ವಿಡಿಯೋ ಕಾಲ್ಗಳಲ್ಲಿ ಆಗುವ ಅವಾಂತರಗಳು ಒಂದೇ ಎರಡೇ..ಸೋಷಿಯಲ್ ಮೀಡಿಯಾ ಗಮನಿಸಿದರೆ ಇಂಥಾ ಹತ್ತಾರು ವಿಡಿಯೋಗಳು ಒಂದರ ಮುಂದೆ ಒಂದರಂತೆ ಬರುತ್ತಲೇ ಇರುತ್ತವೆ. ಈಗ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಡಿಯೋ ಕಾಲ್/ ವರ್ಚುವಲ್ ಮಿಟಿಂಗ್ನಲ್ಲಿ ನಡೆದ ಅವಾಂತರವೊಂದು ಸಖತ್ ಸುದ್ದಿ ಮಾಡುತ್ತಿದೆ. ಕ್ಷತ್ರಶಲ್ ರಾಜ್ ಎಂಬ ಬಿಹಾರದ ವಕೀಲರೊಬ್ಬರು ವಿಡಿಯೋ ಕಾಲ್ನಲ್ಲಿ ಅವಾಂತರ ಸೃಷ್ಟಿಸಿಕೊಂಡಿದ್ದಾರೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಎಚ್ಚರಿಕೆ ನೀಡಿದ ಬಳಿಕ ವಿಡಿಯೋ ಆಫ್ ಮಾಡಿದ್ದಾರೆ. ಅಷ್ಟಕ್ಕೂ ವಿಡಿಯೋ ಕಾಲ್ ನಡುವೆ ನಡೆದಿದ್ದೇನು? ಇಲ್ಲಿದೆ ಮಾಹಿತಿ.
ವಿಡಿಯೋ ಕಾನ್ಫರೆನ್ಸ್ನಲ್ಲಿ ಇವರೆಲ್ಲರೂ ಭಾಗಿಯಾಗಿದ್ದರು. ಕೆಲ ಕಾಲ ಸಿಕ್ಕಿದ ವಿರಾಮದಲ್ಲಿ ವಕೀಲ ಕ್ಷತ್ರಶಲ್ ರಾಜ್ ಅವರು ಊಟ ಮಾಡಲು ಶುರುಮಾಡಿದ್ದಾರೆ. ಅತ್ಯಂತ ಖುಷಿಯಿಂದ ಭೋಜನವನ್ನು ಸವಿಯುತ್ತಿರುವ ಅವರು ತಮ್ಮ ಮೊಬೈಲ್ನ ವಿಡಿಯೊವನ್ನು ಬಂದ್ ಮಾಡಲು ಮರೆತಿದ್ದಾರೆ. ಈ ವೇಳೆ ವಕೀಲ ಕ್ಷತ್ರಶಲ್ ರಾಜ್ ಭೋಜನ ಸವಿಯುವುದನ್ನು ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗಿಯಾದ ಎಲ್ಲರೂ ನೋಡಿದ್ದಾರೆ! ವಕೀಲರ ಅವಾಂತರ ಗಮನಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಕೀಲರಿಗೆ ಕರೆ ಮಾಡಿ ಎಚ್ಚರಿಸಿದ್ದಾರೆ.
??????????? pic.twitter.com/UBj9maFb2Z
— Mayur Sejpal | मयूर सेजपाल ?? (@mayursejpal) March 5, 2021
ಈ ಅಚಾತುರ್ಯ ಮನಗಂಡ ಸಾಲಿಸೇಟರ್ ಜನರಲ್ ಆಗಿರುವ ತುಷಾರ್ ಮೆಹ್ತಾ ಅವರು ತಕ್ಷಣ ತಮ್ಮ ವೈಯಕ್ತಿಕ ಮೊಬೈಲ್ನಿಂದ ವಕೀಲರಿಗೆ ಕರೆ ಮಾಡಿ ‘ಹೀಗಾಗುತ್ತಿದೆ‘ ಎಂದು ಹೇಳಿದ್ದಾರೆ. ಆಗಲೇ ಎಚ್ಚೆತ್ತುಕೊಂಡ ವಕೀಲ ಕ್ಷತ್ರಶಲ್ ರಾಜ್, ತಮ್ಮ ಮೊಬೈಲ್ನ ವಿಡಿಯೋವನ್ನು ಅಫ್ ಮಾಡಿದ್ದಾರೆ.
??????????? pic.twitter.com/UBj9maFb2Z
— Mayur Sejpal | मयूर सेजपाल ?? (@mayursejpal) March 5, 2021
ಇತ್ತೀಚಿಗೆ ನಡೆದಿದ್ದ ಇನ್ನೊಂದು ಘಟನೆ
ವ್ಯಕ್ತಿಯೋರ್ವ ತನ್ನ ಮನೆಯಲ್ಲಿ ಕುಳಿತು ಝೂಮ್ ಮೀಟಿಂಗ್ನಲ್ಲಿ ನಿರತನಾಗಿದ್ದ. ಮನೆಯಲ್ಲಿ ಕುಳಿತಾಗ ಮನೆಯವರ ಮಾತು ಕೇಳದಂತೆ, ಮನೆಯವರು ಫ್ರೇಮ್ನಲ್ಲಿ ಬರದಂತೆ ನೋಡಿಕೊಳ್ಳಬೇಕು ತಾನೇ? ಆದರೆ ಈ ಪುಣ್ಯಾತ್ಮ ಅದನ್ನು ಮರೆತಿದ್ದ. ಝೂಮ್ ಮೀಟಿಂಗ್ನಲ್ಲಿ ಇದ್ದಾಗಲೇ ಈತನ ಮುದ್ದಿನ ಹೆಂಡತಿ ಫ್ರೇಮ್ನಲ್ಲಿ ಕಾಣಿಸಿಕೊಂಡಳು. ಕೇವಲ ಕಾಣಿಸಿಕೊಂಡಿದ್ದರೆ ಪರವಾಗಿರಲಿಲ್ಲ. ತನ್ನ ಪತಿರಾಯನ ಮೇಲೆ ಪ್ರೀತಿ ಉಕ್ಕಿ ಬಂದು ತನ್ನ ಕೆಂದುಟಿಗಳಿಂದ (?) ಆತನಿಗೆ ಚುಂಬನದ ಮಳೆ ಸುರಿಸಲು ಮುಂದಾಗಿದ್ದಳು! ಪಾಪ..ತನ್ನ ಪಾಡಿಗೆ ತಾನು ಮೀಟಿಂಗ್ ನಲ್ಲಿದ್ದ ಪತಿ ಒಂದು ಕ್ಷಣಕ್ಕೆ ಗಾಬರಿಬಿದ್ದುಹೋದ. ಆಗಿಂದಾಗಲೇ ಹೆಂಡತಿಯ ಮುಖಾರವಿಂದವನ್ನು ಕಂಪ್ಯೂಟರ್ ಫ್ರೇಮ್ನಿಂದ ಆಚೆಗೆ ಸರಿಸಿ ತಾನು ಮೀಟಿಂಗ್ನಲ್ಲಿರುವುದಾಗಿ ಭಿನ್ನವಿಸಿದ. ಆದರೆ ಅಲ್ಲಿಯವರೆಗಿನ ಈ ಪ್ರಹಸನ ಝೂಮ್ನಲ್ಲಿ ದಾಖಲಾಗಿತ್ತು. ಈ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ ಹರ್ಷ ಗೋಯೆಂಕಾ.
ಇಂತಹ ಅವಾಂತರಗಳು ವರ್ಚುವಲ್ ಕಾನ್ಫರೆನ್ಸ್ಗಳಲ್ಲಿ ಆಗಾಗ ಸದ್ದು ಮಾಡುತ್ತಲೇ ಇರುತ್ತವೆ ಎಂಬುದನ್ನು ಇಲ್ಲಿ ಸ್ಮರಿಸಬಹುದು
ಇದನ್ನೂ ಓದಿ: ಗಂಡ ಝೂಮ್ ಮೀಟಿಂಗ್ನಲ್ಲಿದ್ದಾಗಲೇ ಜುಮ್ಮನೆ ಮುತ್ತಿಕ್ಕಲು ಬಂದ ಪತ್ನಿ! ನಂತರ ಆಗಿದ್ದು ಮಾತ್ರ…
Video Viral: ಯುವತಿಯ ಕಪಾಳಕ್ಕೆ ಹೊಡೆದ ಮಹಿಳಾ ಪಿಎಸ್‌ಐ! ವಾಹನ ತಪಾಸಣೆ ವೇಳೆ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಘಟನೆ