ಟೊಯೋಟಾ ಕಂಪನಿ ಲಾಕ್​ಔಟ್ ಮತ್ತು ನೌಕರರ ಮುಷ್ಕರಕ್ಕೆ ನಿಷೇಧ ಹೇರಿದ ಕಾರ್ಮಿಕ ಇಲಾಖೆ

ರಾಮನಗರ: ಜಿಲ್ಲೆಯ ಪ್ರತಿಷ್ಠಿತ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಂಪನಿ ಲಾಕ್​ಔಟ್ ಮತ್ತು ಕಾರ್ಮಿಕರ ಮುಷ್ಕರ ವಿಚಾರಕ್ಕೆ ಸಂಬಂಧಿಸಿ ಕಾರ್ಮಿಕ ಇಲಾಖೆ ಮಹತ್ತರ ಆದೇಶ ಹೊರಡಿಸಿದೆ. ಕಂಪನಿ ಲಾಕ್ ಔಟ್ ಮತ್ತು ನೌಕರರು ಕೈಗೊಂಡ ಮುಷ್ಕರವನ್ನು ನಿಷೇಧಿಸಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ. ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಂಪನಿಯಲ್ಲಿ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ನೌಕರರು ಪ್ರತಿಭಟನೆ ನಡೆಸಿದ್ದರು. ಕಾರ್ಮಿಕರಿಂದ ಪ್ರತಿಭಟನೆ ಹಿನ್ನೆಲೆಯಲ್ಲಿ ಕಂಪನಿಯನ್ನ ಲಾಕ್ ಔಟ್ ಮಾಡಲಾಗಿತ್ತು. ನಂತರ ಡಿಸಿಎಂ ಅಶ್ವತ್ಥ್ ನಾರಾಯಣ್ […]

ಟೊಯೋಟಾ ಕಂಪನಿ ಲಾಕ್​ಔಟ್ ಮತ್ತು ನೌಕರರ ಮುಷ್ಕರಕ್ಕೆ ನಿಷೇಧ ಹೇರಿದ ಕಾರ್ಮಿಕ ಇಲಾಖೆ

Updated on: Nov 18, 2020 | 6:18 PM

ರಾಮನಗರ: ಜಿಲ್ಲೆಯ ಪ್ರತಿಷ್ಠಿತ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಂಪನಿ ಲಾಕ್​ಔಟ್ ಮತ್ತು ಕಾರ್ಮಿಕರ ಮುಷ್ಕರ ವಿಚಾರಕ್ಕೆ ಸಂಬಂಧಿಸಿ ಕಾರ್ಮಿಕ ಇಲಾಖೆ ಮಹತ್ತರ ಆದೇಶ ಹೊರಡಿಸಿದೆ.

ಕಂಪನಿ ಲಾಕ್ ಔಟ್ ಮತ್ತು ನೌಕರರು ಕೈಗೊಂಡ ಮುಷ್ಕರವನ್ನು ನಿಷೇಧಿಸಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ. ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಂಪನಿಯಲ್ಲಿ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ನೌಕರರು ಪ್ರತಿಭಟನೆ ನಡೆಸಿದ್ದರು.

ಕಾರ್ಮಿಕರಿಂದ ಪ್ರತಿಭಟನೆ ಹಿನ್ನೆಲೆಯಲ್ಲಿ ಕಂಪನಿಯನ್ನ ಲಾಕ್ ಔಟ್ ಮಾಡಲಾಗಿತ್ತು. ನಂತರ ಡಿಸಿಎಂ ಅಶ್ವತ್ಥ್ ನಾರಾಯಣ್ ಆಡಳಿತ ಮಂಡಳಿ ಜೊತೆ ನಿನ್ನೆ ಸಭೆ ನಡೆಸಿದ್ದರು. ಇದೀಗ, ಸಭೆ ನಂತರ ಲಾಕ್ ಔಟ್ ಮತ್ತು ಮುಷ್ಕರ ನಿಷೇಧಿಸಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.

ಪ್ರತಿಷ್ಠಿತ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಂಪನಿ ಲಾಕ್​​ ಔಟ್​, ಯಾಕೆ?

Published On - 6:12 pm, Wed, 18 November 20