ರವಿಶಂಕರ್ ಗುರೂಜಿ ಆಶ್ರಮದಲ್ಲಿ ಮಾವುತನನ್ನೇ ತುಳಿದು ಸಾಯಿಸಿದ ಸಾಕಾನೆ

|

Updated on: Mar 10, 2020 | 10:17 AM

ರಾಮನಗರ: ಮಾವುತನನ್ನೇ ಸಾಕಾನೆ ತುಳಿದು ಸಾಯಿಸಿರುವ ಘಟನೆ ನಗರದ ಹೊರವಲಯದಲ್ಲಿರುವ ರವಿಶಂಕರ್ ಗುರೂಜಿ ಆಶ್ರಮದಲ್ಲಿ ನಡೆದಿದೆ. ಕೇರಳ ಮೂಲದ ಮಾವುತ ರಾಜೇಶ್(34) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ರವಿಶಂಕರ್ ಗುರೂಜಿ ಆಶ್ರಮದಲ್ಲಿ ಎರಡು ಆನೆಗಳನ್ನು ಸಾಕಲಾಗಿದೆ. ಆನೆ ಮಹೇಶ್ವರಗೆ ಮೇವು ಹಾಕಲು ಮಾವುತ ರಾಜೇಶ್​ ಹೋಗಿದ್ದಾನೆ. ಈ ವೇಳೆ ಮದವೇರಿದ ಸಾಕಾನೆ ಏಕಾಏಕಿ ಮಾವುತನನ್ನ ಸೊಂಡಲಿನಿಂದ ಹಾಗೂ ಕಾಲಿನಿಂದ ತುಳಿದಿದೆ. ಇದರಿಂದ ಸ್ಥಳದಲ್ಲೇ ರಾಜೇಶ್ ಮೃತಪಟ್ಟಿದ್ದಾನೆ. ಮೃತ ರಾಜೇಶ್ ಕಳೆದ ಎಂಟು ವರ್ಷಗಳಿಂದ ಆಶ್ರಮದಲ್ಲಿದ್ದ ಆನೆಗಳನ್ನ ನೋಡಿಕೊಳ್ಳುತ್ತಿದ್ದ. ಘಟನಾ ಸ್ಥಳಕ್ಕೆ […]

ರವಿಶಂಕರ್ ಗುರೂಜಿ ಆಶ್ರಮದಲ್ಲಿ ಮಾವುತನನ್ನೇ ತುಳಿದು ಸಾಯಿಸಿದ ಸಾಕಾನೆ
Follow us on

ರಾಮನಗರ: ಮಾವುತನನ್ನೇ ಸಾಕಾನೆ ತುಳಿದು ಸಾಯಿಸಿರುವ ಘಟನೆ ನಗರದ ಹೊರವಲಯದಲ್ಲಿರುವ ರವಿಶಂಕರ್ ಗುರೂಜಿ ಆಶ್ರಮದಲ್ಲಿ ನಡೆದಿದೆ. ಕೇರಳ ಮೂಲದ ಮಾವುತ ರಾಜೇಶ್(34) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ರವಿಶಂಕರ್ ಗುರೂಜಿ ಆಶ್ರಮದಲ್ಲಿ ಎರಡು ಆನೆಗಳನ್ನು ಸಾಕಲಾಗಿದೆ. ಆನೆ ಮಹೇಶ್ವರಗೆ ಮೇವು ಹಾಕಲು ಮಾವುತ ರಾಜೇಶ್​ ಹೋಗಿದ್ದಾನೆ. ಈ ವೇಳೆ ಮದವೇರಿದ ಸಾಕಾನೆ ಏಕಾಏಕಿ ಮಾವುತನನ್ನ ಸೊಂಡಲಿನಿಂದ ಹಾಗೂ ಕಾಲಿನಿಂದ ತುಳಿದಿದೆ. ಇದರಿಂದ ಸ್ಥಳದಲ್ಲೇ ರಾಜೇಶ್ ಮೃತಪಟ್ಟಿದ್ದಾನೆ.

ಮೃತ ರಾಜೇಶ್ ಕಳೆದ ಎಂಟು ವರ್ಷಗಳಿಂದ ಆಶ್ರಮದಲ್ಲಿದ್ದ ಆನೆಗಳನ್ನ ನೋಡಿಕೊಳ್ಳುತ್ತಿದ್ದ. ಘಟನಾ ಸ್ಥಳಕ್ಕೆ ಸ್ಥಳಕ್ಕೆ ಕಗ್ಗಲಿಪುರ ಠಾಣೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Published On - 4:24 pm, Mon, 9 March 20