ಮಗುವಿನ ಅಜ್ಜಿ ಅಂತಾ ಹೇಳಿ.. ನವಜಾತ ಶಿಶು ಕದ್ದು ಮಾರಿದ್ದ ಕಿರಾತಕರು ಅಂದರ್​ ಆದರು

ಮಗುವಿನ ಅಜ್ಜಿ ಅಂತಾ ಹೇಳಿ.. ನವಜಾತ ಶಿಶು ಕದ್ದು ಮಾರಿದ್ದ ಕಿರಾತಕರು ಅಂದರ್​ ಆದರು

ಬೆಂಗಳೂರು: ವಾಣಿ ವಿಲಾಸ್ ಆಸ್ಪತ್ರೆಯ ಸಿಬ್ಬಂದಿ ಯಡವಟ್ಟಿನಿಂದ ಕಿರಾತಕರು ಮಗುವನ್ನು ಅಪಹರಿಸಿದ ಪ್ರಸಂಗ ನಡೆದಿತ್ತು. ಆದ್ರೆ ಕಿಡ್ನಾಪ್ ಕಿರಾತಕರನ್ನು ನಿನ್ನೆ ರಾತ್ರಿ ವಿವಿ ಪುರಂ ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 9 ರಂದು ವಾಣಿವಿಲಾಸ್ ಆಸ್ಪತ್ರೆಯಲ್ಲಿ ಅಬ್ದುಲ್ ರಶೀದ್ ಹಾಗೂ ಆಯೇಶಾ ದಂಪತಿಗೆ ಮಗು ಜನಿಸಿತ್ತು. ಆದರೆ ಮಗುವಿನ ಲಂಗ್ಸ್​ನಲ್ಲಿ ನೀರು ಶೇಖರಣೆ ಆಗಿದ್ದರಿಂದ ಮಗುವನ್ನು ಎನ್ಐಸಿಯುನಲ್ಲಿ ಇಡಲಾಗಿತ್ತು. ನವೆಂಬರ್​ 11 ರಂದು ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಹೀಗಾಗಿ ಮಗುವನ್ನು ತಾಯಿ ಬಳಿ ಕರೆದುಕೊಂಡು ಹೋಗುವಂತೆ […]

pruthvi Shankar

| Edited By: sadhu srinath

Nov 20, 2020 | 11:42 AM

ಬೆಂಗಳೂರು: ವಾಣಿ ವಿಲಾಸ್ ಆಸ್ಪತ್ರೆಯ ಸಿಬ್ಬಂದಿ ಯಡವಟ್ಟಿನಿಂದ ಕಿರಾತಕರು ಮಗುವನ್ನು ಅಪಹರಿಸಿದ ಪ್ರಸಂಗ ನಡೆದಿತ್ತು. ಆದ್ರೆ ಕಿಡ್ನಾಪ್ ಕಿರಾತಕರನ್ನು ನಿನ್ನೆ ರಾತ್ರಿ ವಿವಿ ಪುರಂ ಪೊಲೀಸರು ಬಂಧಿಸಿದ್ದಾರೆ.

ನವೆಂಬರ್ 9 ರಂದು ವಾಣಿವಿಲಾಸ್ ಆಸ್ಪತ್ರೆಯಲ್ಲಿ ಅಬ್ದುಲ್ ರಶೀದ್ ಹಾಗೂ ಆಯೇಶಾ ದಂಪತಿಗೆ ಮಗು ಜನಿಸಿತ್ತು. ಆದರೆ ಮಗುವಿನ ಲಂಗ್ಸ್​ನಲ್ಲಿ ನೀರು ಶೇಖರಣೆ ಆಗಿದ್ದರಿಂದ ಮಗುವನ್ನು ಎನ್ಐಸಿಯುನಲ್ಲಿ ಇಡಲಾಗಿತ್ತು. ನವೆಂಬರ್​ 11 ರಂದು ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಹೀಗಾಗಿ ಮಗುವನ್ನು ತಾಯಿ ಬಳಿ ಕರೆದುಕೊಂಡು ಹೋಗುವಂತೆ ಆಸ್ಪತ್ರೆಯಲ್ಲಿ ಅನೌನ್ಸ್​ಮೆಂಟ್ ಆಗಿದೆ.

80 ಸಾವಿರಕ್ಕೆ ಮಾರಾಟ ಮಾಡಿದ್ದಳು.. ಅನೌನ್ಸ್​ಮೆಂಟ್ ಆಗಿ 2 ನಿಮಿಷದೊಳಗೆ ಎಂಟ್ರಿ ಕೊಟ್ಟಿದ್ದ ಮಹಿಳೆಯೊಬ್ಬಳು ತಾನು ಮಗುವಿನ ಅಜ್ಜಿ ಅಂತಾ ಹೇಳಿ, ಮಗುವನ್ನು ನವೆಂಬರ್ 11 ರಂದು ಮಧ್ಯಾಹ್ನ 1.30 ರ ಸಮಯದಲ್ಲಿ ಕದ್ದು ಪರಾರಿಯಾಗಿದ್ದಳು. ಪರಾರಿಯಾಗಿದ್ದ ಮಹಿಳೆ ಮಗುವನ್ನು ಕುಮಾರಸ್ವಾಮಿ ಲೇಔಟ್​ನಲ್ಲಿ 80 ಸಾವಿರಕ್ಕೆ ಮಾರಾಟ ಮಾಡಿದ್ದಳು. ಬಳಿಕ ಮಗು ಕಾಣದಾದಾಗ ಎಚ್ಚೆತ್ತುಕೊಂಡ ಆಸ್ಪತ್ರೆ ಸಿಬ್ಬಂದಿ ಹಾಗೂ ಮಗುವಿನ ಪೋಷಕರು ಈ ಸಂಬಂಧವಾಗಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಮಗುವನ್ನು ಸುರಕ್ಷಿತವಾಗಿ ಪೋಷಕರ ವಶಕ್ಕೆ ನೀಡಿದ್ದಾರೆ. ಆದರೆ ಇಲ್ಲಿ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯತನ ಎದ್ದು ಕಾಣಿಸುತ್ತಿದೆ.

ಬಹುಮುಖ್ಯವಾಗಿ ಹಾಸ್ಪಿಟಲ್ ಸಿಬ್ಬಂದಿ ಸರಿಯಾಗಿ ವೆರಿಫೈ ಮಾಡದೇ ಪೋಷಕರು ಅಂತಾ ಬಂದೋರಿಗೆ ಮಗು ಕೊಟ್ಟಿದ್ದು ದೊಡ್ಡ ಅಪರಾಧವಾಗಿದೆ. ಅಲ್ಲದೆ ನಿಯಮದ ಪ್ರಕಾರ ಮಗುವನ್ನು ತಾಯಿಯ ಬಳಿಯೇ ಬಿಡಬೇಕು. ಇದ್ಯಾವುದನ್ನೂ ಲೆಕ್ಕಿಸದೇ ಪೋಷಕರು ಅಂತಾ ಬಂದ ಮಹಿಳೆ ಕೈಗೆ ಸಿಬ್ಬಂದಿ ಮಗುವನ್ನು ಕೊಟ್ಟಿದ್ದರು. ಮುಂದೆಯಾದರೂ ತಪ್ಪು ಸಿಬ್ಬಂದಿ ಎಚ್ಚರವಹಿಸಬೇಕಿದೆ.

Follow us on

Related Stories

Most Read Stories

Click on your DTH Provider to Add TV9 Kannada