್ ರೈಲು..

ಬೆಂಗಳೂರಿಗರ ಬಹುವರ್ಷಗಳ ಕನಸು ನನಸಾಗುವ ದಿನ ಹತ್ತಿರವಾಗುತ್ತಿದೆ. ಬೆಂಗಳೂರು ಮಹಾನಗರದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡುವ ಯೋಜನೆ ಜಾರಿಗೆ ಬರ್ತಿದೆ. ಈ ಯೋಜನೆಯಿಂದ ಐಟಿ ಸಿಟಿಯ ಟ್ರಾಫಿಕ್‌ ಸಮಸ್ಯೆ ಸ್ಪಲ್ಪ ಮಟ್ಟಿಗೆ ಮುಕ್ತಿ ಸಿಗಲಿದೆ. ಟ್ರಾಫಿಕ್.. ಟ್ರಾಫಿಕ್‌.. ಟ್ರಾಫಿಕ್‌.. ಬೆಂಗಳೂರು ಟ್ರಾಫಿಕ್ ಜನರ ಜೀವ ಹಿಂಡುತ್ತಿದೆ. ರಾಜಧಾನಿಯ ಜನ ಈ ಟ್ರಾಫಿಕ್‌ನಲ್ಲೇ ಅರ್ಧ ಜೀವನ ಕಳೆಯುತ್ತಿದ್ದಾರೆ. ಆದ್ರೆ ಮೆಟ್ರೋ ಬಂದ ಮೇಲೆ ಸ್ವಲ್ಪ ಮಟ್ಟಿಗೆ ಟ್ರಾಫಿಕ್ ಕಮ್ಮಿಯಾಗಿದೆ. ಈಗ ಮತ್ತಷ್ಟು ಟ್ರಾಫಿಕ್ ಕಮ್ಮಿ ಮಾಡೋಕೆ ಮತ್ತೊಂದು ಟ್ರೈನ್ […]

ರಾಜಧಾನಿಯ ಜನರಿಗೆ ಟ್ರಾಫಿಕ್‌ ಸಮಸ್ಯೆಯಿಂದ ಮುಕ್ತಿ ಕೊಡಿಸಲು ಬರ್ತಿದೆ ಸಬ್ ಅರ್ಬನ್ ರೈಲು..
ಆಯೇಷಾ ಬಾನು
|

Updated on: Oct 08, 2020 | 7:58 AM

Share

ಬೆಂಗಳೂರಿಗರ ಬಹುವರ್ಷಗಳ ಕನಸು ನನಸಾಗುವ ದಿನ ಹತ್ತಿರವಾಗುತ್ತಿದೆ. ಬೆಂಗಳೂರು ಮಹಾನಗರದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡುವ ಯೋಜನೆ ಜಾರಿಗೆ ಬರ್ತಿದೆ. ಈ ಯೋಜನೆಯಿಂದ ಐಟಿ ಸಿಟಿಯ ಟ್ರಾಫಿಕ್‌ ಸಮಸ್ಯೆ ಸ್ಪಲ್ಪ ಮಟ್ಟಿಗೆ ಮುಕ್ತಿ ಸಿಗಲಿದೆ.

ಟ್ರಾಫಿಕ್.. ಟ್ರಾಫಿಕ್‌.. ಟ್ರಾಫಿಕ್‌.. ಬೆಂಗಳೂರು ಟ್ರಾಫಿಕ್ ಜನರ ಜೀವ ಹಿಂಡುತ್ತಿದೆ. ರಾಜಧಾನಿಯ ಜನ ಈ ಟ್ರಾಫಿಕ್‌ನಲ್ಲೇ ಅರ್ಧ ಜೀವನ ಕಳೆಯುತ್ತಿದ್ದಾರೆ. ಆದ್ರೆ ಮೆಟ್ರೋ ಬಂದ ಮೇಲೆ ಸ್ವಲ್ಪ ಮಟ್ಟಿಗೆ ಟ್ರಾಫಿಕ್ ಕಮ್ಮಿಯಾಗಿದೆ. ಈಗ ಮತ್ತಷ್ಟು ಟ್ರಾಫಿಕ್ ಕಮ್ಮಿ ಮಾಡೋಕೆ ಮತ್ತೊಂದು ಟ್ರೈನ್ ಬರ್ತಿದೆ.

ಐಟಿ ಸಿಟಿ ಬೆಂಗಳೂರಿಗೆ ಸಬ್ ಅರ್ಬನ್ ರೈಲು ಸೇವೆ ಯೆಸ್‌, ಬೆಂಗಳೂರಿಗರ ಬಹು ವರ್ಷಗಳ ಕನಸು ಅಂದ್ರೆ ಮುಂಬೈ ಮಹಾನಗರದಂತೆ ಬೆಂಗಳೂರಿಗೂ ಸಬ್ ಅರ್ಬನ್ ರೈಲು ಯೋಜನೆ ಬೇಕು ಅನ್ನೋದು. ಈಗ ಈ ಕನಸು ನನಸಾಗಿದೆ. ನಿನ್ನೆ ನಡೆದ ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಇದು 20 ಸಾವಿರ ಕೋಟಿ ರೂಪಾಯಿ ಯೋಜನೆಯಾಗಿದ್ದು, ಕೇಂದ್ರ-ರಾಜ್ಯ ಸರ್ಕಾರಗಳು ಜಂಟಿ ಸಹಭಾಗಿತ್ವದಲ್ಲಿ ಯೋಜನೆ ಜಾರಿಗೊಳಿಸಲಿವೆ. ಬೆಂಗಳೂರು ನಗರ, ಸುತ್ತಮುತ್ತಲ ನಗರ, ಪಟ್ಟಣಗಳಿಗೆ ಸಬ್ ಅರ್ಬನ್ ರೈಲು ಯೋಜನೆಯಡಿ ರೈಲು ಸಂಪರ್ಕ ಕಲ್ಪಿಸಲಾಗುತ್ತೆ. ಸಬ್ ಅರ್ಬನ್ ರೈಲು ಯೋಜನೆಯಿಂದ ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆಗೆ ಸ್ಪಲ್ಪ ಮಟ್ಟಿಗೆ ಮುಕ್ತಿ ಸಿಗಸಿಗಲಿದೆ.

ಮೆಜೆಸ್ಟಿಕ್, ದೇವನಹಳ್ಳಿ, ನೆಲಮಂಗಲ, ಬೈಯಪ್ಪನಹಳ್ಳಿ, ಚಿಕ್ಕಬಾಣಾವಾರ, ಕೆಂಗೇರಿ, ಕಂಟೋನ್ಮೆಂಟ್, ವೈಟ್ ಫೀಲ್ಡ್‌, ರಾಜನಕುಂಟೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಸಬ್ ಅರ್ಬನ್ ರೈಲುಗಳು ಸಂಚರಿಸಲಿವೆ. ಸಬ್ ಆರ್ಬನ್ ರೈಲಿಗೆ ನಾಲ್ಕು ಕಾರಿಡಾರ್​ಗಳೂ ಇರಲಿವೆ. ಸುಮಾರು 148 ಕಿಮೀ ಮಾರ್ಗದಲ್ಲಿ ಸಬ್ ಅರ್ಬನ್ ರೈಲುಗಳು ಸಂಚರಿಸಲಿವೆ. ಇದರಿಂದ ಬೆಂಗಳೂರಿನ ರಸ್ತೆಗಳ ಮೇಲಿನ ವಾಹನ ದಟ್ಟಣೆ ಕಡಿಮೆಯಾಗುವ ನಿರೀಕ್ಷೆ ಇದೆ.

ನಿನ್ನೆ ಕೇಂದ್ರದ ಹಣಕಾಸು ವ್ಯವಹಾರಗಳ ಸಂಪುಟ ಉಪಸಮಿತಿ ಸಭೆಯಲ್ಲಿ ಬೆಂಗಳೂರಿನ ಸಬ್ ಆರ್ಬನ್ ರೈಲು ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಆದ್ರೆ ಕೇಂದ್ರ ಸರ್ಕಾರ ಅಧಿಕೃತವಾಗಿ ಒಪ್ಪಿಗೆ ನೀಡಿರುವುದನ್ನು ಘೋಷಿಸಿಲ್ಲ. ಯಾಕಂದ್ರೆ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯೋಜನೆಗೆ ಒಪ್ಪಿಗೆ ನೀಡಿರುವುದನ್ನು ಘೋಷಿಸಿಲ್ಲ.

ಒಟ್ಟಿನಲ್ಲಿ ಬೆಂಗಳೂರಿಗೆ ಸಬ್ ಅರ್ಬನ್ ರೈಲು ಯೋಜನೆ ಜಾರಿಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಆದಷ್ಟು ಬೇಗ ಈ ಯೋಜನೆಗೆ ಕೇಂದ್ರ-ರಾಜ್ಯ ಸರ್ಕಾರಗಳು ಹಣ ನೀಡಿ ಯೋಜನೆ ಜಾರಿಗೊಳಿಸಲಿ. ಟ್ರಾಫಿಕ್ ಜಾಮ್ ನಿಂದ ನೊಂದು ಬೆಂದಿರುವ ಸಿಲಿಕಾನ್ ಸಿಟಿ ಜನರಿಗೆ ರಿಲೀಫ್ ಸಿಗಲಿ.