ಪ್ರೀತಿಗೆ ಧರ್ಮ ಅಡ್ಡಿ, ಬಾವಿಗೆ ಹಾರಿ ಅಪ್ರಾಪ್ತ ಪ್ರೇಮಿಗಳ ಆತ್ಮಹತ್ಯೆ? ಎಲ್ಲಿ?
ವಿಜಯಪುರ: ಪ್ರೀತಿಗೆ ಧರ್ಮ ಅಡ್ಡ ಬರುತ್ತಿದೆ ಎಂಬ ಕಾರಣದಿಂದಾಗಿ ಇಬ್ಬರು ಪ್ರೇಮಿಗಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬನಹಟ್ಟಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಶಿವಕುಮಾರ ಚೌದರಿ ( 19 ) ಹಾಗೂ ಶಬಾನಾ ಮುಜಾವರ ( 16 ) ಸಾವನ್ನಪ್ಪಿರುವ ದುರ್ದೈವಿಗಳು. ಒಂದೇ ಗ್ರಾಮದವರಾಗಿದ್ದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಇಬ್ಬರೂ ಬೇರೆ ಬೇರೆ ಕೋಮಿನವರಾಗಿದ್ದು, ತಮ್ಮ ಪ್ರೀತಿಗೆ ಧರ್ಮ ಅಡ್ಡ ಬರುತ್ತಿದೆ […]

ವಿಜಯಪುರ: ಪ್ರೀತಿಗೆ ಧರ್ಮ ಅಡ್ಡ ಬರುತ್ತಿದೆ ಎಂಬ ಕಾರಣದಿಂದಾಗಿ ಇಬ್ಬರು ಪ್ರೇಮಿಗಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬನಹಟ್ಟಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಶಿವಕುಮಾರ ಚೌದರಿ ( 19 ) ಹಾಗೂ ಶಬಾನಾ ಮುಜಾವರ ( 16 ) ಸಾವನ್ನಪ್ಪಿರುವ ದುರ್ದೈವಿಗಳು.
ಒಂದೇ ಗ್ರಾಮದವರಾಗಿದ್ದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಇಬ್ಬರೂ ಬೇರೆ ಬೇರೆ ಕೋಮಿನವರಾಗಿದ್ದು, ತಮ್ಮ ಪ್ರೀತಿಗೆ ಧರ್ಮ ಅಡ್ಡ ಬರುತ್ತಿದೆ ಎಂಬ ಭಯದಿಂದ ಗ್ರಾಮದ ಹೊರವಲಯದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ದೇವರಹಿಪ್ಪರಗಿ ಪೊಲೀಸ್ ಠಾಣಾ ಪಿಎಸ್ಐ ರವಿ ಯಡವಣ್ಣವರ ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.