AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರ ಪೊಲೀಸರ ಕನ್ನಡಾಭಿಮಾನ: ಕ್ವಾಟ್ರಸ್​ಗಳಲ್ಲಿ ರಾರಾಜಿಸುತ್ತಿದೆ ಕನ್ನಡ ಕವಿಗಳ ರಂಗು

ಕೋಲಾರ: ನವೆಂಬರ್ ತಿಂಗಳು ಬಂದರೆ ಸಾಕು ಎಲ್ಲರಲ್ಲೂ ಕನ್ನಡ ಮೇಲಿನ ಪ್ರೀತಿ ಜಾಗೃತವಾಗುತ್ತೆ. ಕೆಲವರು ಅದನ್ನೇ ತೋರಿಕೆಗಾಗಿ ಬಂಡವಾಳ ಮಾಡಿಕೊಂಡರೆ ಮತ್ತೆ ಕೆಲವರು ನಿಷ್ಟೆಯಿಂದ ಕನ್ನಡಾಂಬೆಯ ಪೂಜೆ ಮಾಡುವವರೂ ಇದ್ದಾರೆ. ಇನ್ನು ಕೆಲವರು ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಕನ್ನಡಕ್ಕಾಗಿ ಎಲ್ಲವೂ ಅರ್ಪಣೆ ಎಂದು ತಮ್ಮ ಕೊನೆ ಉಸಿರಿರುವ ವರೆಗೂ ಸೇವೆ ಮಾಡಿ ಕನ್ನಡಾಂಬೆಯ ಮಡಿಲು ಸೇರ್ತಾರೆ. ಇಂಥ ಮನಸ್ಥಿತಿಗಳ ನಡುವೆ ಕೋಲಾರದಲ್ಲಿ ಪೊಲೀಸರಲ್ಲೊಂದು ವಿಭಿನ್ನ ಕನ್ನಡಾಭಿಮಾನ ಹೊರ ಬಂದಿದೆ. ಕನ್ನಡ ರಾಜ್ಯೋತ್ಸವದಂದು ಮಾತ್ರ ಅಬ್ಬರಿಸಿ ಮತ್ತೊಂದು […]

ಕೋಲಾರ ಪೊಲೀಸರ ಕನ್ನಡಾಭಿಮಾನ: ಕ್ವಾಟ್ರಸ್​ಗಳಲ್ಲಿ ರಾರಾಜಿಸುತ್ತಿದೆ ಕನ್ನಡ ಕವಿಗಳ ರಂಗು
Follow us
ಆಯೇಷಾ ಬಾನು
|

Updated on:Nov 23, 2020 | 1:03 PM

ಕೋಲಾರ: ನವೆಂಬರ್ ತಿಂಗಳು ಬಂದರೆ ಸಾಕು ಎಲ್ಲರಲ್ಲೂ ಕನ್ನಡ ಮೇಲಿನ ಪ್ರೀತಿ ಜಾಗೃತವಾಗುತ್ತೆ. ಕೆಲವರು ಅದನ್ನೇ ತೋರಿಕೆಗಾಗಿ ಬಂಡವಾಳ ಮಾಡಿಕೊಂಡರೆ ಮತ್ತೆ ಕೆಲವರು ನಿಷ್ಟೆಯಿಂದ ಕನ್ನಡಾಂಬೆಯ ಪೂಜೆ ಮಾಡುವವರೂ ಇದ್ದಾರೆ. ಇನ್ನು ಕೆಲವರು ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಕನ್ನಡಕ್ಕಾಗಿ ಎಲ್ಲವೂ ಅರ್ಪಣೆ ಎಂದು ತಮ್ಮ ಕೊನೆ ಉಸಿರಿರುವ ವರೆಗೂ ಸೇವೆ ಮಾಡಿ ಕನ್ನಡಾಂಬೆಯ ಮಡಿಲು ಸೇರ್ತಾರೆ. ಇಂಥ ಮನಸ್ಥಿತಿಗಳ ನಡುವೆ ಕೋಲಾರದಲ್ಲಿ ಪೊಲೀಸರಲ್ಲೊಂದು ವಿಭಿನ್ನ ಕನ್ನಡಾಭಿಮಾನ ಹೊರ ಬಂದಿದೆ.

ಕನ್ನಡ ರಾಜ್ಯೋತ್ಸವದಂದು ಮಾತ್ರ ಅಬ್ಬರಿಸಿ ಮತ್ತೊಂದು ವರ್ಷ ಸುಮ್ಮನಾಗುವ ಮಂದಿಯೇ ಹೆಚ್ಚಾಗಿರುವವರ ನಡುವೆ ನಗರದ ಪೊಲೀಸ್ ಇಲಾಖೆಯ ವಸತಿಗೃಹಗಳಲ್ಲಿ ಸದಾ ಕನ್ನಡದ ಸಾಹಿತ್ಯ ಪರಂಪರೆಯನ್ನು ಶಾಶ್ವತಗೊಳಿಸುವ ಕೆಲಸ ನಡೆದಿದೆ. ನಗರದ ಮೆಕ್ಕೆ ವೃತ್ತದ ಸಮೀಪದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎದುರು ಹೊಸದಾಗಿ ನಿರ್ಮಿಸಿರುವ ಪೊಲೀಸ್ ವಸತಿ ಗೃಹಗಳ ಕಾಂಪ್ಲೆಕ್ಸ್‌ನ ಫ್ಲಾಟ್‌ಗಳಿಗೆ ವಿವಿಧ ಕನ್ನಡ ಕವಿಗಳ ಹೆಸರುಗಳನ್ನು ನಾಮಕರಣ ಮಾಡಲಾಗಿದೆ. ಹಾಗೂ ಆ ಮನೆಗಳಲ್ಲಿ ವಾಸಿಸುವವರಿಗೆ ಮತ್ತು ಆ ಭಾಗದಲ್ಲಿ ಸಂಚರಿಸುವವರಲ್ಲಿ ಕನ್ನಡದ ಕಂಪು ಬಿತ್ತರಿಸುವ ಕೆಲಸ ಆಗಿದೆ.

ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ್ದ ಹಳೆಯ ಹಂಚಿನ ಮನೆಗಳನ್ನು ಕೆಡವಿದ ಪೊಲೀಸ್ ಇಲಾಖೆಯು ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಪೊಲೀಸ್ ಪೇದೆಗಳಿಗೆ ಅತ್ಯಾಧುನಿಕ ರೀತಿಯಲ್ಲಿ ವಸತಿ ಗೃಹಗಳನ್ನು ನಿರ್ಮಿಸಿದೆ. ಈ ವಸತಿ ಸಮುಚ್ಚಯದಲ್ಲಿ ಕನ್ನಡದ ಆದಿಕವಿಗಳು, ರಾಷ್ಟ್ರಕವಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಬರೆಸಲಾಗಿದೆ.

ಆದಿಕವಿ ರನ್ನ ಹಾಗೂ ಪಂಪನ ಹೆಸರಿನ ಜತೆಗೆ ವಿ.ಕೃ.ಗೋಕಾಕ್, ಕುವೆಂಪು, ಡಿ.ವಿ.ಜಿ, ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ್​ ಅಯ್ಯಂಗಾರ್, ಶಿವರಾಮ ಕಾರಂತ, ಪು.ತಿ.ನರಸಿಂಹಾಚಾರ್, ಚಂದ್ರಶೇಖರ್ ಕಂಬಾರ, ಗಿರೀಶ್ ಕಾರ್ನಾಡ್, ಯು.ಆರ್.ಅನಂತಮೂರ್ತಿ ಅವರುಗಳ ಹೆಸರುಗಳನ್ನು ನಾಮಕರಣ ಮಾಡುವ ಮೂಲಕ ಕನ್ನಡದ ಸಾಹಿತ್ಯ ಪರಂಪರೆಯನ್ನು ನೆನಪಿಸುವ ಕೆಲಸ ಮಾಡಲಾಗಿದೆ.

Published On - 8:17 am, Fri, 6 November 20

ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಸ್ಥಳೀಯ ನಾಯಕರ ನೂಕುನುಗ್ಗಲು
ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಸ್ಥಳೀಯ ನಾಯಕರ ನೂಕುನುಗ್ಗಲು
ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಒಮ್ಮೆ ಎದೆ ಮುಟ್ಟಿಕೊಳ್ಳುವುದು ವಿಡಿಯೋದಲ್ಲಿ ಕಾಣುತ್ತದೆ
ರಾಕೇಶ್ ಒಮ್ಮೆ ಎದೆ ಮುಟ್ಟಿಕೊಳ್ಳುವುದು ವಿಡಿಯೋದಲ್ಲಿ ಕಾಣುತ್ತದೆ
ಪೊಲೀಸರು, ಡಿ-ಸ್ವ್ಯಾಟ್ ಪಡೆಯಿಂದ ಹುಡುಕಾಟ, ಡಿಸಿಪಿ ಸ್ಥಳದಲ್ಲಿ ಮೊಕ್ಕಾಂ
ಪೊಲೀಸರು, ಡಿ-ಸ್ವ್ಯಾಟ್ ಪಡೆಯಿಂದ ಹುಡುಕಾಟ, ಡಿಸಿಪಿ ಸ್ಥಳದಲ್ಲಿ ಮೊಕ್ಕಾಂ
ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​
ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​
ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಎದೆ ಹಿಡಿದುಕೊಳ್ಳುತ್ತಿದ್ದ ರಾಕೇಶ್ ಪೂಜಾರಿ
ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಎದೆ ಹಿಡಿದುಕೊಳ್ಳುತ್ತಿದ್ದ ರಾಕೇಶ್ ಪೂಜಾರಿ
ದೇಶದ ಸೈನಿಕರಿಗೆ ಕರ್ತವ್ಯ ಮುಖ್ಯ; ವೈಯಕ್ತಿಕ ಸಂಬಂಧಗಳು, ಕೆಲಸಗಳಲ್ಲ
ದೇಶದ ಸೈನಿಕರಿಗೆ ಕರ್ತವ್ಯ ಮುಖ್ಯ; ವೈಯಕ್ತಿಕ ಸಂಬಂಧಗಳು, ಕೆಲಸಗಳಲ್ಲ