AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇವರಿಬ್ಬರ ಅಮೋಘ ಸಾಧನೆಗೆ ಸ್ಯಾಂಡಲ್​ವುಡ್​ ಫಿದಾ! ಟೈಟಲ್ ನೋಂದಣಿಯಾಯ್ತು!

ಮಂಗಳೂರು: ಸದ್ಯ ಕಂಬಳ ವಿಶ್ವಮಟ್ಟದಲ್ಲಿ ಹೆಸರು ಮಾಡ್ತಿದೆ. ಈಗ ಅದೇ ಕಂಬಳ ಅನ್ನೋ ಹೆಸರನ್ನ ಬಳಸಿ ಸಿನಿಮಾ ಮಾಡೋಕೆ ಕನ್ನಡ ಚಿತ್ರರಂಗ ಮುಂದಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಮೂಲದ ನಿರ್ಮಾಪಕ ಲೋಕೇಶ್ ಶೆಟ್ಟಿ ಕಂಬಳ ಸಿನಿಮಾ ಟೈಟಲನ್ನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ವಿಶ್ವಮಟ್ಟದಲ್ಲಿ ಹೆಸರು ಪಡೆದಿರುವ ಕರಾವಳಿ ಕ್ರೀಡೆ ಕಂಬಳ ಹೆಸರಿನ ಸಿನಿಮಾ ನಿಖಿಲ್ ಮಂಜು ನಿರ್ದೇಶನದಲ್ಲಿ ಸೆಟ್ಟೇರಲಿದೆ. 10,500 ರೂಪಾಯಿ ಕಟ್ಟಿ ಟೈಟಲ್ ನೋಂದಣಿ ಮಾಡಿಸಿಕೊಂಡಿದ್ದಾರೆ. ಕಂಬಳ ವೀರರ ಪಾತ್ರದಲ್ಲಿ ನಟಿಸಲು […]

ಇವರಿಬ್ಬರ ಅಮೋಘ ಸಾಧನೆಗೆ ಸ್ಯಾಂಡಲ್​ವುಡ್​ ಫಿದಾ! ಟೈಟಲ್ ನೋಂದಣಿಯಾಯ್ತು!
ಸಾಧು ಶ್ರೀನಾಥ್​
|

Updated on: Feb 18, 2020 | 12:02 PM

Share

ಮಂಗಳೂರು: ಸದ್ಯ ಕಂಬಳ ವಿಶ್ವಮಟ್ಟದಲ್ಲಿ ಹೆಸರು ಮಾಡ್ತಿದೆ. ಈಗ ಅದೇ ಕಂಬಳ ಅನ್ನೋ ಹೆಸರನ್ನ ಬಳಸಿ ಸಿನಿಮಾ ಮಾಡೋಕೆ ಕನ್ನಡ ಚಿತ್ರರಂಗ ಮುಂದಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಮೂಲದ ನಿರ್ಮಾಪಕ ಲೋಕೇಶ್ ಶೆಟ್ಟಿ ಕಂಬಳ ಸಿನಿಮಾ ಟೈಟಲನ್ನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ವಿಶ್ವಮಟ್ಟದಲ್ಲಿ ಹೆಸರು ಪಡೆದಿರುವ ಕರಾವಳಿ ಕ್ರೀಡೆ ಕಂಬಳ ಹೆಸರಿನ ಸಿನಿಮಾ ನಿಖಿಲ್ ಮಂಜು ನಿರ್ದೇಶನದಲ್ಲಿ ಸೆಟ್ಟೇರಲಿದೆ. 10,500 ರೂಪಾಯಿ ಕಟ್ಟಿ ಟೈಟಲ್ ನೋಂದಣಿ ಮಾಡಿಸಿಕೊಂಡಿದ್ದಾರೆ.

ಕಂಬಳ ವೀರರ ಪಾತ್ರದಲ್ಲಿ ನಟಿಸಲು ಹೀರೋಗಳಿಗಾಗಿ ಹುಡುಕಾಟ ಶ್ರೀನಿವಾಸ ಗೌಡ ಮತ್ತು ನಿಶಾಂತ್ ಶೆಟ್ಟಿ ದಾಖಲೆ ಹಿನ್ನೆಲೆ ಅದೇ ಮಾದರಿಯಲ್ಲಿ ಈ ಚಿತ್ರ ತಯಾರಾಗಲಿದ್ದು, ಮುಂದಿನ ವಾರದಿಂದಲೇ ಮಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಕಂಬಳ ವೀರರಿಬ್ಬರ ಪಾತ್ರದಲ್ಲಿ ನಟಿಸಲು ಹೀರೋಗಳಿಗಾಗಿ ಹುಡುಕಾಟದಲ್ಲಿದ್ದಾರೆ. ಇನ್ನು ಈ ಚಿತ್ರ ಕನ್ನಡ ಮತ್ತು ತುಳು ಭಾಷೆಯಲ್ಲಿ ಬರಲಿದೆ.