ವಾಟಾಳ್ ನೇತೃತ್ವದಲ್ಲಿ ಒಕ್ಕೊರಲ ನಿರ್ಧಾರ.. ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್
ಬೆಂಗಳೂರು: ಸರ್ಕಾರದಿಂದ ಮರಾಠ ಅಭಿವೃದ್ಧಿ ನಿಗಮ ರಚನೆಯನ್ನು ಖಂಡಿಸಿ ಡಿಸೆಂಬರ್ 5ರಂದು ಕರ್ನಾಟಕ ಬಂದ್ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ. ಕನ್ನಡ ಒಕ್ಕೂಟದ ಸಭೆಯಲ್ಲಿ ಕರ್ನಾಟಕ ಬಂದ್‌ಗೆ ಒಕ್ಕೊರಲ ಬೆಂಬಲ ಸಿಕ್ಕಿದೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಒಕ್ಕೂಟದ ಸಭೆ ನಡೆಯಿತು. ನಗರದ ಹೋಟೆಲ್ನಲ್ಲಿ ಕನ್ನಡ ಪರ ಸಂಘಟನೆಗಳ ಸಭೆಯಲ್ಲಿ ಬಂದ್ ನಡೆಸುವಂತೆ ತೀರ್ಮಾನ ಕೈಗೊಳ್ಳಲಾಯಿತು. ಡಿಸೆಂಬರ್ 5ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕರ್ನಾಟಕ ಬಂದ್ ನಡೆಸಲು ಘೋಷಣೆ ನೀಡಲಾಗಿದೆ. ‘ಇದು ಹುಡುಗಾಟದ ವಿಷಯವಲ್ಲ’ ಡಿಸೆಂಬರ್ 5ರಂದು […]
ಬೆಂಗಳೂರು: ಸರ್ಕಾರದಿಂದ ಮರಾಠ ಅಭಿವೃದ್ಧಿ ನಿಗಮ ರಚನೆಯನ್ನು ಖಂಡಿಸಿ ಡಿಸೆಂಬರ್ 5ರಂದು ಕರ್ನಾಟಕ ಬಂದ್ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ. ಕನ್ನಡ ಒಕ್ಕೂಟದ ಸಭೆಯಲ್ಲಿ ಕರ್ನಾಟಕ ಬಂದ್‌ಗೆ ಒಕ್ಕೊರಲ ಬೆಂಬಲ ಸಿಕ್ಕಿದೆ.
ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಒಕ್ಕೂಟದ ಸಭೆ ನಡೆಯಿತು. ನಗರದ ಹೋಟೆಲ್ನಲ್ಲಿ ಕನ್ನಡ ಪರ ಸಂಘಟನೆಗಳ ಸಭೆಯಲ್ಲಿ ಬಂದ್ ನಡೆಸುವಂತೆ ತೀರ್ಮಾನ ಕೈಗೊಳ್ಳಲಾಯಿತು. ಡಿಸೆಂಬರ್ 5ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕರ್ನಾಟಕ ಬಂದ್ ನಡೆಸಲು ಘೋಷಣೆ ನೀಡಲಾಗಿದೆ. ‘ಇದು ಹುಡುಗಾಟದ ವಿಷಯವಲ್ಲ’ ಡಿಸೆಂಬರ್ 5ರಂದು ಕರ್ನಾಟಕ ಬಂದ್ ಮಾಡುತ್ತೇವೆ. ಇದರಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ. ಬಂದ್ ಮಾಡಬೇಡಿ ಎಂದು ಸಿಎಂ BSY ಹೇಳಬಾರದು. ಡಿಸೆಂಬರ್ 5ರಂದು ಯಾವುದೇ ವಾಹನ ಸಂಚಾರ ಇರಲ್ಲ. ಟೌನ್‌ಹಾಲ್‌ನಿಂದ ಫ್ರೀಡಂಪಾರ್ಕ್‌ವರೆಗೆ ಱಲಿ ಇರುತ್ತದೆ ಎಂದು ಸಹ ಹೇಳಿದರು.
ಡಿಸೆಂಬರ್ 5ರಂದು ಬೆಳಗ್ಗೆ 10.30ಕ್ಕೆ ಱಲಿ ಮಾಡುತ್ತೇವೆ. ಕರ್ನಾಟಕ ಬಂದ್‌ಗೆ ಎಲ್ಲ ಸಂಘಟನೆ ಬೆಂಬಲ ನೀಡುತ್ತದೆ. ಹೋಟೆಲ್ ಮಾಲೀಕರ ಅಸೋಸಿಯೇಷನ್ ಬೆಂಬಲಿಸುತ್ತೆ. ಇದು ಹುಡುಗಾಟದ ವಿಷಯವಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದರು. ಕರ್ನಾಟಕ ಬಂದ್‌ಗೆ ಎಲ್ಲರೂ ಬೆಂಬಲ ನೀಡಬೇಕು ಎಂದು ಟಿವಿ9ಗೆ ವಾಟಾಳ್ ನಾಗರಾಜ್ ಪ್ರತಿಕ್ರಿಯಿಸಿದರು.
Published On - 12:11 pm, Fri, 20 November 20