AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಮ್ಮಿಡಿಯಟ್ ಸಭೆ ಕರೆದು.. ಸಮಸ್ಯೆ ಇತ್ಯರ್ಥ ಮಾಡ್ರಿ.. ಸಚಿವ ಸವದಿಗೆ ಸಿದ್ದರಾಮಯ್ಯ ಮೊಬೈಲ್​ ಕರೆ

ಇಂದು ಸ್ವಕ್ಷೇತ್ರ ಬಾದಾಮಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಸಂಬಂಧ ಸಿದ್ದರಾಮಯ್ಯ ಕರೆದಿದ್ದ ಕಾರ್ಯಕರ್ತರ ಸಭೆಗೆ ಸಾರಿಗೆ ನೌಕರರ ಮುಷ್ಕರದ ಬಿಸಿ ತಟ್ಟಿದೆ. ಬಸ್ ಇಲ್ಲದ ಕಾರಣ ಕಡಿಮೆ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ಬೆಳಗ್ಗೆ 11 ಗಂಟೆಗೆ ಶುರುವಾಗಬೇಕಿದ್ದ ಸಭೆ ಎಷ್ಟು ಹೊತ್ತಾದರೂ ಪ್ರಾರಂಭವಾಗಿಲ್ಲ

ಇಮ್ಮಿಡಿಯಟ್ ಸಭೆ ಕರೆದು.. ಸಮಸ್ಯೆ ಇತ್ಯರ್ಥ ಮಾಡ್ರಿ.. ಸಚಿವ ಸವದಿಗೆ ಸಿದ್ದರಾಮಯ್ಯ ಮೊಬೈಲ್​ ಕರೆ
ಬಾದಾಮಿಯಲ್ಲಿ ಸಿದ್ದರಾಮಯ್ಯ..
Lakshmi Hegde
| Updated By: ಸಾಧು ಶ್ರೀನಾಥ್​|

Updated on:Dec 12, 2020 | 3:14 PM

Share

ಬಾಗಲಕೋಟೆ:  ಕಾರ್ಯಕರ್ತರ ಸಭೆ ನಿಮಿತ್ತ ಬದಾಮಿಗೆ ಆಗಮಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಸ್​ ನಿಲ್ದಾಣದಲ್ಲಿ ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ನೀಡಿ, ಅವರ ಮನವಿ ಸ್ವೀಕರಿಸಿದರು. ನಂತರ  ಸಭೆಯಲ್ಲಿ ವೇದಿಕೆ ಮೇಲೆ ಕುಳಿತು, ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ಕರೆ ಮಾಡಿ, ತಕ್ಷಣವೇ ಸಭೆ ಕರೆದು ಸಮಸ್ಯೆ ಇತ್ಯರ್ಥ ಮಾಡಿ ಎಂದು ಹೇಳಿದರು.

ನಮಗೂ ನಿಮ್ಮ ಕಷ್ಟ ಅರ್ಥ ಆಗುತ್ತದೆ. ಆದರೆ ಹೀಗೆ ಬಿಟ್ಟರೆ ಜನರಿಗೆ ತೊಂದರೆ ಆಗುತ್ತದೆ. ತಕ್ಷಣ ಸಭೆ ಕರೆದು ಎಲ್ಲರೂ ಕೂಡಿ ಮಾತನಾಡಿ. ಸಾರಿಗೆ ನೌಕರರೊಂದಿಗೆ ಚರ್ಚಿಸಿ ಚಳವಳಿ ಕೈ ಬಿಡುವಂತೆ ಮನವಿ ಮಾಡಿ ಎಂದು ಸವದಿಗೆ ಸಲಹೆ ನೀಡಿದ್ದಾರೆ.

ಬೇಡಿಕೆ ಈಡೇರಿಸಲಿ ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ಸರ್ಕಾರ ನೌಕರರನ್ನು ಕರೆದು ಮಾತನಾಡಬೇಕು. ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೇಳಿದರು. ಈ ಸಾರಿಗೆ ವ್ಯವಸ್ಥೆ ಸಂಪೂರ್ಣ ನಿಂತು ಹೋಗಿದೆ. ಎಸ್ಮಾ ಜಾರಿ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಬಸ್ ಇಲ್ಲದೆ ಪರದಾಡುತ್ತಿರುವ ಸಾರ್ವಜನಿಕರು ಏನು ಮಾಡಬೇಕು ಎಂದು ಪ್ರಶ್ನಿಸಿದರು?

ಸಭೆಗೆ ತಟ್ಟಿದ ಬಂದ್ ಬಿಸಿ ಬದಾಮಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಸಂಬಂಧ ಸಿದ್ದರಾಮಯ್ಯ ಕರೆದಿದ್ದ ಕಾರ್ಯಕರ್ತರ ಸಭೆಗೆ ಸಾರಿಗೆ ನೌಕರರ ಮುಷ್ಕರದ ಬಿಸಿ ತಟ್ಟಿದೆ. ಬಸ್ ಇಲ್ಲದ ಕಾರಣ ಕಡಿಮೆ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ಬೆಳಗ್ಗೆ 11 ಗಂಟೆಗೆ ಶುರುವಾಗಬೇಕಿದ್ದ ಸಭೆ ಎಷ್ಟು ಹೊತ್ತಾದರೂ ಪ್ರಾರಂಭವಾಗಿಲ್ಲ. ಈ ವೇಳೆ ಬಸ್​ ಇಲ್ಲದ ಕಾರಣ ನಮ್ಮ ಪಕ್ಷದ ಕಾರ್ಯಕರ್ತರೂ ಸಭೆಗೆ ಬಂದಿಲ್ಲ ಎಂದು ಸಿದ್ದರಾಮಯ್ಯ ನಗೆ ಚಟಾಕಿ ಹಾರಿಸಿದರು.

ಸಾರಿಗೆ ನೌಕರರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಕರೆ: ಮುಷ್ಕರ ಬಿಟ್ಟು ಕೆಲಸಕ್ಕೆ ಮರಳಿದ ನಂತರ ಮಾತುಕತೆ

Published On - 3:13 pm, Sat, 12 December 20