AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಹ್ಲಿಯನ್ನು ಕಟ್ಟಿ ಹಾಕಲು ಲ್ಯಾಂಗರ್ ಸ್ಟ್ರಾಟಿಜಿ ರೂಪಿಸಿದ್ದಾರೆ: ಸ್ಟಾಯ್ನಿಸ್

ನಾವು ಈ ಹಿಂದೆಯೇ ಮೈಂಡ್​ಗೇಮ್ ಬಗ್ಗೆ ಮಾತಾಡಿದ್ದೆವು. ಭಾರತದ ಆಸ್ಟ್ರೇಲಿಯ ಪ್ರವಾಸ ಅಥವಾ ಆ ದೇಶ ಬಾರತಕ್ಕೆ ಪ್ರವಾಸ ಬರುವಾಗ, ಅಲ್ಲಿನ ಹಾಲಿ ಮತ್ತು ಮಾಜಿ ಆಟಗಾರರು ಮೈಂಡ್​ಗೇಮ್ ಶುರುಮಾಡಿಬಿಡುತ್ತಾರೆ. ಭಾರತದ ಆಟಗಾರರ ನೈತಿಕ ಸ್ಥೈರ್ಯ ಮತ್ತು ಆತ್ಮವಿಶ್ವಾಸವನ್ನು ಕುಂದಿಸುವಗೋಸ್ಕರ ಅವರು, ಟೀಮ್ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​ಗಳನ್ನು ಕಟ್ಟಿಹಾಕಲು ಆಸ್ಟ್ರೇಲಿಯಾದ ಬೌಲರ್​ಗಳು ಹೊಸ ಪ್ಲ್ಯಾನ್ ಮಾಡಿದ್ದಾರೆ, ಭಾರತೀಯ ಬೌಲರ್​ಗಳನ್ನು ಆಸ್ಸೀ ಬ್ಯಾಟರ್​ಗಳು ಸದೆಬಡಿಯಲಿದ್ದಾರೆ ಮೊದಲಾದ ಕಾಮೆಂಟ್​ಗಳನ್ನು ಮಾಡುತ್ತಾ ಭಾರತೀಯರನ್ನು ಮಾನಸಿಕವಾಗಿ ಅಧೀರಗೊಳಿಸುವ ಪ್ರಯತ್ನ ಮಾಡುತ್ತಾರೆ. ಇದು ಭಾರತೀಯ […]

ಕೊಹ್ಲಿಯನ್ನು ಕಟ್ಟಿ ಹಾಕಲು ಲ್ಯಾಂಗರ್ ಸ್ಟ್ರಾಟಿಜಿ ರೂಪಿಸಿದ್ದಾರೆ: ಸ್ಟಾಯ್ನಿಸ್
ವಿರಾಟ್ ಕೊಹ್ಲಿ
ಅರುಣ್​ ಕುಮಾರ್​ ಬೆಳ್ಳಿ
|

Updated on:Nov 25, 2020 | 3:39 PM

Share

ನಾವು ಈ ಹಿಂದೆಯೇ ಮೈಂಡ್​ಗೇಮ್ ಬಗ್ಗೆ ಮಾತಾಡಿದ್ದೆವು. ಭಾರತದ ಆಸ್ಟ್ರೇಲಿಯ ಪ್ರವಾಸ ಅಥವಾ ಆ ದೇಶ ಬಾರತಕ್ಕೆ ಪ್ರವಾಸ ಬರುವಾಗ, ಅಲ್ಲಿನ ಹಾಲಿ ಮತ್ತು ಮಾಜಿ ಆಟಗಾರರು ಮೈಂಡ್​ಗೇಮ್ ಶುರುಮಾಡಿಬಿಡುತ್ತಾರೆ. ಭಾರತದ ಆಟಗಾರರ ನೈತಿಕ ಸ್ಥೈರ್ಯ ಮತ್ತು ಆತ್ಮವಿಶ್ವಾಸವನ್ನು ಕುಂದಿಸುವಗೋಸ್ಕರ ಅವರು, ಟೀಮ್ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​ಗಳನ್ನು ಕಟ್ಟಿಹಾಕಲು ಆಸ್ಟ್ರೇಲಿಯಾದ ಬೌಲರ್​ಗಳು ಹೊಸ ಪ್ಲ್ಯಾನ್ ಮಾಡಿದ್ದಾರೆ, ಭಾರತೀಯ ಬೌಲರ್​ಗಳನ್ನು ಆಸ್ಸೀ ಬ್ಯಾಟರ್​ಗಳು ಸದೆಬಡಿಯಲಿದ್ದಾರೆ ಮೊದಲಾದ ಕಾಮೆಂಟ್​ಗಳನ್ನು ಮಾಡುತ್ತಾ ಭಾರತೀಯರನ್ನು ಮಾನಸಿಕವಾಗಿ ಅಧೀರಗೊಳಿಸುವ ಪ್ರಯತ್ನ ಮಾಡುತ್ತಾರೆ. ಇದು ಭಾರತೀಯ ಆಟಗಾರರಿಗೆ ಹೊಸದೇನಲ್ಲ ಬಿಡಿ.

ಆದರೆ ಅವರು ಅರಿತುಕೊಳ್ಳಬೇಕಿರುವ ಸಂಗತಿಯೇನೆಂದರೆ, ಕಳೆದೆರಡು ದಶಕಗಳಲ್ಲಿ ಭಾರತದ ಕ್ರಿಕೆಟ್ ಟೀಮಿನ ಮನಸ್ಥಿತಿಯಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಅದರ ಶ್ರೇಯಸ್ಸು ಮೊದಲು ಸಲ್ಲಬೇಕಿರುವುದು ಸೌರವ್ ಗಂಗೂಲಿಗೆ. ಅವರು ನಿಸ್ಸಂದೇಹವಾಗಿ ಭಾರತೀಯ ಕ್ರಿಕೆಟ್ ಟೀಮನ್ನು, ಟೀಮ್ ಇಂಡಿಯಾವಾಗಿ ಪರಿವರ್ತಿಸಿದರು. ಆ ಪರಂಪರೆಯನ್ನು ಮುಂದುವರೆಸಿದ ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ ವಿದೇಶಗಳಲ್ಲಿ ಟೆಸ್ಟ್ ಪಂದ್ಯ ಮತ್ತು ಸರಣಿಗಳನ್ನೂ ಗೆದ್ದರು. ಅವರ ನಂತರ ಟೀಮಿನ ಸಾರಥ್ಯ ವಹಿಸಿಕೊಂಡ ಮಹೇಂದ್ರಸಿಂಗ್ ದೋನಿ ನಾಯಕತ್ವಕ್ಕೆ ಹೊಸ ಭಾಷ್ಯ ಬರೆದರು. ಈಗ ನಾಯಕತ್ವ ನಿಭಾಯಿಸತ್ತಿರುವ ವಿರಾಟ್​ ಕೊಹ್ಲಿ ಪ್ರತಿ ಸರಣಿಯಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಾ ವೈರಿಗಳ ಗುಹೆಯಲ್ಲೂ ತಾವು ಮತ್ತು ಟೀಮ್ ಇಂಡಿಯಾದ ಸದಸ್ಯರು ಅಬ್ಬರಿಸಿ ಗರ್ಜಿಸುವಂತೆ ಮಾಡಿದ್ದಾರೆ.

ಅಟಗಾರನಾಗಿ ಮತ್ತು ತಂಡದ ನಾಯನಾಗಿ ಕೊಹ್ಲಿಯ ಸಾಮರ್ಥ್ಯವನ್ನು ಆಸ್ಟ್ರೇಲಿಯಾದ ಆಲ್​ರೌಂಡರ್ ಮಾರ್ಕಸ್​ ಸ್ಟಾಯ್ನಿಸ್ ಚೆನ್ನಾಗಿ ಗ್ರಹಿಸಿಕೊಂಡಿದ್ದಾರೆ. ಹಾಗಾಗೇ ಕೊಹ್ಲಿಯ ವಿರುದ್ಧ ಅವರು ಮೈಂಡ್​ಗೇಮ್ ಶುರುವಿಟ್ಟುಕೊಂಡಿದ್ದಾರೆ. ಸ್ಟಾಯ್ನಿಸ್ ಟೆಸ್ಟ್ ಪಂದ್ಯಗಳಲ್ಲಿ ಈ ಬಾರಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಲಿಕ್ಕಿಲ್ಲ. ಆದರೆ ವ್ಹೈಟ್​ಬಾಲ್ ಕ್ರಿಕೆಟ್​ ಪಂದ್ಯಗಳಿಗೆ ಅವರು ನಿಸ್ಸಂದೇಹವಾಗಿ ಆಯ್ಕೆಯಾಗಲಿದ್ದಾರೆ.

‘‘ಕೊಹ್ಲಿ ಆರು ಸೀಮಿತ ಓವರ್​ಗಳ ಪಂದ್ಯಗಳು ಮತ್ತು ಅಡಿಲೇಡ್​ನಲ್ಲಿ ನಡೆಯುವ ಹಗಲು-ರಾತ್ರಿ ಟೆಸ್ಟ್ ಪಂದ್ಯದ ನಂತರ ಭಾರತಕ್ಕೆ ವಾಪಸ್ಸಾಗಲಿದ್ದಾರೆ. ಅವರ ಪತ್ನಿ ಜನೆವರಿಯಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ಆ ಸಮಯದಲ್ಲಿ ಪತ್ನಿಯೊಂದಿಗೆ ಇರಬಯಸಿರುವ ಕೊಹ್ಲಿ ಅವರ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಅದು ಒಳ್ಳೆ ನಿರ್ಧಾರ,’’ ಎಂದು ಕ್ರಿಕೆಟ್ ವೆಬ್​ಸೈಟೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸ್ಟಾಯ್ನಿಸ್ ಹೇಳಿದ್ದಾರೆ.

ಕೊಹ್ಲಿ ಆಡಲಿರುವ ಪಂದ್ಯಗಳಲ್ಲಿ ಅವರನ್ನು ಕಟ್ಟಿಹಾಕುವ ಯೋಜನೆಗಳನ್ನು ಆಸ್ಟ್ರೇಲಿಯ ಕ್ರಿಕೆಟ್ ಟೀಮಿನ ಕೋಚ್ ಜಸ್ಟಿನ್ ಲ್ಯಾಂಗರ್ ಮಾಡಿಕೊಂಡಿದ್ದಾರೆಂದು ಸ್ಟಾಯ್ನಿಸ್ ಹೇಳಿದ್ದಾರೆ.

‘‘ಕೊಹ್ಲಿ ನಿಸ್ಸಂದೇಹವಾಗಿ ಶ್ರೇಷ್ಠ ಆಟಗಾರ ಮತ್ತು ಟೀಮಿನ ಸ್ಫೂರ್ತಿಯ ಸೆಲೆ. ತಮ್ಮ ಉತೃಷ್ಟ ಬ್ಯಾಟಿಂಗ್ ಮತ್ತು ವೈಯಕ್ತಿಕ ಪ್ರದರ್ಶನಗಳಿಂದ ಅವರು ಇಡೀ ಟೀಮಿಗೆ ಪ್ರೇರೆಪಣೆ ಒದಗಿಸುತ್ತಾರೆ. ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಅವರು ನೀಡಿರುವ ಆಸಾಮಾನ್ಯ ಪ್ರದರ್ಶನಗಳ ಬಗ್ಗೆ ಲ್ಯಾಂಗರ್ ಮತ್ತು ಟೀಮಿನ ಇತರ ಸದಸ್ಯರಿಗೆ ಗೊತ್ತಿದೆ. ವ್ಹೈಟ್​ಬಾಲ್ ಕ್ರಿಕೆಟ್​ನಲ್ಲಿ ಅವರು ತಮ್ಮದೇ ಆದ ಲೀಗ್ ಸ್ಥಾಪಿಸಿದ್ದಾರೆ. ಆದರೆ ಅವರನ್ನು ತಡೆಯಲು ನಾವು ಸ್ಟ್ರಾಟಿಜಿಗಳನ್ನು ರೂಪಿಸಿಕೊಂಡಿದ್ದೇವೆ. ಒಂದು ವಿಷಯವನ್ನು ನಾನು ಇಲ್ಲಿ ಹೇಳಲಿಚ್ಛಿಸುತ್ತೇನೆ. ಹಿಂದೆ ನಾವು ಕೊಹ್ಲಿಯವರಿಗೆಂದೇ ಪ್ರತ್ಯೇಕವಾದ ಸ್ಟ್ರಾಟಿಜಿಗಳನ್ನು ನಾವು ರೂಪಿಸಿಕೊಂಡಿರಲಿಲ್ಲ, ಹಾಗಾಗಿ ಅವರು ಸುಲಭವಾಗಿ ರನ್ ಗಳಿಸುವುದು ಸಾಧ್ಯವಾಯಿತು,’’ ಎಂದು ಸ್ಟಾಯ್ನಿಸ್ ಹೇಳಿದ್ದಾರೆ.

ಆದರೆ, ಗ್ರೇಟ್ ಆಟಗಾರರು ಪ್ರಮುಖ ಸರಣಿಗಳಲ್ಲಿ ಅಥವಾ ಬಲಿಷ್ಠ ಪ್ರತಿಸ್ಫರ್ದಿಯೆದುರು ಆಡುವಾಗ ಹೆಚ್ಚು ಸ್ಫರ್ಧಾತ್ಮಕ ಮನೋಭಾವ ತಳೆಯುತ್ತಾರೆ ಮತ್ತು ಉತ್ತಮ ಪ್ರದರ್ಶನ ನೀಡುವ ಸಂಕಲ್ಪ ಮಾಡಿಕೊಂಡಿರುತ್ತಾರೆ. ತಮ್ಮದೇ ಆದ ಯೋಜನೆಗಳನ್ನು ರೂಪಿಸಿಕೊಳ್ಳುತ್ತಾರೆ. ಕೊಹ್ಲಿ ಕೂಡ ಭಿನ್ನವಲ್ಲ. ಅವರಿಗೆ ಬೌಲ್ ಮಾಡುವುದು ಒಂದು ಸವಾಲು ನಿಜವಾದರೂ ನಮ್ಮ ಹೊಸ ಸ್ಟ್ರಾಟಿಜಿಗಳು ಅವರನ್ನು ಖಂಡಿತವಾಗಿಯೂ ಕಟ್ಟಿಹಾಕಲಿವೆ ಎಂದು ಸ್ಟಾಯ್ನಿಸ್ ಹೇಳಿದ್ದಾರೆ.

Published On - 6:43 pm, Sat, 21 November 20

ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್