ಅರಬ್ಬಿ ಸಮುದ್ರದಲ್ಲಿ ನೌಕಾಪಡೆಯ ಮಿಗ್-29K ತರಬೇತಿ ವಿಮಾನ ಪತನ
ಅರಬ್ಬಿ ಸಮುದ್ರದಲ್ಲಿ ನಿನ್ನೆ ಸಂಜೆ ಭಾರತೀಯ ನೌಕಾಪಡೆಯ ಮಿಗ್-29K ತರಬೇತಿ ವಿಮಾನ ಪತನಗೊಂಡಿದೆ. ವಿಮಾನದಲ್ಲಿದ್ದ ಓರ್ವ ಪೈಲಟ್ನನ್ನು ರಕ್ಷಿಸಲಾಗಿದ್ದು ಇನ್ನೋರ್ವ ಪೈಲಟ್ಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ
ದೆಹಲಿ: ಅರಬ್ಬಿ ಸಮುದ್ರದಲ್ಲಿ ನಿನ್ನೆ ಸಂಜೆ ಭಾರತೀಯ ನೌಕಾಪಡೆಯ ಮಿಗ್-29K ತರಬೇತಿ ವಿಮಾನ ಪತನಗೊಂಡಿದೆ. ವಿಮಾನದಲ್ಲಿದ್ದ ಓರ್ವ ಪೈಲಟ್ನನ್ನು ರಕ್ಷಿಸಲಾಗಿದ್ದು ಇನ್ನೋರ್ವ ಪೈಲಟ್ಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ನೌಕಾಪಡೆ ಮಾಹಿತಿ ನೀಡಿದೆ.
ತರಬೇತಿ ವಿಮಾನ ನಿನ್ನೆ ಸಂಜೆ ಸುಮಾರು 5 ಗಂಟೆಗೆ ಸಮುದ್ರದ ಮೇಲೆ ಹಾರಾಟ ನಡೆಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ನೌಕಾಪಡೆ ತಿಳಿಸಿದೆ.
ನೌಕಾಪಡೆಯ ಸುಮಾರು 40 ಮಿಗ್-29K ಯುದ್ಧ ವಿಮಾನಗಳನ್ನು ಸದ್ಯ ಗೋವಾದಲ್ಲಿ ನಿಯೋಜಿಸಲಾಗಿದ್ದು ಅವುಗಳಲ್ಲಿ ಕೆಲವು INS ವಿಕ್ರಮಾದಿತ್ಯ ವಿಮಾನವಾಹಕ ನೌಕೆಯಲ್ಲೂ ಕಾರ್ಯನಿರ್ವಹಿಸುತ್ತದೆ. ಅಂದ ಹಾಗೆ, ಕಳೆದ ಒಂದು ವರ್ಷದಲ್ಲಿ ಮೂರು ಮಿಗ್-29K ವಿಮಾನಗಳು ಪತನಗೊಂಡಿವೆ.
Published On - 12:43 pm, Fri, 27 November 20