ಯಾರೂ ಇಲ್ಲದ ಕಾರು ಕಲ್ಯಾಣಿಯಲ್ಲಿ ಮುಳುಗಿದ್ದು ಹೇಗೆ? ಬಾಗಲೂರು ಪೊಲೀಸರಿಗೆ ತಲೆನೋವು ಶುರು
ದೇವನಹಳ್ಳಿ: ರಸ್ತೆ ಬದಿಯ ಕಲ್ಯಾಣಿಯಲ್ಲಿ ಕಾರು ಮುಳುಗಿದ್ದು, ಪೊಲೀಸರು ಹೊರತೆಗೆದಿದ್ದಾರೆ. ಕ್ರೇನ್ ಮೂಲಕ ನೀರಲ್ಲಿದ್ದ ಕಾರನ್ನು ಹೊರತೆಗೆಯಲಾಗಿದೆ. ಕುತೂಹಲದ ಸಂಗತಿಯೆಂದ್ರೆ ಕಾರಿನಲ್ಲಿ ಯಾರೂ ಇರಲಿಲ್ಲ. ಬೆಂಗಳೂರು ಉತ್ತರ ತಾಲೂಕಿನ ಬಾಗಲೂರಿನಲ್ಲಿ ಘಟನೆ ನಡೆದಿದೆ. ಇದು ಮಹಾರಾಷ್ಟ್ರ ರಿಜಿಸ್ಟ್ರೇಷನ್ ಸಂಖ್ಯೆಯ ವರ್ನಾ ಕಾರು. ಚಾಲಕನ ನಿಯಂತ್ರಣ ತಪ್ಪಿ ಕಳೆದ ರಾತ್ರಿ ಅಪಘಾತವಾಗಿರುವ ಶಂಕೆಯಿದೆ. ಇಡೀ ಕಾರು ಕಲ್ಯಾಣಿಯಲ್ಲಿ ಮುಳುಗಡೆಯಾಗಿತ್ತು. ಕಾರನ್ನ ವಶಕ್ಕೆ ಪಡೆದು ಬಾಗಲೂರು ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ. ಇಂದು ಬೆಳಗ್ಗೆ ವಾಕಿಂಗ್ ಮಾಡ್ತಿದ್ದವರು ಕಾರನ್ನ ಕಂಡು […]
ದೇವನಹಳ್ಳಿ: ರಸ್ತೆ ಬದಿಯ ಕಲ್ಯಾಣಿಯಲ್ಲಿ ಕಾರು ಮುಳುಗಿದ್ದು, ಪೊಲೀಸರು ಹೊರತೆಗೆದಿದ್ದಾರೆ. ಕ್ರೇನ್ ಮೂಲಕ ನೀರಲ್ಲಿದ್ದ ಕಾರನ್ನು ಹೊರತೆಗೆಯಲಾಗಿದೆ. ಕುತೂಹಲದ ಸಂಗತಿಯೆಂದ್ರೆ ಕಾರಿನಲ್ಲಿ ಯಾರೂ ಇರಲಿಲ್ಲ. ಬೆಂಗಳೂರು ಉತ್ತರ ತಾಲೂಕಿನ ಬಾಗಲೂರಿನಲ್ಲಿ ಘಟನೆ ನಡೆದಿದೆ.
ಇದು ಮಹಾರಾಷ್ಟ್ರ ರಿಜಿಸ್ಟ್ರೇಷನ್ ಸಂಖ್ಯೆಯ ವರ್ನಾ ಕಾರು. ಚಾಲಕನ ನಿಯಂತ್ರಣ ತಪ್ಪಿ ಕಳೆದ ರಾತ್ರಿ ಅಪಘಾತವಾಗಿರುವ ಶಂಕೆಯಿದೆ. ಇಡೀ ಕಾರು ಕಲ್ಯಾಣಿಯಲ್ಲಿ ಮುಳುಗಡೆಯಾಗಿತ್ತು. ಕಾರನ್ನ ವಶಕ್ಕೆ ಪಡೆದು ಬಾಗಲೂರು ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ.
ಇಂದು ಬೆಳಗ್ಗೆ ವಾಕಿಂಗ್ ಮಾಡ್ತಿದ್ದವರು ಕಾರನ್ನ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ಬಿದ್ದ ಮಳೆಯಿಂದ ಕಲ್ಯಾಣಿಯಲ್ಲಿ ನೀರು ತುಂಬಿತ್ತು. ಯಾರೂ ಇಲ್ಲದ ಕಾರು ಕಲ್ಯಾಣಿಯಲ್ಲಿ ಮುಳುಗಿದ್ದು ಹೇಗೆ? ಡ್ರೈವರ್ ಆದರೂ ಏನಾದ? ಈ ಕಾರು ಯಾರಿಗೆ ಸೇರಿದ್ದು ಎಬ ಪ್ರರ್ಶನೆಗಳನ್ನು ಮುಂದಿಟ್ಟುಕೊಂಡು ಪೊಲೀಸರು ತನಿಖೆ ಶುರು ಮಾಡಿದ್ದಾರೆ.
Published On - 10:52 am, Sat, 30 May 20