AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video Viral: ಯುವತಿಯ ಕಪಾಳಕ್ಕೆ ಹೊಡೆದ ಮಹಿಳಾ ಪಿಎಸ್‌ಐ! ವಾಹನ ತಪಾಸಣೆ ವೇಳೆ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಘಟನೆ

Video Viral: ದ್ವಿಚಕ್ರ ವಾಹನ ದಾಖಲೆಗಳ ತಪಾಸಣೆ ವೇಳೆ ಯುವತಿಯೊಬ್ಬರು ತನ್ನೊಂದಿಗೆ ವಾಗ್ವಾದಕ್ಕೆ ಇಳಿದರೆಂದು ವ್ಯಗ್ರಗೊಂಡ ಮಹಿಳಾ ಪಿಎಸ್‌ಐ ಸವಿತಾಗೌಡ ಪಾಟೀಲ್‌ ಯುವತಿಯ ಕಪಾಳಕ್ಕೆ ಹೊಡೆದಿರುವ ಘಟನೆ ನಡೆದಿದೆ.

Video Viral: ಯುವತಿಯ ಕಪಾಳಕ್ಕೆ ಹೊಡೆದ ಮಹಿಳಾ ಪಿಎಸ್‌ಐ! ವಾಹನ ತಪಾಸಣೆ ವೇಳೆ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಘಟನೆ
ವಾಹನ ತಪಾಸಣೆ ವೇಳೆ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಯುವತಿಯ ಕಪಾಳಕ್ಕೆ ಹೊಡೆದ ಮಹಿಳಾ ಪಿಎಸ್‌ಐ
Follow us
ಸಾಧು ಶ್ರೀನಾಥ್​
| Updated By: Digi Tech Desk

Updated on:Jun 23, 2021 | 1:32 PM

ಮಂಡ್ಯ: ದ್ವಿಚಕ್ರ ವಾಹನ ದಾಖಲೆಗಳ ತಪಾಸಣೆ ವೇಳೆ ಯುವತಿಯೊಬ್ಬರು ತನ್ನೊಂದಿಗೆ ವಾಗ್ವಾದಕ್ಕೆ ಇಳಿದರೆಂದು ವ್ಯಗ್ರಗೊಂಡ ಮಹಿಳಾ ಪಿಎಸ್‌ಐ ಸವಿತಾಗೌಡ ಪಾಟೀಲ್‌ ಯುವತಿಯ ಕಪಾಳಕ್ಕೆ ಹೊಡೆದಿರುವ ಘಟನೆ ನಡೆದಿದೆ.

ಮಂಡ್ಯದ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಈ ಘಟನೆ ನಡೆದಿದೆ. ಪಿಎಸ್‌ಐ ಹೊಡೆದ ಬಳಿಕ ಯುವತಿಯೂ ಏಕವಚನದಲ್ಲಿ ಪಿಎಸ್‌ಐ ಸವಿತಾಗೌಡ ಪಾಟೀಲ್‌ ಅವರನ್ನು ನಿಂದಿಸಿದ್ದಾರೆ. ಈ ಬಗ್ಗೆ ಯುವತಿಯು ಸ್ಥಳದಲ್ಲಿದ್ದ ಹಿರಿಯರೊಬ್ಬರ ಗಮನ ಸೆಳೆದಾಗ ಅವರೂ ಸಹ ಪೊಲೀಸ್​ ಅಧಿಕಾರಿಯ ದರ್ಪವನ್ನು ಪ್ರಶ್ನಿಸಿದ್ದಾರೆ. ಇದಿಷ್ಟೂ ಪೊಲೀಸರೇ ವಿಡಿಯೋ ಮಾಡಿಕೊಂಡಿದ್ದು ಅದೀಗ ವೈರಲ್​ ಆಗಿದೆ. ಮತ್ತು ಪಿಎಸ್‌ಐ ಹೈಹ್ಯಾಂಡೆಡ್​ನೆಸ್​ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನಾಯಿತೆಂದರೆ ಮಂಡ್ಯದ ನೂರಡಿ ರಸ್ತೆಯ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಯುವತಿ ಚಲಾಯಿಸುತ್ತಿದ್ದ ಸ್ಕೂಟರ್​ಅನ್ನು ತಡೆದು ದಾಖಲಾತಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ನನ್ ಸ್ಕೂಟರ್ ಅನ್ನ ಯಾಕ್ ಮುಟ್ತಿದ್ದೀರಾ ಎಂದು ಯುವತಿ ಆವಾಜ್ ಹಾಕಿದ್ದಾರೆ. ಸ್ಕೂಟರ್ ಮೇಲೆ ಕುಳಿತು ನಾನ್ ಗಾಡಿ ಯಾಕ್ ಕೊಡ್ಲಿ ಎಂದು ಆವಾಜ್ ಹಾಕಿದ್ದಾರೆ. ಸ್ಕೂಟರ್ ನಿಂದ ಇಳಿಯಮ್ಮ, ನಿನ್ ಹೆಸರೇನು? ನಿಮ್ ತಂದೆ ಕರೆಸು. ಠಾಣೆಗೆ ಬಾ ಎಂದು ಮಹಿಳಾ ಪಿಎಸ್ ಐ ಸೂಚಿಸಿದ್ದಾರೆ. ಆ ವೇಳೆ ಇದ್ದಕ್ಕಿದ್ದಂತೆ ಯುವತಿ ಮತ್ತು ಮಂಡ್ಯದ ಮಹಿಳಾ ಠಾಣೆ ಪಿಎಸ್ ಐ ಸವಿತಾಗೌಡ ಪಾಟೀಲ್ ಪರಸ್ಪರ ನಿಂದನೆಯಲ್ಲಿ ತೊಡಗಿದ್ದಾರೆ.

ಈ ವೇಳೆ ಮಹಿಳಾ ಪಿಎಸ್ಐ ಕುರಿತು ಹೇ ನನ್ ತಂದೆ ಇಲ್ಲ. ಎಲ್ಲರನ್ನು ಕರೆಸಲಾಗಲ್ಲ ಎಂದು ಯುವತಿ ಆಕ್ರೋಶಗೊಂಡಿದ್ದಾಳೆ. ಈ ವೇಳೆ ತಾಳ್ಮೆ ಕಳೆದುಕೊಂಡ ಮಹಿಳಾ ಪಿಎಸ್ ಐ ಸವಿತಾ ಗೌಡ ನನ್ನನ್ನೇ ಹೇ ಅಂತೀಯಾ? ಲೋಫರ್ ಮುಂ* ಏನ್ ಮಾತಾಡ್ತಿಯಾ? ಎಂದು ಯುವತಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

ಈ ವೇಳೆ ಇನ್ನೂ ಜೋರಾಗಿ ಕೂಗಾಡಿದ ಯುವತಿ. ಹೇ ಏನು, ಯಾರು ನೀನು ನನ್ ಮೇಲೆ ಕೈ ಮಾಡೋಕೆ? ಇದನ್ನ ವಿಡಿಯೊ ಮಾಡ್ಲಾ? ಯಾವಳೆ ನೀನು ನನಗೆ ಹೊಡೆಯೋಕೆ ಹೇ ಎಂದು ಯುವತಿ ವ್ಯಗ್ರಗೊಂಡಿದ್ದಾರೆ. ಆ ವೇಳೆ ಮಹಿಳಾ ಪಿಎಸ್ ಐ ಮತ್ತೊಂದು ಏಟು ಕೊಟ್ಟಿದ್ದಾರೆ. ಯುವತಿಯು ಆಗ ಹೇ ಏನೆ ಮಾಡ್ತಿಯಾ ರಾಸ್ಕಲ್? ಎಂದು ಮಹಿಳಾ ಪಿಎಸ್ ಐಗೆ ಅವಾಜ್ ಹಾಕಿದ್ದಾರೆ. ಠಾಣೆಗೆ ಬಾ ನೀನು ಎಂದು ಸಿಬ್ಬಂದಿಯಿಂದ ಸ್ಕೂಟರ್ ತೆಗೆಸಿಕೊಂಡು ಪಿಎಸ್ ಐ ಸ್ಥಳದಿಂದ ತೆರಳಿದ್ದಾರೆ.

ಈ ವೇಳೆ ಮಹಿಳಾ ಪಿಎಸ್ ಐ ಕುರಿತು ಅನ್ ಎಜುಕೇಟೆಡ್ ಬ್ರೂಟ್ ಎಂದು ಯುವತಿ ಬೈದಿದ್ದಾರೆ. ಅದಕ್ಕೆ.. ನಾನು ಎಜುಕೇಟೆಡ್, ನೀನೆ ಅನ್ ಎಜುಕೇಟೆಡ್ ಎಂದು ಮಹಿಳಾ ಪಿಎಸ್ ಐ ಗುಡುಗಿದ್ದಾರೆ.

ಮತ್ತೆ ನಾನು ಎಜುಕೇಟೆಡ್, ನೀನೆ ಅನ್ ಎಜುಕೇಟೆಡ್ ರೀತಿ ಬಿಹ್ಯಾವ್ ಮಾಡಿದ್ದು. ರೂಲ್ಸ್ ಗೊತ್ತಿಲ್ಲ ಪೊಲೀಸ್ ಅಂತೆ ಇವಳು. ವಿಡಿಯೊ ಮಾಡ್ಕೊತ್ತಿದ್ದೀರಾ ತಾನೆ ಮಾಡ್ಕೊಳಿ ಎಂದು ಯುವತಿ ಆವಾಜ್ ಹಾಕಿದ್ದಾಳೆ.

ಏನಿದು ಪ್ರಕರಣ? ಅಂದ ಹಾಗೆ, ಘಟನೆ ಮಂಡ್ಯದ ನೂರಡಿ ರಸ್ತೆಯಲ್ಲಿ 4 ದಿನಗಳ ಹಿಂದೆ ನಡೆದಿತ್ತು. ಹೆಲ್ಮೆಟ್​ ಹಾಕದಿರುವುದನ್ನು ಪ್ರಶ್ನಿಸಿದ್ದ ಮಹಿಳಾ ಪೊಲೀಸ್​  500 ದಂಡ ಕಟ್ಟುವಂತೆ ಯುವತಿಗೆ ಸೂಚಿಸಿದ್ದರು. ಆಗ, ನನ್ನ ಬಳಿ ಹಣವಿಲ್ಲ ಫೋನ್ ಪೇ ಮಾಡ್ತೇನೆ ಎಂದು ಯುವತಿ ಹೇಳಿದ್ದಳಂತೆ.

ಅದಕ್ಕೆ, ನಗದು ರೂಪದಲ್ಲೇ ದಂಡದ ಮೊತ್ತ ಪಾವತಿಸುವಂತೆ ತಾಕೀತು ಮಾಡಿದ ಮಹಿಳಾ ಪಿಎಸ್​ಐ ದ್ವಿಚಕ್ರ ವಾಹನ ಠಾಣೆಗೆ ತೆಗೆದುಕೊಂಡು ಹೋಗಲು ಪ್ರಯತ್ನ ಮಾಡಿದರು. ಇದಕ್ಕೆ, ನಾನು ದಂಡ ಕಟ್ಟುತ್ತೇನೆ ಅಂದ್ರೂ ಏಕೆ ಗಾಡಿ ಮುಟ್ಟುತ್ತೀರಾ? ಎಂದು ಪೊಲೀಸರನ್ನು ಪ್ರಶ್ನಿಸಿ ತನ್ನ ಗಾಡಿ ಮೇಲೆ  ಯುವತಿ ಕೂರಲು ಮುಂದಾದರಂತೆ.

ಈ ವೇಳೆ ಯುವತಿ, ಪೊಲೀಸರ ಮಾತಿಗೆ ಮಾತು ಬೆಳೆದಿತ್ತು. ಬಳಿಕ, ಯುವತಿಗೆ ಪಿಎಸ್​ಐ ಸವಿತಾಗೌಡ ಕಪಾಳಮೋಕ್ಷ ಮಾಡಿದ್ದರು. ನಂತರ ದ್ವಿಚಕ್ರ ವಾಹನ, ಯುವತಿ ಠಾಣೆಗೆ ಕರೆತಂದಿದ್ದರು. ಆದರೆ, ಯುವತಿ ಭವಿಷ್ಯದ ದೃಷ್ಟಿಯಿಂದ ಯಾವುದೇ ಕೇಸ್​ ಹಾಕಿಲ್ಲ. ಕೇವಲ ಅನುಚಿತ ವರ್ತನೆ, ಹೆಲ್ಮೆಟ್ ಹಾಕದಿದ್ದಕ್ಕೆ ಪೊಲೀಸರು ಯುವತಿಯಿಂದ ದಂಡ ಕಟ್ಟಿಸಿಕೊಂಡು ಠಾಣೆಯಿಂದ ಕಳಿಸಿದ್ದಾರೆ.

Published On - 4:20 pm, Tue, 9 March 21

ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು
ಪಾಕಿಸ್ತಾನವು ಬಾಲ ಮುದುಡಿದ ನಾಯಿಯಂತೆ ಓಡಿ ಹೋಗಿದೆ
ಪಾಕಿಸ್ತಾನವು ಬಾಲ ಮುದುಡಿದ ನಾಯಿಯಂತೆ ಓಡಿ ಹೋಗಿದೆ