ಸೇಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳು-ಸಿಬ್ಬಂದಿಗೆ ಕೊರೊನಾ ಪಾಸಿಟಿವ್
ಬೆಂಗಳೂರು: ಕೊರೊನಾದಿಂದ ಮುಚ್ಚಲಾಗಿದ್ದ ಎಲ್ಲಾ ಕಾಲೇಜುಗಳು ಮತ್ತೊಮ್ಮೆ ವಿದ್ಯಾರ್ಥಿಗಳಿಂದ ಗಿಜಿಗುಡುತ್ತಿವೆ. ಬಹಳ ದಿನಗಳಿಂದ ಕಾಣಸಿಗದ ತಮ್ಮ ಸ್ನೇಹಿತರನ್ನು ನೋಡಿ ಎಲ್ಲರೂ ತುಂಬಾ ಖುಷ್ ಆಗಿದ್ದಾರೆ. ಆದರೆ, ಕಾಲೇಜು ಶುರುವಾದ ಎರಡನೇ ದಿನಕ್ಕೆ ನಗರದ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ನಾಲ್ವರಿಗೆ ಸೋಂಕು ದೃಢವಾಗಿದೆ. ಇಬ್ಬರು ವಿದ್ಯಾರ್ಥಿಗಳು ಹಾಗೂ ಇಬ್ಬರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಎಂದು ವರದಿಯಾಗಿದೆ. ನಿನ್ನೆಯಿಂದ ಕಾಲೇಜು ಆರಂಭವಾದ ಹಿನ್ನೆಲೆಯಲ್ಲಿ ಎಲ್ಲರಿಗೂ ಕೊರೊನಾ ಟೆಸ್ಟ್ ಕಡ್ಡಾಯಗೊಳಿಸಿದ್ರು. ಈ ವೇಳೆ ನಾಲ್ವರಿಗೆ ಸೋಂಕು ಪತ್ತೆಯಾಗಿದೆ. ಸದ್ಯ, ಎಲ್ಲಾ ಸೋಂಕಿತರಿಗೆ […]

ಬೆಂಗಳೂರು: ಕೊರೊನಾದಿಂದ ಮುಚ್ಚಲಾಗಿದ್ದ ಎಲ್ಲಾ ಕಾಲೇಜುಗಳು ಮತ್ತೊಮ್ಮೆ ವಿದ್ಯಾರ್ಥಿಗಳಿಂದ ಗಿಜಿಗುಡುತ್ತಿವೆ. ಬಹಳ ದಿನಗಳಿಂದ ಕಾಣಸಿಗದ ತಮ್ಮ ಸ್ನೇಹಿತರನ್ನು ನೋಡಿ ಎಲ್ಲರೂ ತುಂಬಾ ಖುಷ್ ಆಗಿದ್ದಾರೆ.
ಆದರೆ, ಕಾಲೇಜು ಶುರುವಾದ ಎರಡನೇ ದಿನಕ್ಕೆ ನಗರದ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ನಾಲ್ವರಿಗೆ ಸೋಂಕು ದೃಢವಾಗಿದೆ. ಇಬ್ಬರು ವಿದ್ಯಾರ್ಥಿಗಳು ಹಾಗೂ ಇಬ್ಬರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಎಂದು ವರದಿಯಾಗಿದೆ.
ನಿನ್ನೆಯಿಂದ ಕಾಲೇಜು ಆರಂಭವಾದ ಹಿನ್ನೆಲೆಯಲ್ಲಿ ಎಲ್ಲರಿಗೂ ಕೊರೊನಾ ಟೆಸ್ಟ್ ಕಡ್ಡಾಯಗೊಳಿಸಿದ್ರು. ಈ ವೇಳೆ ನಾಲ್ವರಿಗೆ ಸೋಂಕು ಪತ್ತೆಯಾಗಿದೆ. ಸದ್ಯ, ಎಲ್ಲಾ ಸೋಂಕಿತರಿಗೆ 14 ದಿನಗಳವರೆಗೆ ಹೋಂ ಐಸೋಲೇಷನ್ಗೆ ಕಳಿಸಲಾಗಿದೆ. ಜೊತೆಗೆ, ಅವರ ಸಂಪರ್ಕಿತರಿಗೆ ಹೋಮ್ ಐಸೋಲೇಷನ್‌ನಲ್ಲಿರಲು ಸೂಚಿಸಲಾಗಿದೆ.