ಮೈಸೂರಲ್ಲಿ ಶಿವನಿಗೆ ಬಂಗಾರದ ಮೂರ್ತಿ, ಬಾಗಲಕೋಟೆಯಲ್ಲಿ ಮುಸ್ಲಿಮರ ಕೈಯಲ್ಲಿ ಅರಳಿದ ಹರ

ಮೈಸೂರು: ಶಿವರಾತ್ರಿಯ ಶುಭಘಳಿಗೆ.. ದೇಗುಲದಲ್ಲಿ ಶಿವನಾಮಸ್ಮರಣೆ. ಎಲ್ಲೆಲ್ಲೂ ಭಕ್ತರ ಝೇಂಕಾರ. ಹರನಿಗೆ ಪೂಜೆ ಪುನಸ್ಕಾರ. ಬಂಗಾರದ ಮೂರ್ತಿಗೆ ಹೂವಿನ ಅಲಂಕಾರ. ಈ ವಿಶೇಷ ದಿನದಂದು ಈಶ್ವರನ ದ್ಯಾನ ಮಾಡೋದೇ ಒಂದು ಸೌಭಾಗ್ಯ. ಇವತ್ತು ನಾಡಿನೆಲ್ಲೆಡೆ ಶಿವರಾತ್ರಿ ಸಡಗರ. ಭಕ್ತರೆಲ್ಲ ಶಿವನಾಮಸ್ಮರಣೆಯಲ್ಲಿ ಮುಳುಗುತ್ತಾರೆ. ಅದ್ರಲ್ಲೂ ಮೈಸೂರಿನ ಅರಮನೆಯಲ್ಲಿರುವ ತ್ರಿನೇಶ್ವರ ದೇವಸ್ಥಾನದಲ್ಲಿ ಚಿನ್ನದ ಮೂರ್ತಿಯ ದರ್ಶನ ಪಡೆಯೋದೇ ಒಂದು ಅದೃಷ್ಟ. ಯಾಕಂದ್ರೆ, 11 ಕೆಜಿ ತೂಕದ ಚಿನ್ನದ ಮುಖವಾಡವನ್ನು ಮೈಸೂರು ಅರಸು ಜಯಚಾಮರಾಜೇಂದ್ರ ಒಡೆಯರ್ ಅವರು ಕಾಣಿಕೆಯಾಗಿ ನೀಡಿದ್ದರು. ಇದು […]

ಮೈಸೂರಲ್ಲಿ ಶಿವನಿಗೆ ಬಂಗಾರದ ಮೂರ್ತಿ, ಬಾಗಲಕೋಟೆಯಲ್ಲಿ ಮುಸ್ಲಿಮರ ಕೈಯಲ್ಲಿ ಅರಳಿದ ಹರ
Follow us
ಸಾಧು ಶ್ರೀನಾಥ್​
|

Updated on:Feb 21, 2020 | 7:57 AM

ಮೈಸೂರು: ಶಿವರಾತ್ರಿಯ ಶುಭಘಳಿಗೆ.. ದೇಗುಲದಲ್ಲಿ ಶಿವನಾಮಸ್ಮರಣೆ. ಎಲ್ಲೆಲ್ಲೂ ಭಕ್ತರ ಝೇಂಕಾರ. ಹರನಿಗೆ ಪೂಜೆ ಪುನಸ್ಕಾರ. ಬಂಗಾರದ ಮೂರ್ತಿಗೆ ಹೂವಿನ ಅಲಂಕಾರ. ಈ ವಿಶೇಷ ದಿನದಂದು ಈಶ್ವರನ ದ್ಯಾನ ಮಾಡೋದೇ ಒಂದು ಸೌಭಾಗ್ಯ.

ಇವತ್ತು ನಾಡಿನೆಲ್ಲೆಡೆ ಶಿವರಾತ್ರಿ ಸಡಗರ. ಭಕ್ತರೆಲ್ಲ ಶಿವನಾಮಸ್ಮರಣೆಯಲ್ಲಿ ಮುಳುಗುತ್ತಾರೆ. ಅದ್ರಲ್ಲೂ ಮೈಸೂರಿನ ಅರಮನೆಯಲ್ಲಿರುವ ತ್ರಿನೇಶ್ವರ ದೇವಸ್ಥಾನದಲ್ಲಿ ಚಿನ್ನದ ಮೂರ್ತಿಯ ದರ್ಶನ ಪಡೆಯೋದೇ ಒಂದು ಅದೃಷ್ಟ. ಯಾಕಂದ್ರೆ, 11 ಕೆಜಿ ತೂಕದ ಚಿನ್ನದ ಮುಖವಾಡವನ್ನು ಮೈಸೂರು ಅರಸು ಜಯಚಾಮರಾಜೇಂದ್ರ ಒಡೆಯರ್ ಅವರು ಕಾಣಿಕೆಯಾಗಿ ನೀಡಿದ್ದರು. ಇದು ವರ್ಷವಿಡೀ ಮುಜರಾಯಿ ಇಲಾಖೆ ವಶದಲ್ಲಿರುತ್ತೆ. ಶಿವರಾತ್ರಿ ಹಿನ್ನೆಲೆಯಲ್ಲಿ ನಿನ್ನೆ ಪೊಲೀಸ್ ಭದ್ರತೆಯಲ್ಲಿ ದೇವಸ್ಥಾನಕ್ಕೆ ತರಲಾಯ್ತು. ನಂತರ ದೇವಸ್ಥಾನದ ಆಡಳಿತ ಮಂಡಳಿ ವಶಕ್ಕೆ ನೀಡಲಾಯ್ತು.

ಬಳಿಕ ಚಿನ್ನದ ಶಿವನ ಮುಖವಾಡಕ್ಕೆ ಗಂಗೆಯನ್ನು ಜೋಡಿಸಲಾಗುತ್ತದೆ. ಜೊತೆಗೆ ಬೆಳ್ಳಿ ಲೇಪಿತ ಅರ್ಧ ಚಂದ್ರನನ್ನು ಪ್ರತಿಷ್ಠಾಪಿಸಲಾಗುತ್ತೆ. ಬೆಳಗ್ಗೆ ಶಿವಲಿಂಗಕ್ಕೆ ವಿವಿಧ ಅಭಿಷೇಕಗಳನ್ನು ಮಾಡಿ, ನಂತರ ಈ ಮುಖವಾಡವನ್ನು ಶಿವಲಿಂಗಕ್ಕೆ ತೊಡಿಸಲಾಗುತ್ತೆ. ವರ್ಷಕ್ಕೊಮ್ಮೆ ಮಾತ್ರ ದರ್ಶನ ಕೊಡೋ ಈ ಅಪರೂಪದ ಶಿವನನ್ನು ನೋಡಲು ಈ ದಿನ ಭಕ್ತ ಸಾಗರವೇ ಹರಿದು ಬರುತ್ತೆ.

ಇಲ್ಲಿ ಚಿನ್ನದ ಮುಖವಾಡದಲ್ಲಿ ಶಿವ ದರ್ಶನ ಕೊಡ್ತಿದ್ರೆ, ಬಾಗಲಕೋಟೆಯಲ್ಲಿ ಮುಸ್ಲಿಂರ ಕೈಯಲ್ಲಿ ಪರಮೇಶ್ವರ ಜನ್ಮ ತಾಳುತ್ತಿದ್ದಾನೆ. ಬೀಳಗಿ ತಾಲೂಕಿನ ಕೊಪ್ಪ ಎಸ್.ಕೆ. ಗ್ರಾಮದ ಅಬ್ದುಲ್ ರಜಾಕ್ ಕುಟುಂಬ 3 ತಲೆಮಾರುಗಳಿಂದ ಶಿವನ ಮೂರ್ತಿ ತಯಾರಿಸುತ್ತಿದೆ. ವಿಶೇಷ ಅಂದ್ರೆ, ತಮ್ಮ ಊರಿನ ಪಕ್ಕದ ಗುಡ್ಡದಲ್ಲಿನ ಕಲ್ಲಿನಿಂದ ಈ ಶಿವಪೀಠಕಗಳನ್ನು ತಯಾರಿಸ್ತಾರೆ.

ಇವು ಕಪ್ಪು ಬಣ್ಣದ ಲಿಂಗುವಿನೊಳಗೆ ಇರುತ್ತವೆ. ಸಾದಾಲಿಂಗ, ಜ್ಯೋತಿರ್ಲಿಂಗ, ಪಂಚಸೂತ್ರ ಅನ್ನೋ 3 ವಿಧದ ಶಿವಲಿಂಗಪೀಠಕ ತಯಾರಿಸುತ್ತಿದ್ದಾರೆ. ವರ್ಷಕ್ಕೆ ಎರಡೂವರೆ ಲಕ್ಷ ಶಿವಪೀಠಕಗಳನ್ನು ರೆಡಿ ಮಾಡ್ತಿದ್ದು, ಶಿವರಾತ್ರಿ ವೇಳೆ ಇವುಗಳಿಗೆ ಭಾರಿ ಬೇಡಿಕೆ ಬರುತ್ತಂತೆ. ಒಟ್ನಲ್ಲಿ, ಇವತ್ತು ಶಿವರಾತ್ರಿ. ಎಲ್ಲೆಲ್ಲೂ ಶಿವನಾಮ ಸ್ಮರಣೆ ಮೊಳಗುತ್ತಿದೆ. ಭಕ್ತರೆಲ್ಲಾ ಪರಮೇಶ್ವರನ ಆರಾಧನೆಯಲ್ಲಿ ತಲ್ಲೀನರಾಗಿದ್ದಾರೆ.

Published On - 7:53 am, Fri, 21 February 20