ದೇಶದಲ್ಲಿ ಸುಮಾರು 20 ಲಸಿಕೆಗಳು ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ -ಸಚಿವ ಹರ್ಷವರ್ಧನ್
ದೆಹಲಿ: ಕೊವಿಡ್ ಲಸಿಕೆ ವಿತರಣಾ ಪ್ರಕ್ರಿಯೆಗೆ ಆದ್ಯತೆ ನೀಡುವುದು ಸಹಜವಾಗಿದ್ದು, ಮುಂದಿನ ಜುಲೈ-ಆಗಸ್ಟ್ನ ವೇಳೆಗೆ 400-500 ಮಿಲಿಯನ್ ಲಸಿಕೆಗಳು ಲಭ್ಯವಾಗಲಿದೆ. ಸುಮಾರು 25ರಿಂದ 30 ಕೋಟಿ ಜನರಿಗೆ ಇದನ್ನು ನೀಡಬಹುದಾಗಿದೆ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದರು. ಮುಂದಿನ 3-4 ತಿಂಗಳಲ್ಲಿ ಕೋವಿಡ್ ಲಸಿಕೆ ಸಿದ್ಧವಾಗಲಿದೆ ಎಂಬ ವಿಶ್ವಾಸವಿದೆ. ಮೊದಲ ಆದ್ಯತೆಯನ್ನು ವೈದ್ಯಕೀಯ ಸಿಬ್ಬಂದಿ ಮತ್ತು ಕೊರೊನಾ ಯೋಧರಿಗೆ ನೀಡಲಾಗುವುದು. ನಂತರದಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ, ಬಳಿಕ 50-65 ವಯೋಮಾನದವರಿಗೆ ನೀಡಲಾಗುವುದು. ಇದೆಲ್ಲದರ ನಂತರ, 50 ವರ್ಷಕ್ಕಿಂತ […]
ದೆಹಲಿ: ಕೊವಿಡ್ ಲಸಿಕೆ ವಿತರಣಾ ಪ್ರಕ್ರಿಯೆಗೆ ಆದ್ಯತೆ ನೀಡುವುದು ಸಹಜವಾಗಿದ್ದು, ಮುಂದಿನ ಜುಲೈ-ಆಗಸ್ಟ್ನ ವೇಳೆಗೆ 400-500 ಮಿಲಿಯನ್ ಲಸಿಕೆಗಳು ಲಭ್ಯವಾಗಲಿದೆ. ಸುಮಾರು 25ರಿಂದ 30 ಕೋಟಿ ಜನರಿಗೆ ಇದನ್ನು ನೀಡಬಹುದಾಗಿದೆ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದರು.
ಮುಂದಿನ 3-4 ತಿಂಗಳಲ್ಲಿ ಕೋವಿಡ್ ಲಸಿಕೆ ಸಿದ್ಧವಾಗಲಿದೆ ಎಂಬ ವಿಶ್ವಾಸವಿದೆ. ಮೊದಲ ಆದ್ಯತೆಯನ್ನು ವೈದ್ಯಕೀಯ ಸಿಬ್ಬಂದಿ ಮತ್ತು ಕೊರೊನಾ ಯೋಧರಿಗೆ ನೀಡಲಾಗುವುದು. ನಂತರದಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ, ಬಳಿಕ 50-65 ವಯೋಮಾನದವರಿಗೆ ನೀಡಲಾಗುವುದು. ಇದೆಲ್ಲದರ ನಂತರ, 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹಾಗೂ ಇತರೆ ಕಾಯಿಲೆಯನ್ನು ಹೊಂದಿದವರಿಗೆ ಹೀಗೆ ಹಂತ ಹಂತವಾಗಿ ಲಸಿಕೆಯನ್ನು ನೀಡಲಾಗುವುದು ಎಂದು ಸಚಿವರು ಹೇಳಿದರು. ಎಲ್ಲಾ ಪ್ರಮುಖ ಲಸಿಕೆಗಳಿಗೆ ಕ್ಲಿನಿಕಲ್ ಪ್ರಯೋಗಗಳನ್ನು ಆಯೋಜಿಸುತ್ತಿದ್ದು, ಸುಮಾರು 20 ಲಸಿಕೆಗಳು ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ ಎಂದು ಹೇಳಿದರು.
ದೇಶದಲ್ಲಿ ಪ್ರಯೋಗ ಹಂತದಲ್ಲಿರುವ ಲಸಿಕೆಗಳು ವಿವರ ಸೀರಮ್ ಇನ್ಸ್ಟಿಟ್ಯೂಟ್ನ ಆಕ್ಸ್ಫರ್ಡ್ ಲಸಿಕೆ 3ನೇ ಹಂತದ ಪ್ರಯೋಗವು ಬಹುತೇಕ ಪೂರ್ಣಗೊಂಡಿದೆ. ಜೊತೆಗೆ, ಭಾರತ್ ಬಯೋಟೆಕ್ ಮತ್ತು ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ (ICMR) ಈಗಾಗಲೇ ಅಭಿವೃದ್ಧಿ ಪಡಿಸಿದ ಲಸಿಕೆಯ 3ನೇ ಹಂತದ ಕ್ಲಿನಿಕಲ್ ಪ್ರಯೋಗ ಪ್ರಾರಂಭವಾಗಿದೆ. ಶೀಘ್ರದಲ್ಲೇ ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ನ ರಷ್ಯಾ ಮೂಲದ ಸ್ಪಟ್ನಿಕ್ 5 ಲಸಿಕೆ 2ಮತ್ತು 3ನೇ ಹಂತದ ಪ್ರಯೋಗದಲ್ಲಿದೆ. ಇದಲ್ಲದೆ ಬಯೋಲಾಜಿಕಲ್ E ಲಿಮಿಟೆಡ್ 1 ಮತ್ತು 2ನೇ ಹಂತದ ಪ್ರಯೋಗಗಳನ್ನು ಪ್ರಾರಂಭಿಸಿದೆ.