ರಿವರ್ಸ್ ಗೇರ್‌ನಲ್ಲಿದ್ದ ಕಾರು ಸ್ಟಾರ್ಟ್ ಮಾಡಿ ಮಹಿಳೆ ಸಾವು
ಬೆಂಗಳೂರು: ಕಾರ್ ಸ್ಟಾರ್ಟ್ ಮಾಡುವ ಮುನ್ನ ಗೇರ್ಗಳು ಸರಿಯಾಗಿವೆ ಎಂದು ಚೆಕ್ ಮಾಡಿಕೊಳ್ಳುವುದು ಅತಿ ಮುಖ್ಯ. ಯಾಕೆಂದರೆ ಇಲ್ಲೊಂದು ಮಹಿಳೆ ಇಂತ ತಪ್ಪು ಮಾಡಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕಾರು ರಿವರ್ಸ್ ಗೇರ್‌ನಲ್ಲಿರೋದನ್ನು ಗಮನಿಸದೆ ಸ್ಟಾರ್ಟ್ ಮಾಡಿ ಗಂಭೀರವಾಗಿ ಗಾಯಗೊಂಡು ಪ್ರಾಣ ಬಿಟ್ಟಿದ್ದಾರೆ. ನಂದಿನಿ ರಾವ್(45) ಮೃತ ದುರ್ದೈವಿ. ನಿನ್ನೆ ಮಧ್ಯಾಹ್ನ 2:50 ರ ಸಮಯದಲ್ಲಿ ನ್ಯೂ BEL ರಸ್ತೆಯ ಆರ್.ಕೆ.ಗಾರ್ಡನ್ ಬಳಿ ಈ ದುರಂತ ಸಂಭವಿಸಿದೆ. ಅಜಾಗರೂಕತೆಯಿಂದ ತಮ್ಮ ಕಾರಿನ ಡೋರ್ ತೆಗೆದು ಹೊರಗಡೆಯೇ ನಿಂತು ಕಾರು […]

ಬೆಂಗಳೂರು: ಕಾರ್ ಸ್ಟಾರ್ಟ್ ಮಾಡುವ ಮುನ್ನ ಗೇರ್ಗಳು ಸರಿಯಾಗಿವೆ ಎಂದು ಚೆಕ್ ಮಾಡಿಕೊಳ್ಳುವುದು ಅತಿ ಮುಖ್ಯ. ಯಾಕೆಂದರೆ ಇಲ್ಲೊಂದು ಮಹಿಳೆ ಇಂತ ತಪ್ಪು ಮಾಡಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕಾರು ರಿವರ್ಸ್ ಗೇರ್‌ನಲ್ಲಿರೋದನ್ನು ಗಮನಿಸದೆ ಸ್ಟಾರ್ಟ್ ಮಾಡಿ ಗಂಭೀರವಾಗಿ ಗಾಯಗೊಂಡು ಪ್ರಾಣ ಬಿಟ್ಟಿದ್ದಾರೆ. ನಂದಿನಿ ರಾವ್(45) ಮೃತ ದುರ್ದೈವಿ.
ನಿನ್ನೆ ಮಧ್ಯಾಹ್ನ 2:50 ರ ಸಮಯದಲ್ಲಿ ನ್ಯೂ BEL ರಸ್ತೆಯ ಆರ್.ಕೆ.ಗಾರ್ಡನ್ ಬಳಿ ಈ ದುರಂತ ಸಂಭವಿಸಿದೆ. ಅಜಾಗರೂಕತೆಯಿಂದ ತಮ್ಮ ಕಾರಿನ ಡೋರ್ ತೆಗೆದು ಹೊರಗಡೆಯೇ ನಿಂತು ಕಾರು ಸ್ಟಾರ್ಟ್ ಮಾಡಿದ್ದಾರೆ. ಈ ವೇಳೆ ಕಾರು ರಿವರ್ಸ್ ಗೇರ್ನಲ್ಲಿತ್ತು. ಹೀಗಾಗಿ ಹಿಮ್ಮುಖವಾಗಿ ಕಾರು ಚಲಿಸಿ ಕಾರಿನ ಬಾಗಿಲು, ಪಕ್ಕದಲ್ಲಿದ್ದ ಮರದ ಮಧ್ಯೆ ನಂದಿನಿ ಸಿಲುಕಿಗೊಂಡ್ರು. ಅವರಿಗೆ ಗಂಭೀರ ಗಾಯಗಳಾದವು. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ನಂದಿನಿ ರಾವ್ ಮೃತಪಟ್ಟಿದ್ದರು. ಸದಾಶಿವನಗರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Published On - 7:17 am, Thu, 8 October 20




