ಬೆಂಗಳೂರು: ಸಾರಿಗೆ ನೌಕರರ ಹೋರಾಟದ ಗೌರವಾಧ್ಯಕ್ಷರಾಗಿ ಕೋಡಿಹಳ್ಳಿ ಚಂದ್ರಶೇಖರ್ರನ್ನು ಆಯ್ಕೆ ಮಾಡಲಾಗಿದೆ. ಕೋಡಿಹಳ್ಳಿ ಚಂದ್ರಶೇಖರ್‌ರನ್ನ ನೌಕರರು ಆಯ್ಕೆ ಮಾಡಿದ್ದಾರೆ. ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ನೌಕರರು ಕೋಡಿಹಳ್ಳಿ ಚಂದ್ರಶೇಖರ್‌ರನ್ನ ಆಯ್ಕೆ ಮಾಡಿದ್ದಾರೆ.
ಈ ನಡುವೆ, ಸಿಎಂ ಮಾಧ್ಯಮ ಪ್ರಕಟಣೆಗೆ ಚಂದ್ರಶೇಖರ್ ತಿರುಗೇಟು ಕೊಟ್ಟಿದ್ದು ಸಾರಿಗೆ ಸಿಬ್ಬಂದಿ ಎತ್ತಿಕಟ್ಟುವುದು ಅಂದ್ರೇನು? ಎಂದು ಸಿಎಂಗೆ ನೇರ ಪ್ರಶ್ನೆ ಹಾಕಿದ್ದಾರೆ. ಸಿಎಂ ಯಾವರ್ಥದಲ್ಲಿ ಪ್ರಕಟಣೆ ಹೊರಡಿಸಿದ್ದಾರೆಂದು ಹೇಳಲಿ. 4 ನಿಗಮದ ಸಿಬ್ಬಂದಿ ಸ್ವಯಂಪ್ರೇರಿತವಾಗಿ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಯಾರನ್ನೂ ಬಲವಂತವಾಗಿ ಮುಷ್ಕರಕ್ಕೆ ಕರೆದುಕೊಂಡು ಬಂದಿಲ್ಲ. ಯಾರೊಬ್ಬರಿಗೂ ಕರಪತ್ರ ಕೊಟ್ಟು ಮುಷ್ಕರಕ್ಕೆ ಕರೆತಂದಿಲ್ಲ ಎಂದು ಹೇಳಿದರು.
ನಿಮ್ಮ ಮುಂದೆ ನೌಕರರು ಇಟ್ಟಿರುವ ವಾದ ಸಲ್ಲದ ವಾದವೇ? ಎಂದು ಸಿಎಂ ಬಿಎಸ್ವೈಗೆ ಕೋಡಿಹಳ್ಳಿ ಚಂದ್ರಶೇಖರ್ ನೇರ ಪ್ರಶ್ನೆ ಹಾಕಿದ್ದಾರೆ. ಜೊತೆಗೆ, ಮುಖ್ಯಮಂತ್ರಿಗಳು ಯಾವ ಅರ್ಥದಲ್ಲಿ ಪ್ರಸ್ತಾಪ ಮಾಡಿದರು. ಅವರು ನಿಮ್ಮ ಕಾರ್ಯಕರ್ತರೇ? ಎಂದು ಸಿಎಂ ಸ್ಪಷ್ಟ ಪಡಿಸಬೇಕು. ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಸಿಎಂ ಕಡೆಯಿಂದ ಬಂದಿರುವುದು ಹೊಸ ವಿಷಯ. ಇದನ್ನ ಕೂಡ ಈಗ ಚರ್ಚೆ ಮಾಡ್ತಿವಿ. ಪ್ರಾರಂಭದ ಮೊದಲ ದಿನದಿಂದ ಈ ಬಗ್ಗೆ ಮಾತಾಡಿದ್ದೀವಿ. ಸಚಿವರು ಬಂದು ಮನವಿ ಪಡೆದಿಲ್ಲ. ನೀವು ಬಂದಿಲ್ಲವಾದರೂ ಬೇರೆ ಸಚಿವರನ್ನ ಕೂಡ ಕಳಿಸಿಲ್ಲ. ಸರ್ಕಾರ ಇದನ್ನ ಕನ್ಫ್ಯೂಸ್ ಮಾಡಿ ದಾರಿ ತಪ್ಪಿಸುವ ಕೆಲಸ ಮಾಡ್ತಿದೆ. ಅವರು ಈವರೆಗೆ ನಮ್ಮನ್ನ ಕರೆದಿಲ್ಲ. ನಾವು ಎಲ್ಲಿ ಹೋಗಿ ಯಾರನ್ನ ಭೇಟಿಮಾಡಿ ಚರ್ಚೆ ಮಾಡಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಸಾರಿಗೆ ನೌಕರರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಕರೆ: ಮುಷ್ಕರ ಬಿಟ್ಟು ಕೆಲಸಕ್ಕೆ ಮರಳಿದ ನಂತರ ಮಾತುಕತೆ
Published On - 3:41 pm, Sat, 12 December 20