ಕುರುಬ ಸಮುದಾಯದ ಹಾಗೂ ನೇಕಾರ ಸಮುದಾಯದ ಶ್ರೀಗಳಿಂದ ಸಿಎಂ ಭೇಟಿ, ಮನವಿ ಸಲ್ಲಿಕೆ
ಕುರುಬ ಸಮುದಾಯದ ನಾಲ್ವರು ಸ್ವಾಮೀಜಿಗಳು ಹಾಗೂ ಕುರುಬರ ST ಮೀಸಲಾತಿ ಹೋರಾಟ ಸಮಿತಿಯಿಂದ ಶ್ರೀಗಳು ಮೀಸಲಾತಿ ಸಂಬಂಧ ಸಿಎಂಗೆ ಮನವಿ ಸಲ್ಲಿಸಲಿದ್ದಾರೆ.
ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಎದುರು ಇಂದು 2 ಸಮುದಾಯಗಳಿಂದ ಪ್ರಬಲ ಬೇಡಿಕೆ ಮಂಡನೆಯಾಗಿದೆ. ಎರಡೂ ಸಮುದಾಯದ ಶ್ರೀಗಳು BSY ಅವರನ್ನು ಭೇಟಿಯಾಗಲಿದ್ದಾರೆ. ಕುರುಬ ಸಮುದಾಯದ ನಾಲ್ವರು ಸ್ವಾಮೀಜಿಗಳು ಹಾಗೂ ಕುರುಬರ ST ಮೀಸಲಾತಿ ಹೋರಾಟ ಸಮಿತಿಯಿಂದ ಶ್ರೀಗಳು ಮೀಸಲಾತಿ ಸಂಬಂಧ ಸಿಎಂಗೆ ಮನವಿ ಸಲ್ಲಿಸಿದ್ದಾರೆ.
ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಸ್ವಾಮೀಜಿಗಳು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಭೇಟಿ ಮಾಡಿದ್ದಾರೆ. ಇದೇ ವೇಳೆ ಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್, H.ವಿಶ್ವನಾಥ್, ಮಾಜಿ ಸಚಿವ ಹೆಚ್.ಎಂ.ರೇವಣ್ಣ ಉಪಸ್ಥಿತರಿದ್ರು.
ಇನ್ನು ನೇಕಾರ ಸಮುದಾಯದ 6 ಶ್ರೀಗಳೂ ಸಹ ಇಂದು ಸಿಎಂ ಭೇಟಿ ಮಾಡಲಿದ್ದಾರೆ. ನೇಕಾರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮನವಿ ಸಲ್ಲಿಸಲಿದ್ದಾರೆ. ಲಾಕ್‌ಡೌನ್ ವೇಳೆ ನೇಕಾರರಿಂದ ಸೀರೆ ಖರೀದಿಸುವ ಭರವಸೆಯನ್ನು ಸರ್ಕಾರ ನೀಡಿತ್ತು. ಹೀಗಾಗಿ ಸರ್ಕಾರ ನೀಡಿದ್ದ ಭರವಸೆಯಂತೆ ಸೀರೆ ಖರೀದಿಸುವಂತೆ ಮನವಿ ಮಾಡಲಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಶ್ರೀಗಳು ಮನವಿ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ ಸಮುದಾಯ ಸೇರಿಸಲು ಪ್ಲ್ಯಾನ್, ಸಚಿವ ಸಂಪುಟ ಸಭೆಯಲ್ಲಿಂದು ತೀರ್ಮಾನ..
Published On - 9:52 am, Fri, 27 November 20