ಕೊರೊನಾ ಬಿಸಿ, ವಿಡಿಯೋ ಕಾಲ್ ಮೂಲಕ ನವಜೋಡಿ ನಿಖಾ
ಧಾರವಾಡ: ಕೊರೊನಾ ವೈರೆಸ್ ತಡೆಗಟ್ಟುವ ನಿಟ್ಟಿನಲ್ಲಿ ಇಡೀ ದೇಶ ಲಾಕ್‌ಡೌನ್ ಆಗಿದೆ. ಅದರಲ್ಲೂ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಪ್ರಣಯ ಪಕ್ಷಿಗಳಿಗೆ ಬಂದು ರೀತಿಯ ವನವಾಸವಾಗಿದೆ. ಈ ಸಮಯದಲ್ಲಿ ಮದುವೆ ನಿಶ್ಚಯವಾಗಿರುವವರಂತೂ ಈ ಕಡೆ ಮದುವೆಯೂ ಮಾಡಿಕೊಳ್ಳಲಾಗದೆ, ಮದುವೆಯನ್ನು ಮುಂದಕ್ಕೂ ಹಾಕಲಾಗದೆ ಪರದಾಡುತ್ತಿದ್ದಾರೆ. ಇನ್ನು ಕೆಲವರು ಸರ್ಕಾರದ ಆದೇಶವನ್ನು ಪಾಲಿಸಿ ಬೆರಳೆಣಿಕೆಯಷ್ಟು ವ್ಯಕ್ತಿಗಳ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಅದೇ ರೀತಿ ಲಾಕ್‌ಡೌನ್ ಹಿನ್ನೆಲೆ ಜೋಡಿಯೊಂದು ವಿಡಿಯೋ ಕಾಲ್ ಮುಖಾಂತರ ನಿಖಾ ಮಾಡಿಕೊಂಡಿದೆ. ಧಾರವಾಡದ ಆದರ್ಶ ನಗರದ ವರ […]
ಧಾರವಾಡ: ಕೊರೊನಾ ವೈರೆಸ್ ತಡೆಗಟ್ಟುವ ನಿಟ್ಟಿನಲ್ಲಿ ಇಡೀ ದೇಶ ಲಾಕ್‌ಡೌನ್ ಆಗಿದೆ. ಅದರಲ್ಲೂ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಪ್ರಣಯ ಪಕ್ಷಿಗಳಿಗೆ ಬಂದು ರೀತಿಯ ವನವಾಸವಾಗಿದೆ. ಈ ಸಮಯದಲ್ಲಿ ಮದುವೆ ನಿಶ್ಚಯವಾಗಿರುವವರಂತೂ ಈ ಕಡೆ ಮದುವೆಯೂ ಮಾಡಿಕೊಳ್ಳಲಾಗದೆ, ಮದುವೆಯನ್ನು ಮುಂದಕ್ಕೂ ಹಾಕಲಾಗದೆ ಪರದಾಡುತ್ತಿದ್ದಾರೆ. ಇನ್ನು ಕೆಲವರು ಸರ್ಕಾರದ ಆದೇಶವನ್ನು ಪಾಲಿಸಿ ಬೆರಳೆಣಿಕೆಯಷ್ಟು ವ್ಯಕ್ತಿಗಳ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ.
ಅದೇ ರೀತಿ ಲಾಕ್‌ಡೌನ್ ಹಿನ್ನೆಲೆ ಜೋಡಿಯೊಂದು ವಿಡಿಯೋ ಕಾಲ್ ಮುಖಾಂತರ ನಿಖಾ ಮಾಡಿಕೊಂಡಿದೆ. ಧಾರವಾಡದ ಆದರ್ಶ ನಗರದ ವರ ಇಮ್ರಾನ್ ಹಾಗೂ ಕೊಪ್ಪಳದ ವಧು ತಾಜಮಾ ಬೇಗಂ ಸಾಂಪ್ರದಾಯಿಕವಾಗಿ ವಿಡಿಯೋ ಕಾಲ್ ಮುಖಾಂತರ ಮದುವೆಯಾಗಿದ್ದಾರೆ.
ವಧು- ವರರಿಬ್ಬರನ್ನೂ ಅವರವರ ಮನೆಯಲ್ಲಿಯೇ ಕೂರಿಸಿ ಎರಡೂ ಕುಟುಂಬದವರು ವಿಡಿಯೋ ಕಾಲ್ ಮೂಲಕ ಪರಸ್ಪರರ ಒಪ್ಪಿಗೆ ಪಡೆದು ಮದುವೆ ಕಾರ್ಯ ಮುಗಿಸಿದ್ದಾರೆ. ಲಾಕ್‌ಡೌನ್ ಮುಗಿದ ಬಳಿಕ ಸೊಸೆಯನ್ನು ಮನೆಗೆ ಕರೆತರಲು ವರನ ಕುಟುಂಬ ನಿರ್ಧರಿಸಿದೆ. ಧಾರವಾಡ ಆದರ್ಶನಗರ ಜಮಾತ್ ಖಾಜಿ ಸಿಕಂದರ ಅಂಕಲಗಿ ಹಾಗೂ ಕೊಪ್ಪಳ ಜಮಾತ್ ನ ಖಾಜಿಗಳು ಈ ಆನ್‌ಲೈನ್ ಮದುವೆಗೆ ಸಾಕ್ಷಿ ಆಗಿದ್ದಾರೆ.