ಬೇರೊಬ್ಬನೊಂದಿಗೆ ಮದ್ವೆ: ಪ್ರಿಯಕರನ ಜೊತೆ ವೇಲ್ ಬಿಗಿದು, ಕೃಷಿ ಹೊಂಡದಲ್ಲಿ ಯುವತಿ ಆತ್ಮಹತ್ಯೆ

| Updated By: ಸಾಧು ಶ್ರೀನಾಥ್​

Updated on: Nov 20, 2020 | 12:50 PM

ಕೋಲಾರ: ವೇಲ್ ಕಟ್ಟಿಕೊಂಡು ಹೊಂಡಕ್ಕೆ ಬಿದ್ದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮುಗಿಲಬೆಲೆ ಗ್ರಾಮದಲ್ಲಿ ನಡೆದಿದೆ. ಕೃಷಿ ಹೊಂಡಕ್ಕೆ ಬಿದ್ದು ಮಾದಮಂಗಲದ ಸುರೇಶ್, ಹಾಗೂ ಕಾರಹಳ್ಳಿಯ ರೂಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೂಪಾಗೆ ಇಷ್ಟವಿಲ್ಲದಿದ್ದರೂ ಆಕೆಯ ಪೋಷಕರು 2 ತಿಂಗಳ ಹಿಂದೆ ಬೇರೊಬ್ಬನೊಂದಿಗೆ ಮದುವೆ ಮಾಡಿದ್ದರು. ಇದರಿಂದ ಬೇಸರಗೊಂಡ ಪ್ರೇಮಿಗಳಿಬ್ಬರು ಇಂದು ವೇಲ್‌ ಕಟ್ಟಿಕೊಂಡು ಕೃಷಿಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಬಂಗಾರಪೇಟೆ ಠಾಣೆ ಪೊಲೀಸರು ಭೇಟಿ ಕೊಟ್ಟು […]

ಬೇರೊಬ್ಬನೊಂದಿಗೆ ಮದ್ವೆ: ಪ್ರಿಯಕರನ ಜೊತೆ ವೇಲ್ ಬಿಗಿದು, ಕೃಷಿ ಹೊಂಡದಲ್ಲಿ ಯುವತಿ ಆತ್ಮಹತ್ಯೆ
Follow us on

ಕೋಲಾರ: ವೇಲ್ ಕಟ್ಟಿಕೊಂಡು ಹೊಂಡಕ್ಕೆ ಬಿದ್ದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮುಗಿಲಬೆಲೆ ಗ್ರಾಮದಲ್ಲಿ ನಡೆದಿದೆ. ಕೃಷಿ ಹೊಂಡಕ್ಕೆ ಬಿದ್ದು ಮಾದಮಂಗಲದ ಸುರೇಶ್, ಹಾಗೂ ಕಾರಹಳ್ಳಿಯ ರೂಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೂಪಾಗೆ ಇಷ್ಟವಿಲ್ಲದಿದ್ದರೂ ಆಕೆಯ ಪೋಷಕರು 2 ತಿಂಗಳ ಹಿಂದೆ ಬೇರೊಬ್ಬನೊಂದಿಗೆ ಮದುವೆ ಮಾಡಿದ್ದರು. ಇದರಿಂದ ಬೇಸರಗೊಂಡ ಪ್ರೇಮಿಗಳಿಬ್ಬರು ಇಂದು ವೇಲ್‌ ಕಟ್ಟಿಕೊಂಡು ಕೃಷಿಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಬಂಗಾರಪೇಟೆ ಠಾಣೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.