ಟಿಕ್​ಟಾಕ್​ ಮತ್ತು ಟಿಂಡರ್​ ಸಮ್ಮಿಶ್ರಣದಿಂದ ಹುಟ್ಟಿತು ಹೊಸ ಆ್ಯಪ್​!

| Updated By: ರಾಜೇಶ್ ದುಗ್ಗುಮನೆ

Updated on: Jan 16, 2021 | 4:31 PM

ಕಳೆದ ತಿಂಗಳು ಪ್ರಾರಂಭಿಸಿದ ಹೊಸ ಡೇಟಿಂಗ್ ಅಪ್ಲಿಕೇಶನ್​ ಹೆಸರೇ ಲಾಲಿ. ಟಿಂಡರ್ ಪ್ರೊಫೈಲ್​ನಲ್ಲಿ ಕೇವಲ ಪೋಟೊ, ವಿವರಗಳಷ್ಟೇ ಸಿಗುತ್ತವೆ. ಇನ್ನು, ಟಿಕ್​ಟಾಕ್​ನಲ್ಲಿ ನೀವು ವಿಡಿಯೋ ನೋಡಬಹುದು. ಈ ಎರಡೂ ಆ್ಯಪ್​ಗಳ ಸಮ್ಮಿಶ್ರಣವೇ ಲಾಲಿ. 

ಟಿಕ್​ಟಾಕ್​ ಮತ್ತು ಟಿಂಡರ್​ ಸಮ್ಮಿಶ್ರಣದಿಂದ ಹುಟ್ಟಿತು ಹೊಸ ಆ್ಯಪ್​!
ಸಾಂಕೇತಿಕ ಚಿತ್ರ
Follow us on

ಕೊರೊನಾ ಪಿಡುಗಿನಲ್ಲಿ, ಕಾಲ ಕಳೆಯಲು ಜನರು ಹೆಚ್ಚು ಬಳಸಿದ ವರ್ಚುವಲ್ ಫ್ಲಾಟ್​ಫಾರ್ಮ್​ಗಳಲ್ಲಿ ಕಿರು ವಿಡಿಯೋ ರಚಿಸುವ ಆ್ಯಪ್​ಗಳು ಮತ್ತು ಆನ್‌ಲೈನ್ ಡೇಟಿಂಗ್​ಗಳು ಅಗ್ರಸ್ಥಾನದಲ್ಲಿವೆ. ಒಂಟಿತನ ಹೋಗಲಾಡಿಸಲು ಹೆಚ್ಚು ಡೇಟಿಂಗ್ ಅಪ್ಲಿಕೇಶನ್‌, ಕಿರು ವಿಡಿಯೋ ರಚಿಸುವ ಆ್ಯಪ್​ಗಳನ್ನು ಯುವ ಜನರು ಬಳಸತೊಡಗಿದರು. ಇದನ್ನು ಮನಗಂಡ ಉದ್ಯಮಿಯೊಬ್ಬರು ಈ ಎರಡನ್ನೂ ಸಂಯೋಜಿಸಿ ಹೊಸ ಆ್ಯಪ್ ಒಂದನ್ನು ಹುಟ್ಟುಹಾಕಿದ್ದಾರೆ.

ಕಳೆದ ತಿಂಗಳು ಪ್ರಾರಂಭಿಸಿದ ಹೊಸ ಡೇಟಿಂಗ್ ಅಪ್ಲಿಕೇಶನ್​ ಹೆಸರೇ ಲಾಲಿ. ಟಿಂಡರ್ ಪ್ರೊಫೈಲ್​ನಲ್ಲಿ ಕೇವಲ ಪೋಟೊ, ವಿವರಗಳಷ್ಟೇ ಸಿಗುತ್ತವೆ. ಇನ್ನು, ಟಿಕ್​ಟಾಕ್​ನಲ್ಲಿ ನೀವು ವಿಡಿಯೋ ನೋಡಬಹುದು. ಈ ಎರಡೂ ಆ್ಯಪ್​ಗಳ ಸಮ್ಮಿಶ್ರಣವೇ ಲಾಲಿ.

ಏಕೆ ಈ ಅವಕಾಶ?

ಬಳಕೆದಾರರು ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಚಿಕ್ಕ ವೀಡಿಯೊಗಳನ್ನು ತಯಾರಿಸುತ್ತಾರೆ. ಹೀಗಾಗಿ, ವಿಡಿಯೋ ಮೂಲಕ ಹೆಚ್ಚು ಜನರನ್ನು ತಲುಪಬಹುದು ಎನ್ನುತ್ತಾರೆ ಲಾಲಿ ಆ್ಯಪ್ ಸಂಸ್ಥಾಪಕ ಮಾರ್ಕ್ ಬಾಗಡ್ಜಿಯಾನ್ ಮತ್ತು ಸಾಚಾ ಶೆರ್ಮರ್‌ಹಾರ್ನ್ ಈ ಹೊಸ ಆ್ಯಪ್ ರಚಿಸಿದ್ದಾಗಿ ಹೇಳುತ್ತಾರೆ.

ಟಿಕ್​ಟಾಕ್​ನಲ್ಲಿ ಚಿಕ್ಕ ವಿಡಿಯೋಗಳನ್ನು ರಚಿಸಬಹುದು. ಟಿಂಡರ್​ನಲ್ಲಿ ಡೇಟಿಂಗ್ ಮಾಡಲು ಇಚ್ಛಿಸುವ ಪ್ರೊಫೈಲ್ ವಿವರಣೆ ಇರುತ್ತಿತ್ತು. ಆದರೆ ಈ ಎರಡೂ ಅವಕಾಶ ಲಾಲಿ ಆ್ಯಪ್​ನಲ್ಲಿ ದೊರೆಯುತ್ತದೆ. ಡೇಟಿಂಗ್ ಮಾಡಲು ಇಚ್ಛಿಸುವವರು ಪ್ರೊಫೈಲ್ ಜತೆಗೆ ಅವರ ವ್ಯಕ್ತಿಯ ಸೃಜನಶೀಲತೆಯೂ ನಮ್ಮ ಆ್ಯಪ್​ನಲ್ಲಿ ತಿಳಿಯುತ್ತದೆ.

ಲಾಲಿ ಮತ್ತು ಇತರ ಡೇಟಿಂಗ್ ಅಪ್ಲಿಕೇಶನ್‌ಗಳ ನಡುವಿನ ವ್ಯತ್ಯಾಸವೇನು?

ಬಳಕೆದಾರರು ವಿಡಿಯೋ ಇಷ್ಟವಾದರೆ ಎಷ್ಟು ಸಲ ಬೇಕಾದರೂ ನೋಡಬಹುದು. ಇಷ್ಟವಾಗದಿದ್ದಲ್ಲಿ ವೀಡಿಯೊಗಳನ್ನು ಸ್ಕ್ರಾಲ್ ಮಾಡಬಹುದು. ಲಾಲಿಯಲ್ಲಿ ವೀಡಿಯೊಗಳಿಗೆ ಕಾಮೆಂಟ್ ಮಾಡಲು ಅವಕಾಶವಿಲ್ಲ. ಇದು ಟ್ರೋಲ್​​ ಮತ್ತು ಕಿರುಕುಳವನ್ನು ತಡೆಯಲಿದೆ.

ವಾಟ್ಸ್​ಆ್ಯಪ್​ ಗೌಪ್ಯತಾ ನೀತಿ ಬದಲಾವಣೆ ಕುರಿತು ವಿವರಣೆ ಕೇಳಿದ ಕೇಂದ್ರ ಸರ್ಕಾರ

Published On - 4:30 pm, Sat, 16 January 21