ಕ್ವಾರಂಟೈನ್ ಕೇಂದ್ರದಲ್ಲಿದ್ದ ಮಹಿಳೆ ಅನಾರೋಗ್ಯದಿಂದ ಸಾವು! ಎಲ್ಲಿ?
ಯಾದಗಿರಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಕ್ವಾರಂಟೈನ್ ಕೇಂದ್ರದಲ್ಲಿ ಮೃತಪಟ್ಟಿರುವ ಘಟನೆ ಗುರುಮಠಕಲ್ ತಾಲೂಕಿನ ಚಿನ್ನಾಕಾರ ಗ್ರಾಮದಲ್ಲಿ ನಡೆದಿದೆ. ಚಿನ್ನಾಕಾರ ಗ್ರಾಮದ 55 ವರ್ಷದ ಮಹಿಳೆ ಸಾವಿಗೀಡಾಗಿದ್ದಾರೆ. ಮೇ 19 ರಂದು ಮುಂಬೈನಿಂದ ಪತಿ ಜೊತೆ ಚಿನ್ನಾಕಾರ ಗ್ರಾಮಕ್ಕೆ ಮಹಿಳೆ ಬಂದಿದ್ದರು. ಮೇ 19 ರಂದೇ ಗ್ರಾಮದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದ್ರೆ ಇಂದು ಕ್ವಾರಂಟೈನ್ ಕೇಂದ್ರದಲ್ಲೇ ಮಹಿಳೆ ಮೃತಪಟ್ಟಿದ್ದಾರೆ. ಸಾವಿನ ಬಳಿಕ ಮಹಿಳೆಯ ಗಂಟಲು ದ್ರವ ಪಡೆದು ಕೊರೊನಾ ಟೆಸ್ಟ್ಗೆ ರವಾನಿಸಲಾಗಿದೆ.
ಯಾದಗಿರಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಕ್ವಾರಂಟೈನ್ ಕೇಂದ್ರದಲ್ಲಿ ಮೃತಪಟ್ಟಿರುವ ಘಟನೆ ಗುರುಮಠಕಲ್ ತಾಲೂಕಿನ ಚಿನ್ನಾಕಾರ ಗ್ರಾಮದಲ್ಲಿ ನಡೆದಿದೆ. ಚಿನ್ನಾಕಾರ ಗ್ರಾಮದ 55 ವರ್ಷದ ಮಹಿಳೆ ಸಾವಿಗೀಡಾಗಿದ್ದಾರೆ.
ಮೇ 19 ರಂದು ಮುಂಬೈನಿಂದ ಪತಿ ಜೊತೆ ಚಿನ್ನಾಕಾರ ಗ್ರಾಮಕ್ಕೆ ಮಹಿಳೆ ಬಂದಿದ್ದರು. ಮೇ 19 ರಂದೇ ಗ್ರಾಮದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದ್ರೆ ಇಂದು ಕ್ವಾರಂಟೈನ್ ಕೇಂದ್ರದಲ್ಲೇ ಮಹಿಳೆ ಮೃತಪಟ್ಟಿದ್ದಾರೆ. ಸಾವಿನ ಬಳಿಕ ಮಹಿಳೆಯ ಗಂಟಲು ದ್ರವ ಪಡೆದು ಕೊರೊನಾ ಟೆಸ್ಟ್ಗೆ ರವಾನಿಸಲಾಗಿದೆ.
Published On - 7:29 pm, Wed, 27 May 20