ಕೊವಿಡ್ ಸೆಂಟರ್‌ನಲ್ಲಿ ನಾಯಿ ಸಾವು: ಕ್ಯಾರೆ ಅನ್ನದ ಆಸ್ಪತ್ರೆ ಸಿಬ್ಬಂದಿ, ಯಾವೂರಲ್ಲಿ?

  • TV9 Web Team
  • Published On - 13:06 PM, 20 Nov 2020
ಕೊವಿಡ್ ಸೆಂಟರ್‌ನಲ್ಲಿ ನಾಯಿ ಸಾವು: ಕ್ಯಾರೆ ಅನ್ನದ ಆಸ್ಪತ್ರೆ ಸಿಬ್ಬಂದಿ, ಯಾವೂರಲ್ಲಿ?

ಕೊಪ್ಪಳ: ಕೋವಿಡ್ ಟೆಸ್ಟ್ ಸೆಂಟರ್​ನಲ್ಲಿ ನಾಯಿ ಸತ್ತು ಬಿದ್ದಿದ್ದರೂ ಸಹ ಆಸ್ಪತ್ರೆ ಸಿಬ್ಬಂದಿಗಳುಯ ದಿವ್ಯ ನಿರ್ಲಕ್ಷ್ಯ ವಹಿಸಿರುವ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ನಡೆದಿದೆ.

ಕುಷ್ಟಗಿಯ ತಾಲೂಕು ಆಸ್ಪತ್ರೆಯ ಕೋವಿಡ್ ಟೆಸ್ಟ್ ಸೆಂಟರ್​ನಲ್ಲಿ ನಾಯಿ ಸತ್ತು ಬಿದ್ದಿದೆ. ಆದರೂ ಸಹ ಆಸ್ಪತ್ರೆ ಸಿಬ್ಬಂದಿ ನಾಯಿಯ ದೇಹವನ್ನು ಹೊರಗೆ ಹಾಕದೆ ಅಲ್ಲೇ ಬಿಟ್ಟಿದ್ದಾರೆ. ವಿಪರ್ಯಾಸವೆಂದರೆ ಇದೇ ಟೆಸ್ಟ್ ಸೆಂಟರ್​ಗೆ ಕೋವಿಡ್ ಟೆಸ್ಟ್ ಮಾಡಿಸಲು ವಿದ್ಯಾರ್ಥಿಗಳು ಬರ್ತಿದ್ದಾರೆ. ನಾಯಿ ಮೃತಪಟ್ಟು ದಿನಗಳೇ ಕಳೆದಿದ್ದರೂ ಆಸ್ಪತ್ರೆ ಸಿಬ್ಬಂದಿ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಆಸ್ಪತ್ರೆ ಆವರಣದಲ್ಲೆಲ್ಲಾ ದುರ್ನಾತ ಬೀರುತ್ತಿದ್ರೂ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.