
ಬೆಂಗಳೂರು: ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಹಿಂಸಾಚಾರ ಪ್ರಕರಣದಲ್ಲಿ ಕಾಂಗ್ರೆಸ್ ಎಂಎಲ್ಎ ಅಖಂಡ ಶ್ರೀನಿವಾಸ ಮೂರ್ತಿ ಅವರ ಆಸ್ತಿಪಾಸ್ತಿಗೆ ಅಪಾರ ಹಾನಿಯುಂಟಾಗಿತ್ತು. ಹೀಗಾಗಿ ಈ ದಾಳಿಯಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಕೈವಾಡವಿದೆಯೆಂದು ಅಖಂಡ ಶ್ರೀನಿವಾಸ ಮೂರ್ತಿ ಆರೋಪ ಮಾಡಿದ್ದರು. ಜೊತೆಗೆ ಸಂಪತ್ ರಾಜ್ ಮೇಲೆ ಪಕ್ಷದಿಂದ ಕ್ರಮ ಆಗಬೇಕು ಎಂದು ಅಖಂಡ ಶ್ರೀನಿವಾಸ ಮೂರ್ತಿ ಒತ್ತಾಯ ಮಾಡಿದ್ದರು.
ಅಖಂಡ ಶ್ರೀನಿವಾಸ ಮೂರ್ತಿ ಅವರ ವೈಯಕ್ತಿಕ ಹೇಳಿಕೆಗೆ ನಾನು ಪ್ರತಿಕ್ರಿಯೆ ಮಾಡಲ್ಲ. ಅಲ್ಲದೆ ಕಾನೂನಿಗಿಂತ ಸಂಪತ್ ರಾಜ್ ಮೇಲಲ್ಲ. ಜೊತೆಗೆ ಡಿಕೆಶಿ ಕೂಡ ಮೇಲಲ್ಲ. ಕಾನೂನು ದುರುಪಯೋಗ ಮಾಡಿಕೊಳ್ಳುವ ಒಂದು ವರ್ಗ ಇದೆ. ಅದರಲ್ಲೂ ಬಿಜೆಪಿಯವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಡಿಕೆಶಿ ಬಿಜೆಪಿ ಮೇಲೆ ಕಿಡಿ ಕಾರಿದ್ದಾರೆ.
Published On - 11:46 am, Tue, 17 November 20