
ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯ ನಿರ್ಲಕ್ಷ್ಯತನ ಮತ್ತೊಮ್ಮೆ ಹೊರಬಿದ್ದಿದೆ. ಸ್ಟ್ರೆಚರ್ ಇಲ್ಲದಕ್ಕೆ ಆಕ್ಸಿಜನ್ ಅಳವಡಿಸಿದ ಮಗುವನ್ನ ಕೈಯಲ್ಲಿ ಹಿಡಿದುಕೊಂಡೇ ಸಾಗಿದ್ದಾರೆ. ಮಗುವನ್ನ ಮಕ್ಕಳ ವಾರ್ಡ್ವರೆಗೆ ತನ್ನ ಎರಡೂ ಕೈಯಲ್ಲಿ ಹೊತ್ತುಕೊಂಡು ತಂದೆ ಸಾಗಿದ್ದಾರೆ.
ಕಿಮ್ಸ್ ಆಸ್ಪತ್ರೆಯಲ್ಲಿ ನಡೆದ ಮನಕಲಕುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಕಿಮ್ಸ್ ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪದೇ ಪದೇ ಈ ರೀತಿ ನಿರ್ಲಕ್ಷ್ಯ ಆಗುತ್ತಿದ್ರೂ ಕಿಮ್ಸ್ ಸಿಬ್ಬಂದಿ ಎಚ್ಚೆತ್ತುಕೊಂಡಿಲ್ಲ.
Published On - 11:07 am, Sat, 30 May 20