Email -SMS ಕಡೆಗಣನೆ.. ಏನಿದು ಆದಾಯ ತೆರಿಗೆ ಇಲಾಖೆಯ ಹೊಸ ಎಚ್ಚರಿಕೆ
ಬೆಂಗಳೂರು: ಆದಾಯ ತೆರಿಗೆ ಇಲಾಖೆ (ಇನ್ಕಂ ಟ್ಯಾಕ್ಸ್ ಡಿಪಾರ್ಟ್ಮೆಂಟ್ ) ಕಳುಹಿಸುವ ಎಷ್ಟೋ ಎಸ್ಎಂಎಸ್ಗಳನ್ನು ಸಾರ್ವಜನಿಕರು ಗಮನಿಸುವುದೇ ಇಲ್ಲ. ಜನರಿಗೆ ಸಹಾಯವಾಗುವಂತಹ ಎಷ್ಟೋ ಮಾಹಿತಿಗಳನ್ನು ಈ-ಮೇಲ್ ಮೂಲಕ ಕಳಿಸಲಾಗುತ್ತದೆ. ‘ನಾವು ಕಳುಹಿಸುವ ಸಂದೇಶಗಳನ್ನು ಯಾವುದೇ ಕಾರಣಕ್ಕೆ ಕಡೆಗಣಿಸದಿರಿ’ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮೂಲಕ ತಿಳಿಸಿದೆ. ತೆರಿಗೆ ಮರುಪಾವತಿಯನ್ನು ಜನರು ನೇರವಾಗಿ ಅಕೌಂಟ್ಗೆ ಹಾಕಬಹುದು.. ಕೊರೊನಾ ಸಂಕಟ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ತೆರಿಗೆ ಮರುಪಾವತಿಯನ್ನು ನೇರವಾಗಿ ಅಕೌಂಟ್ಗೆ ಹಾಕುವ ಅವಕಾಶವನ್ನು ಜನರಿಗೆ ನೀಡಿದೆ. ಈ […]
ಬೆಂಗಳೂರು: ಆದಾಯ ತೆರಿಗೆ ಇಲಾಖೆ (ಇನ್ಕಂ ಟ್ಯಾಕ್ಸ್ ಡಿಪಾರ್ಟ್ಮೆಂಟ್ ) ಕಳುಹಿಸುವ ಎಷ್ಟೋ ಎಸ್ಎಂಎಸ್ಗಳನ್ನು ಸಾರ್ವಜನಿಕರು ಗಮನಿಸುವುದೇ ಇಲ್ಲ. ಜನರಿಗೆ ಸಹಾಯವಾಗುವಂತಹ ಎಷ್ಟೋ ಮಾಹಿತಿಗಳನ್ನು ಈ-ಮೇಲ್ ಮೂಲಕ ಕಳಿಸಲಾಗುತ್ತದೆ. ‘ನಾವು ಕಳುಹಿಸುವ ಸಂದೇಶಗಳನ್ನು ಯಾವುದೇ ಕಾರಣಕ್ಕೆ ಕಡೆಗಣಿಸದಿರಿ’ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮೂಲಕ ತಿಳಿಸಿದೆ.
ತೆರಿಗೆ ಮರುಪಾವತಿಯನ್ನು ಜನರು ನೇರವಾಗಿ ಅಕೌಂಟ್ಗೆ ಹಾಕಬಹುದು.. ಕೊರೊನಾ ಸಂಕಟ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ತೆರಿಗೆ ಮರುಪಾವತಿಯನ್ನು ನೇರವಾಗಿ ಅಕೌಂಟ್ಗೆ ಹಾಕುವ ಅವಕಾಶವನ್ನು ಜನರಿಗೆ ನೀಡಿದೆ. ಈ ಕಾರಣದಿಂದಾಗಿ ತೆರಿಗೆದಾರರಿಗೆ ಈ-ಮೇಲ್ ಕಳುಹಿಸುವ ಮೂಲಕ ಮಾಹಿತಿ ನೀಡಲಾಗುತ್ತಿದೆ. ಹಾಗೂ ಇನ್ಕಂ ಟ್ಯಾಕ್ಸ್ ಡಿಪಾರ್ಟ್ಮೆಂಟ್ನಿಂದ ಈ-ಮೇಲ್ ಬಂದಿದೆ ಎಂದಾದರೆ ಅದು ಮಹತ್ವಪೂರ್ಣದ್ದೇ ಆಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಯಾವುದು ಸತ್ಯ ಹಾಗೂ ಯಾವುದು ಸುಳ್ಳು ಎಂಬುದು ತೆರಿಗೆದಾರರ ಸಮಸ್ಯೆಯಾಗಿದೆ. ಇಂತಹ ಸಮಸ್ಯೆಯನ್ನು ಅರಿತ ಇನ್ಕಂ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಕೆಲವು ದಿನಗಳ ಹಿಂದೆ ಈ-ಮೇಲ್ ಕಳುಹಿಸುವ ಮೂಲಕ, ತೆರಿಗೆದಾರರಿಗೆ ಈ-ಮೇಲ್ ಐಡಿ ಹಾಗೂ ಎಸ್ಎಂಎಸ್ ಸೆಂಡರ್ ಐಡಿ ಮತ್ತು ವೆಬ್ ಸೈಟ್ನ ಮಾಹಿತಿಯನ್ನು ನೀಡಿದೆ. ಈ-ಮೇಲ್ನಲ್ಲಿ ಇರುವ ಲಿಸ್ಟ್ ಹೊರತುಪಡಿಸಿ ಬೇರೆ ಏನಾದರೂ ಸಂದೇಶಗಳು ಬಂದಲ್ಲಿ, ಸಂಪೂರ್ಣವಾಗಿ ತಿಳಿದುಕೊಳ್ಳಿ ಎಂದು ಸಾರ್ವಜನಿಕರಿಗೆ ಕಿವಿಮಾತು ಹೇಳಿದೆ.
Make sure that you don't miss any emails coming from us.If it’s from us, it’s important!#CheckReadRespond@nsitharamanoffc @Anurag_Office @FinMinIndia @PIB_India pic.twitter.com/ezgcCFlvJ1
— Income Tax India (@IncomeTaxIndia) November 18, 2020