AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI ನಿರ್ಲಕ್ಷ್ಯವೇ ಲಕ್ಷ್ಮಿ ವಿಲಾಸ್ ಬ್ಯಾಂಕ್​ ದುಃಸ್ಥಿತಿಗೆ ಕಾರಣವಾಯ್ತು: ಹಣಕಾಸು ಸಚಿವೆಗೆ AIBEA ದೂರು

ದೆಹಲಿ: ಸುಮಾರು 94 ವರ್ಷದ ಲಕ್ಷ್ಮಿ ವಿಲಾಸ್ ಬ್ಯಾಂಕಿನ ವೈಫಲ್ಯದಲ್ಲಿ ಆರ್​ಬಿಐ ಬ್ಯಾಂಕಿನ ನಿರ್ಲಕ್ಷ್ಯದ ಬಗ್ಗೆ ಪರೀಶಿಲನೆ ನಡೆಸಬೇಕು ಮತ್ತು ಸಾಲ ನೀಡಿದವರನ್ನು ಡಿಬಿಎಸ್​ ಬ್ಯಾಂಕ್ ಇಂಡಿಯಾದೊಂದಿಗೆ ವಿಲೀನಗೊಳಿಸಲು ಉದ್ದೇಶಿಸಲಾಗಿದೆ ಎಂದು ಬ್ಯಾಂಕ್ ನೌಕರರ ಸಂಘ ಎಐಬಿಇಎ ಹೇಳಿದೆ. ಭಾರತೀಯ ಮಾರುಕಟ್ಟೆಯಲ್ಲಿ ವಿದೇಶಿ ಬ್ಯಾಂಕಿಂಗ್ ಘಟಕಕ್ಕೆ ಹಿಂಬಾಗಿಲಿನ ಪ್ರವೇಶವನ್ನು ಒದಗಿಸಿ ಎಂದು ಎಐಬಿಇಎ ಕೋರಿದ್ದಾರೆ. ಈ ಸಂಬಂಧ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್​ಗೆ ಪತ್ರವನ್ನು ಬರೆದಿದ್ದು, ಇದರಲ್ಲಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) […]

RBI ನಿರ್ಲಕ್ಷ್ಯವೇ ಲಕ್ಷ್ಮಿ ವಿಲಾಸ್ ಬ್ಯಾಂಕ್​ ದುಃಸ್ಥಿತಿಗೆ ಕಾರಣವಾಯ್ತು: ಹಣಕಾಸು ಸಚಿವೆಗೆ AIBEA ದೂರು
ಲಕ್ಷ್ಮಿ ವಿಲಾಸ್ ಬ್ಯಾಂಕಿನ ಬಗ್ಗೆ ಆರ್​ಬಿಐ ನಿರ್ಲಕ್ಷ್ಯ
preethi shettigar
|

Updated on: Nov 27, 2020 | 3:15 PM

Share

ದೆಹಲಿ: ಸುಮಾರು 94 ವರ್ಷದ ಲಕ್ಷ್ಮಿ ವಿಲಾಸ್ ಬ್ಯಾಂಕಿನ ವೈಫಲ್ಯದಲ್ಲಿ ಆರ್​ಬಿಐ ಬ್ಯಾಂಕಿನ ನಿರ್ಲಕ್ಷ್ಯದ ಬಗ್ಗೆ ಪರೀಶಿಲನೆ ನಡೆಸಬೇಕು ಮತ್ತು ಸಾಲ ನೀಡಿದವರನ್ನು ಡಿಬಿಎಸ್​ ಬ್ಯಾಂಕ್ ಇಂಡಿಯಾದೊಂದಿಗೆ ವಿಲೀನಗೊಳಿಸಲು ಉದ್ದೇಶಿಸಲಾಗಿದೆ ಎಂದು ಬ್ಯಾಂಕ್ ನೌಕರರ ಸಂಘ ಎಐಬಿಇಎ ಹೇಳಿದೆ.

ಭಾರತೀಯ ಮಾರುಕಟ್ಟೆಯಲ್ಲಿ ವಿದೇಶಿ ಬ್ಯಾಂಕಿಂಗ್ ಘಟಕಕ್ಕೆ ಹಿಂಬಾಗಿಲಿನ ಪ್ರವೇಶವನ್ನು ಒದಗಿಸಿ ಎಂದು ಎಐಬಿಇಎ ಕೋರಿದ್ದಾರೆ. ಈ ಸಂಬಂಧ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್​ಗೆ ಪತ್ರವನ್ನು ಬರೆದಿದ್ದು, ಇದರಲ್ಲಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ತಮಿಳುನಾಡು ಮೂಲದ ಸಾಲ ನೀಡಿರುವವರು, ಸಿಂಗಾಪುರ ಮೂಲದ ಬ್ಯಾಂಕಿನ ಭಾರತೀಯ ಅಂಗಸಂಸ್ಥೆಯೊಂದಿಗೆ ವಿಲೀನಗೊಳಿಸುವ ವಿಧಾನವು ಆತ್ಮನಿರ್ಭರ್ ಭಾರತ್ ನೀತಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

94 ವರ್ಷದ ಇತಿಹಾಸ ಹೊಂದಿರುವ ಲಕ್ಷ್ಮಿ ವಿಲಾಸ್ ಬ್ಯಾಂಕ್ (ಎಲ್​ವಿಬಿ) 90 ವರ್ಷಗಳಿಂದ ಲಾಭದಾಯಕವಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಮಾತ್ರ ನಷ್ಟವನ್ನು ಅನುಭವಿಸುತ್ತಿದೆ ಎಂದು ಈ ಸಂಘ ತಿಳಿಸಿದೆ.

ದೊಡ್ಡ ಮಟ್ಟದ ಸಾಲದ ನೀಡಿಕೆಯಿಂದ ಈ ನಷ್ಟ ಉಂಟಾಗಿದೆ ಎಂಬುವುದು ಎಲ್ಲರಿಗೂ ತಿಳಿದಿದೆ. ಇಂತಹ ಸಾಲಗಾರರ ಋಣಾತ್ಮಕ ರುಜುವಾತುಗಳನ್ನು ತಿಳಿದುಕೊಂಡು, ಸಾಲಗಳನ್ನು ಏಕೆ ನೀಡಲಾಯಿತು ಎಂದು ಆರ್​ಬಿಐ ಏಕೆ ವಿಚಾರಣೆ ನಡೆಸಲಿಲ್ಲ ಎಂಬುದರ ಕುರಿತು ತನಿಖೆ ಅಗತ್ಯ. ಈ ಸಾಲಗಳನ್ನು ನೀಡುವಲ್ಲಿ ವಿವೇಕದಿಂದ ವರ್ತಿಸುವಂತೆ ಬ್ಯಾಂಕಿಗೆ ಸಲಹೆ ನೀಡಿ , ಆ ಬ್ಯಾಂಕಿನ ಉನ್ನತ ಅಧಿಕಾರಿಗಳ ಮೇಲೆ ಆರ್​ಬಿಐ ಏಕೆ ಸಮಯೋಚಿತ ಕ್ರಮ ಕೈಗೊಂಡಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಎಲ್​ವಿಬಿಯ ಡಿಬಿಐಎಲ್ ವಿಲೀನ ನವೆಂಬರ್ 27ರಿಂದ ಜಾರಿಗೆ ಬರಲಿದ್ದು, ಈ ಪ್ರಸ್ತಾಪವನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕರಿಸಿದೆ.

1926ರಲ್ಲಿ ಎಲ್​ವಿಬಿ: 1926ರಲ್ಲಿ ವಿಎಸ್​ಎನ್ ರಾಮಲಿಂಗ ಚೆಟ್ಟಿಯಾರ್ ನೇತೃತ್ವದಲ್ಲಿ ತಮಿಳುನಾಡಿನ ಕರೂರಿನ ಏಳು ಉದ್ಯಮಿಗಳ ಗುಂಪಿನಿಂದ ಪ್ರಾರಂಭವಾದ ಎಲ್​ವಿಬಿ 566ಶಾಖೆಗಳನ್ನು ಹೊಂದಿದೆ ಮತ್ತು 973 ಎಟಿಎಂ ಅನ್ನು 19ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಂದಿದೆ.

2019ರ ವೇಳೆಗೆ ಇದು ಪೂರ್ತಿಯಾಗಿ ಕುಸಿತವನ್ನು ಕಂಡಿದ್ದು,ಈ ನೆಲೆಗಟ್ಟಿನಲ್ಲಿ ಕೇಂದ್ರ ಸರ್ಕಾರವು ಆರ್​ಬಿಐನ ಶಿಫಾರಸ್ಸಿನ ಮೇರೆಗೆ ಲಕ್ಷ್ಮಿ ವಿಲಾಸ್ ಬ್ಯಾಂಕ್ ಮೇಲೆ ಒಂದು ತಿಂಗಳು ತಾತ್ಕಾಲಿಕ ನಿರ್ಬಂಧ ಹೇರಿದೆ. ಬ್ಯಾಂಕ್ ನಿರ್ದೇಶಕರ ಮಂಡಳಿಯನ್ನು ರದ್ದು ಪಡಿಸಿದ್ದು, ಠೇವಣಿದಾರರಿಗೆ ಹಣ ಹಿಂಪಡೆಯವ ಮಿತಿ ಗರಿಷ್ಠ 25000 ರೂ. ನಿಗದಿ ಪಡಿಸಿದೆ.

ಎಸ್ ಬ್ಯಾಂಕ್ ನಂತರ ನಿರ್ಬಂಧಕ್ಕೆ ಒಳಗಾದ ಖಾಸಗಿ ಬ್ಯಾಂಕ್ ಇದಾಗಿದ್ದು, ಭಾರತೀಯ ಸ್ಟೇಟ್ ಬ್ಯಾಂಕ್​ನ ಮಾರ್ಗದರ್ಶನದಲ್ಲಿ ಎಸ್ ಬ್ಯಾಂಕ್ ಪುನಃಶ್ಚೇತನಗೊಂಡಿದೆ. ಈ ನೆಲೆಗಟ್ಟಿನಲ್ಲಿ 1926ರಿಂದ ಕಾರ್ಯನಿರ್ವಹಿಸುತ್ತಿರುವ ಎಲ್​ವಿಬಿ ಬ್ಯಾಂಕ್​ನ್ನು ಆರ್​ಬಿಐ ಕಡೆಗಣಿಸಿದೆ ಎಂದು ಎಐಬಿಇಎ ಹಣಕಾಸು ಸಚಿವೆಗೆ ದೂರು ನೀಡಿದೆ.