ಬೆಂಗಳೂರು ಪಕ್ಕದಲ್ಲೇ ಚಿರತೆ ಹೆಜ್ಜೆ, ಆತಂಕದಲ್ಲಿ ಜನ

|

Updated on: May 08, 2020 | 12:24 PM

ಆನೇಕಲ್: ಮಹಾಮಾರಿ ಕೊರೊನಾ ಸಮಯದಲ್ಲಿ ಇಡೀ ವಿಶ್ವವೇ ಸ್ತಬ್ಧಗೊಂಡಿದೆ. ಮನುಷ್ಯರಂತೂ ರಸ್ತೆಗೆ ಬರದೆ ಮನೆಯಲ್ಲೇ ಲಾಕ್​ ಆಗಿದ್ದಾರೆ. ಇಂತಹ ಸಮಯದಲ್ಲಿ ಪ್ರಾಣಿಗಳು ರಾಜಾರೋಷವಾಗಿ ಹೆಜ್ಜೆ ಹಾಕುತ್ತಿವೆ. ನಿನ್ನೆಯಷ್ಟೇ ನೆಲಮಂಗಲದಲ್ಲಿ ಕಾಡುಪಾಪ ಕಂಡು ಬಂದಿತ್ತು. ಇದೀಗ ಬೆಂಗಳೂರಿನ ಆನೇಕಲ್ ತಾಲೂಕಿನಲ್ಲೂ ಸಹ ಚಿರತೆ ಹೆಜ್ಜೆ ಗುರುತುಗಳು ಪತ್ತೆಯಾಗಿದೆ. ನೆರಿಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕತ್ರಿಗುಪ್ಪೆ ಗ್ರಾಮದ ಸುತ್ತ ಮುತ್ತ ಹೆಜ್ಜೆ ಗುರುತು ಕಂಡುಬಂದಿದ್ದು, ಒಂದಕ್ಕಿಂತ ಹೆಚ್ಚು ಚಿರತೆಗಳು ಇರುವ ಶಂಕೆ ವ್ಯಕ್ತವಾಗಿದೆ. ರಾಮನಾಯಕನಹಳ್ಳಿ ಕೆರೆಯ ಪಕ್ಕದಲ್ಲಿ ಹೆಜ್ಜೆ ಗುರುತು […]

ಬೆಂಗಳೂರು ಪಕ್ಕದಲ್ಲೇ ಚಿರತೆ ಹೆಜ್ಜೆ, ಆತಂಕದಲ್ಲಿ ಜನ
Follow us on

ಆನೇಕಲ್: ಮಹಾಮಾರಿ ಕೊರೊನಾ ಸಮಯದಲ್ಲಿ ಇಡೀ ವಿಶ್ವವೇ ಸ್ತಬ್ಧಗೊಂಡಿದೆ. ಮನುಷ್ಯರಂತೂ ರಸ್ತೆಗೆ ಬರದೆ ಮನೆಯಲ್ಲೇ ಲಾಕ್​ ಆಗಿದ್ದಾರೆ. ಇಂತಹ ಸಮಯದಲ್ಲಿ ಪ್ರಾಣಿಗಳು ರಾಜಾರೋಷವಾಗಿ ಹೆಜ್ಜೆ ಹಾಕುತ್ತಿವೆ. ನಿನ್ನೆಯಷ್ಟೇ ನೆಲಮಂಗಲದಲ್ಲಿ ಕಾಡುಪಾಪ ಕಂಡು ಬಂದಿತ್ತು.

ಇದೀಗ ಬೆಂಗಳೂರಿನ ಆನೇಕಲ್ ತಾಲೂಕಿನಲ್ಲೂ ಸಹ ಚಿರತೆ ಹೆಜ್ಜೆ ಗುರುತುಗಳು ಪತ್ತೆಯಾಗಿದೆ. ನೆರಿಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕತ್ರಿಗುಪ್ಪೆ ಗ್ರಾಮದ ಸುತ್ತ ಮುತ್ತ ಹೆಜ್ಜೆ ಗುರುತು ಕಂಡುಬಂದಿದ್ದು, ಒಂದಕ್ಕಿಂತ ಹೆಚ್ಚು ಚಿರತೆಗಳು ಇರುವ ಶಂಕೆ ವ್ಯಕ್ತವಾಗಿದೆ.

ರಾಮನಾಯಕನಹಳ್ಳಿ ಕೆರೆಯ ಪಕ್ಕದಲ್ಲಿ ಹೆಜ್ಜೆ ಗುರುತು ಪತ್ತೆಯಾಗಿರುವ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಫರಿಶೀಲನೆ ನಡೆಸುತ್ತಿದ್ದಾರೆ. ಗ್ರಾಮದ ಸುತ್ತ ಯಾರೂ ಓಡಾಡದಂತೆ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಯವರು ಎಚ್ಚರಿಕೆಯ ಜಾಗೃತಿ ಫಲಕ ಹಾಕಿದ್ದಾರೆ. ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

Published On - 11:43 am, Fri, 8 May 20