ಲಾಕ್​ಡೌನ್ ಪರಿಣಾಮ! ರಂಜಾನ್‍ ಹಬ್ಬಕ್ಕೆ ಬಟ್ಟೆ ಕೊಡಿಸ್ಲಿಲ್ಲ ಅಂತಾ ಪತ್ನಿ ಆತ್ಮಹತ್ಯೆ

| Updated By:

Updated on: May 27, 2020 | 6:52 PM

ಚಿಕ್ಕಮಗಳೂರು: ರಂಜಾನ್ ಹಬ್ಬಕ್ಕೆ ಬಟ್ಟೆ ಕೊಡಿಸಲಿಲ್ಲ ಎಂದು ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಮುದುಗುಣಿ ಗ್ರಾಮದಲ್ಲಿ ನಡೆದಿದೆ. ಮೃತರನ್ನ ಅಸ್ಸಾಂ ಮೂಲದ 22 ವರ್ಷದ ಹಲ್ಕಿಮಾ ಎಂದು ಗುರುತಿಸಲಾಗಿದೆ. ಮೃತ ಹಲ್ಕಿಮಾಳಿಗೆ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದು, ನಾಲ್ಕು ತಿಂಗಳ ಮಗುವಿದೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ನವೀನ್ ಲಾಯ್ಡ್ ಮಿಸ್ಕತ್ ಎಂಬುವರ ಕಾಫಿ ಎಸ್ಟೇಟ್ ಕೆಲಸಕ್ಕೆ ಅಸ್ಸಾಂ ಮೂಲದ ಕಾರ್ಮಿಕರು ಬಂದಿದ್ದರು. ಹಬ್ಬಕ್ಕೆ ಹೊಸ ಬಟ್ಟೆ […]

ಲಾಕ್​ಡೌನ್ ಪರಿಣಾಮ! ರಂಜಾನ್‍ ಹಬ್ಬಕ್ಕೆ ಬಟ್ಟೆ ಕೊಡಿಸ್ಲಿಲ್ಲ ಅಂತಾ ಪತ್ನಿ ಆತ್ಮಹತ್ಯೆ
Follow us on

ಚಿಕ್ಕಮಗಳೂರು: ರಂಜಾನ್ ಹಬ್ಬಕ್ಕೆ ಬಟ್ಟೆ ಕೊಡಿಸಲಿಲ್ಲ ಎಂದು ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಮುದುಗುಣಿ ಗ್ರಾಮದಲ್ಲಿ ನಡೆದಿದೆ. ಮೃತರನ್ನ ಅಸ್ಸಾಂ ಮೂಲದ 22 ವರ್ಷದ ಹಲ್ಕಿಮಾ ಎಂದು ಗುರುತಿಸಲಾಗಿದೆ.

ಮೃತ ಹಲ್ಕಿಮಾಳಿಗೆ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದು, ನಾಲ್ಕು ತಿಂಗಳ ಮಗುವಿದೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ನವೀನ್ ಲಾಯ್ಡ್ ಮಿಸ್ಕತ್ ಎಂಬುವರ ಕಾಫಿ ಎಸ್ಟೇಟ್ ಕೆಲಸಕ್ಕೆ ಅಸ್ಸಾಂ ಮೂಲದ ಕಾರ್ಮಿಕರು ಬಂದಿದ್ದರು. ಹಬ್ಬಕ್ಕೆ ಹೊಸ ಬಟ್ಟೆ ಬೇಕೆಂದು ಪತಿಗೆ ಕೇಳಿದ್ದಾಳೆ.

ಮುಂದಿನ ದಿನದಲ್ಲಿ ಹೊಸ ಬಟ್ಟೆ ಕೊಡಿಸೋದಾಗಿ ಹೇಳಿದ್ದ..
ಆತ ಇಷ್ಟು ದಿನ ಲಾಕ್‍ಡೌನ್ ಆಗಿ ಈಗಷ್ಟೇ ಕೆಲಸ ಆರಂಭವಾಗಿದೆ. ಮುಂದಿನ ದಿನದಲ್ಲಿ ಹೊಸ ಬಟ್ಟೆ ಕೊಡಿಸೋದಾಗಿ ಹೇಳಿದ್ದಾನೆ. ಇದರಿಂದ ಮನನೊಂದು ಆಕೆ ತೋಟಕ್ಕೆ ಹೋಗಿ ತನ್ನ ವೇಲ್‍ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸ್ಥಳಕ್ಕೆ ಬಾಳೆಹೊನ್ನೂರು ಪಿಎಸ್‍ಐ ನೀತು ಗುಡೆ ಹಾಗೂ ಸರ್ಕಲ್ ಇನ್ಸ್‍ಪೆಕ್ಟರ್ ಸುರೇಶ್ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Published On - 6:39 pm, Wed, 27 May 20