ಕೊವಿಡ್ ಕೇರ್ ಸೆಂಟರ್ ಆಗಿ ಬದಲಾಯ್ತು ಲಕ್ಸುರಿ ಹೋಟೆಲ್! ಎಲ್ಲಿ?
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ದಿನೇ ದಿನೇ ಸ್ಫೋಟಗೊಳ್ಳುತ್ತಲೇ ಇದೆ. ಜಿಲ್ಲಾಡಳಿತ ಎಷ್ಟೇ ಪ್ರಯತ್ನಿಸಿದ್ರೂ ಜಿಲ್ಲೆಯಲ್ಲಿ ಮಾತ್ರ ಕೊರೊನಾ ಕಂಟ್ರೋಲ್‌ಗೇ ಬರ್ತಿಲ್ಲ. ಸೋಂಕಿತರ ಸಂಖ್ಯೆ ಹೆಚ್ಚಳದಿಂದ ಸೂಕ್ತ ಚಿಕಿತ್ಸೆ ನೀಡಲು ಅಗತ್ಯ ಸೌಕರ್ಯ ಕಲ್ಪಿಸಲು ಜಿಲ್ಲಾಡಳಿತ ಸರ್ಕಸ್ ಮಾಡ್ತಿದೆ. ಈ ನಡುವೆ ಲಕ್ಸುರಿ ಹೋಟೆಲ್ ಒಂದನ್ನ ಕೋವಿಡ್ ಕೇರ್ ಸೆಂಟರ್ ಮಾಡೋ ಮೂಲಕ ಸೋಂಕಿತರ ರಕ್ಷಣೆಗೆ ಮುಂದಾಗಿದೆ. ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ […]
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ದಿನೇ ದಿನೇ ಸ್ಫೋಟಗೊಳ್ಳುತ್ತಲೇ ಇದೆ. ಜಿಲ್ಲಾಡಳಿತ ಎಷ್ಟೇ ಪ್ರಯತ್ನಿಸಿದ್ರೂ ಜಿಲ್ಲೆಯಲ್ಲಿ ಮಾತ್ರ ಕೊರೊನಾ ಕಂಟ್ರೋಲ್‌ಗೇ ಬರ್ತಿಲ್ಲ. ಸೋಂಕಿತರ ಸಂಖ್ಯೆ ಹೆಚ್ಚಳದಿಂದ ಸೂಕ್ತ ಚಿಕಿತ್ಸೆ ನೀಡಲು ಅಗತ್ಯ ಸೌಕರ್ಯ ಕಲ್ಪಿಸಲು ಜಿಲ್ಲಾಡಳಿತ ಸರ್ಕಸ್ ಮಾಡ್ತಿದೆ. ಈ ನಡುವೆ ಲಕ್ಸುರಿ ಹೋಟೆಲ್ ಒಂದನ್ನ ಕೋವಿಡ್ ಕೇರ್ ಸೆಂಟರ್ ಮಾಡೋ ಮೂಲಕ ಸೋಂಕಿತರ ರಕ್ಷಣೆಗೆ ಮುಂದಾಗಿದೆ.
ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗ್ತಿದೆ. ಬೆಂಗಳೂರು ಹೊರತುಪಡಿಸಿದ್ರೆ ರಾಜ್ಯದಲ್ಲಿ ಅತಿಹೆಚ್ಚು ಕೊರೊನಾ ಕೇಸ್‌ಗಳು ಬಳ್ಳಾರಿಯಲ್ಲಿ ಪತ್ತೆಯಾಗಿವೆ. ಹೀಗಾಗಿ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಜೊತೆಗೆ ಇವರೆಲ್ಲರಿಗೂ ಕೊವಿಡ್ ಕೇರ್ ಸೆಂಟರ್‌ಗಳಲ್ಲಿ ಅಗತ್ಯ ಬೆಡ್‌ಗಳ ಸೌಲಭ್ಯ ಕಲ್ಪಿಸುವುದು ಕೂಡ ಜಿಲ್ಲಾಡಳಿತಕ್ಕೆ ಸವಾಲಾಗಿದೆ.
ಖಾಸಗಿ ಹೋಟೆಲ್‌ನಲ್ಲಿ ಕೊವಿಡ್ ಚಿಕಿತ್ಸೆಗೆ ಸಕಲ ವ್ಯವಸ್ಥೆ! ಕೊರೊನಾ ಸೋಂಕಿತರಿಗೆ ವೈದ್ಯಕೀಯ ಸೇವೆ ನೀಡಲು ಖಾಸಗಿ ಹೋಟೆಲ್ ಮುಂದಾಗಿದೆ. ಬಾಲಾ ರಿಜೆನ್ಸಿ ಹೋಟೆಲ್‌ವೊಂದನ್ನ ಕೊವಿಡ್ ಕೇರ್ ಸೆಂಟರ್ ಮಾಡೋ ಮೂಲಕ ಸೋಂಕಿತರ ಆರೋಗ್ಯ ರಕ್ಷಣೆಗೆ ಹೋಟೆಲ್ ಮಾಲೀಕರು ಮುಂದಾಗಿದ್ದಾರೆ. ಖಾಸಗಿ ವೈದ್ಯರ ಸಹಕಾರದೊಂದಿಗೆ ಹಾಗೂ ಜಿಲ್ಲಾಡಳಿತದ ಸಹಕಾರದಿಂದ ಸುಸಜ್ಜಿತ ಹೋಟೆಲ್‌ನ್ನು ಕೊವಿಡ್ ಕೇರ್ ಸೆಂಟರ್ ಮಾಡಲಾಗಿದ್ದು, ಇದ್ರಲ್ಲಿ 50 ಬೆಡ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕಾಗಿ 50 ಕೋಣೆ ಮೀಸಲಿಡಲಾಗಿದೆ. ಸೋಂಕಿತರು ಯಾರು ಬೇಕಾದ್ರೂ ಇಲ್ಲಿ ದಾಖಲಾಗಬಹುದು. ನಿಗದಿತ ಮೊತ್ತವನ್ನ ಪಾವತಿಸಬೇಕು. ಪ್ರತಿ ದಿನಕ್ಕೆ 5 ಸಾವಿರದಂತೆ 10 ದಿನಗಳವರೆಗೂ 50 ಸಾವಿರ ಹಣ ಪಾವತಿ ಮಾಡಬೇಕು. ಕೂಡಲೇ ಗುಣಮುಖರಾದ್ರೆ ಅಲ್ಲಿವರೆಗೆ ಮಾತ್ರ ಹಣ ಪಾವತಿ ಮಾಡಬೇಕು
ಇನ್ನು ಈ ಕೊವಿಡ್ ಕೇರ್ ಸೆಂಟರ್‌ನಲ್ಲಿ ನಿತ್ಯ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಲಾಗುತ್ತೆ. ದಿನದ 24 ಗಂಟೆಗಳ ಕಾಲ ನರ್ಸ್‌ಗಳು ಕರ್ತವ್ಯದಲ್ಲಿರುತ್ತಾರೆ. ಜೊತೆಗೆ ಯಾವಾಗ್ಲೂ ಆ್ಯಂಬುಲೆನ್ಸ್ ಸೇವೆ, ಪ್ರಾಥಮಿಕ ವೈದ್ಯಕೀಯ ಸೇವೆ, ಎನ್ 95 ಮಾಸ್ಕ್, ಫೇಸ್ ಶೀಲ್ಡ್, ಥರ್ಮೋಮೀಟರ್ ಪೂರೈಕೆ, ಸುಸಜ್ಜಿತ ಕೋಣೆ, ಎಲ್‌ಇಡಿ ಟಿವಿ, ಪ್ರತಿದಿನ 3 ಬಾರಿ ಪೌಷ್ಠಿಕ ಆಹಾರ, ಉಪಹಾರ, ಶುದ್ಧ ಕುಡಿಯುವ ನೀರು, ಕಷಾಯ, ನಿಂಬೆಯುಕ್ತ ಬಿಸಿನೀರು, ಜ್ಯೂಸ್, ಬಿಸಿ ನೀರು ಕಾಯಿಸಿಕೊಳ್ಳಲು ಕಿಟೆಲ್, ಹೌಸ್ ಕೀಪಿಂಗ್ ವ್ಯವಸ್ಥೆಯೂ ಇರಲಿದೆ.
ಇನ್ನು ಸೋಂಕಿತರು ತಮಗೆ ಬೇಕಾದ ಊಟವನ್ನ ಹೋಟೆಲ್‌ನಲ್ಲಿ ಪಡೆಯಬಹುದು. ಅದಕ್ಕೆ ಪ್ರತ್ಯೇ ಶುಲ್ಕ ಪಾವತಿ ಮಾಡ್ಬೇಕು ಅಷ್ಟೇ.. ಇನ್ನು ಸೋಂಕಿತರಿಗೆ ಅಗತ್ಯಬಿದ್ರೆ ಯಾರಿಗಾದ್ರೂ ಗಂಭೀರ ಸ್ಥಿತಿ ಉಂಟಾದ್ರೆ ಅವರಿಗೆ ವಿಮ್ಸ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಹೋಟೆಲ್‌ನಲ್ಲಿ ಕೊವಿಡ್ ಕೇರ್ ಸೆಂಟರ್ ಮಾಡಿದ್ದಕ್ಕೆ ಜಿಲ್ಲಾಧಿಕಾರಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದಿನೇ ದಿನೆ ಕೊರೊನಾ ಸೋಂಕಿತರು ಜಿಲ್ಲೆಯಲ್ಲಿ ಏರಿಕೆಯಾಗ್ತಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಕೂಡ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗ್ತಿದೆ. ಆದ್ರೆ ಇದ್ರ ಜತೆಗೆ ಜನರು ಕೂಡ ಮಾಸ್ಕ್ ಹಾಗೂ ದೈಹಿತ ಅಂತರವನ್ನ ಕಾಪಾಡಿಕೊಂಡು ಕೊರೊನಾ ಸೋಂಕು ಹರಡದಂತೆ ಎಚ್ಚರಿಕೆ ವಹಿಸೋದು ಅತ್ಯವಶ್ಯಕ.