15 ದಿನಗಳಿಂದ ಕಾಫಿ ತೋಟಕ್ಕೆ ಬರುತ್ತಿದ್ದ ಕಿಂಗ್ ಕೋಬ್ರಾ ಕೊನೆಗೂ ಸೆರೆ!

ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ತೆಕ್ಕೂರು ಗ್ರಾಮದಲ್ಲಿ ಬೃಹತ್ ಗಾತ್ರದ ಕಿಂಗ್ ಕೋಬ್ರಾ ಕಾಣಿಸಿಕೊಂಡಿದೆ. ಮಹೇಶ್ ಎಂಬವರ ಕಾಫಿ ತೋಟದಲ್ಲಿ ಕಿಂಗ್ ಕೋಬ್ರಾ ಪತ್ತೆಯಾಗಿದ್ದು, ಕಾಳಿಂಗ ಸರ್ಪವನ್ನು ಕಂಡು ಅಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ. ಕಳೆದ 15ದಿನಗಳಿಂದ ಕಾಫಿ ತೋಟಕ್ಕೆ ಕಾಳಿಂಗ ಸರ್ಪ ಬರುತ್ತಿತ್ತು. ಕಾಳಿಂಗ ಸರ್ಪವನ್ನು ಕಂಡು ಕಾರ್ಮಿಕರು ಭಯಭೀತರಾಗಿದ್ದರು. ಹೀಗಾಗಿ ಉರಗ ಪ್ರೇಮಿ ಸ್ನೇಕ್ ಅರ್ಜುನ್ ಎಂಬುವರು ಸ್ಥಳಕ್ಕೆ ಆಗಮಿಸಿ ಕಾಳಿಂಗ ಸರ್ಪವನ್ನು ಸೆರೆಹಿಡಿದಿದ್ದಾರೆ. ಬಳಿಕ ಸುರಕ್ಷಿತವಾಗಿ ಕಾಳಿಂಗ ಸರ್ಪವನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ.

15 ದಿನಗಳಿಂದ ಕಾಫಿ ತೋಟಕ್ಕೆ ಬರುತ್ತಿದ್ದ ಕಿಂಗ್ ಕೋಬ್ರಾ ಕೊನೆಗೂ ಸೆರೆ!
ಸಾಧು ಶ್ರೀನಾಥ್​

Updated on: Feb 18, 2020 | 2:40 PM

ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ತೆಕ್ಕೂರು ಗ್ರಾಮದಲ್ಲಿ ಬೃಹತ್ ಗಾತ್ರದ ಕಿಂಗ್ ಕೋಬ್ರಾ ಕಾಣಿಸಿಕೊಂಡಿದೆ. ಮಹೇಶ್ ಎಂಬವರ ಕಾಫಿ ತೋಟದಲ್ಲಿ ಕಿಂಗ್ ಕೋಬ್ರಾ ಪತ್ತೆಯಾಗಿದ್ದು, ಕಾಳಿಂಗ ಸರ್ಪವನ್ನು ಕಂಡು ಅಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ.

ಕಳೆದ 15ದಿನಗಳಿಂದ ಕಾಫಿ ತೋಟಕ್ಕೆ ಕಾಳಿಂಗ ಸರ್ಪ ಬರುತ್ತಿತ್ತು. ಕಾಳಿಂಗ ಸರ್ಪವನ್ನು ಕಂಡು ಕಾರ್ಮಿಕರು ಭಯಭೀತರಾಗಿದ್ದರು. ಹೀಗಾಗಿ ಉರಗ ಪ್ರೇಮಿ ಸ್ನೇಕ್ ಅರ್ಜುನ್ ಎಂಬುವರು ಸ್ಥಳಕ್ಕೆ ಆಗಮಿಸಿ ಕಾಳಿಂಗ ಸರ್ಪವನ್ನು ಸೆರೆಹಿಡಿದಿದ್ದಾರೆ. ಬಳಿಕ ಸುರಕ್ಷಿತವಾಗಿ ಕಾಳಿಂಗ ಸರ್ಪವನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ.




Published On - 2:08 pm, Tue, 18 February 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us