ಮಾಲ್ ಆರಂಭವಾಗಿ 2 ವಾರವಾಯ್ತು: ಜನ ಬರುತ್ತಿಲ್ಲ, ಮತ್ತೆ ಲಾಕ್ಡೌನ್ ಮಾಡಬೇಡಿ ಪ್ಲೀಸ್!
ಬೆಂಗಳೂರು: ಕೊರೊನಾ ವಿರುದ್ಧದ ಸಮರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಲಾಕ್ಡೌನ್ ಜಾರಿ ಮಾಡಲಾಗಿತ್ತು. ಆದ್ರೆ ಅದರಿಂದ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು ವರ್ತರ ಆದಾಯ ಅಕ್ಷರಶಃ ಪಾತಾಳ ಕಚ್ಚಿತ್ತು. ಆದರೆ, ಕಳೆದ ಎರಡು ವಾರಗಳ ಹಿಂದೆ ಕುಸಿದಿದ್ದ ಆರ್ಥಿಕ ವಹಿವಾಟಿಗೆ ಮತ್ತೆ ಉತ್ತೇಜನೆ ನೀಡಲು ಮಾಲ್ ಮತ್ತು ಇತರೆ ಸಂಸ್ಥೆಗಳನ್ನ ಮತ್ತೆ ಆರಂಭಿಸಲು ಅನುಮತಿ ನೀಡಲಾಗಿತ್ತು. ಆದರೆ, ನಗರದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದು ಪುನಃ ಲಾಕ್ಡೌನ್ ಜಾರಿಗೊಳಿಸಬೇಕೆಂಬ ಕೂಗು ಎಲ್ಲೆಡೆಯಿಂದ ಕೇಳಿಬರುತ್ತಿದೆ. ಬಟ್ ಇದಕ್ಕೆ […]
ಬೆಂಗಳೂರು: ಕೊರೊನಾ ವಿರುದ್ಧದ ಸಮರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಲಾಕ್ಡೌನ್ ಜಾರಿ ಮಾಡಲಾಗಿತ್ತು. ಆದ್ರೆ ಅದರಿಂದ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು ವರ್ತರ ಆದಾಯ ಅಕ್ಷರಶಃ ಪಾತಾಳ ಕಚ್ಚಿತ್ತು. ಆದರೆ, ಕಳೆದ ಎರಡು ವಾರಗಳ ಹಿಂದೆ ಕುಸಿದಿದ್ದ ಆರ್ಥಿಕ ವಹಿವಾಟಿಗೆ ಮತ್ತೆ ಉತ್ತೇಜನೆ ನೀಡಲು ಮಾಲ್ ಮತ್ತು ಇತರೆ ಸಂಸ್ಥೆಗಳನ್ನ ಮತ್ತೆ ಆರಂಭಿಸಲು ಅನುಮತಿ ನೀಡಲಾಗಿತ್ತು.
ಆದರೆ, ನಗರದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದು ಪುನಃ ಲಾಕ್ಡೌನ್ ಜಾರಿಗೊಳಿಸಬೇಕೆಂಬ ಕೂಗು ಎಲ್ಲೆಡೆಯಿಂದ ಕೇಳಿಬರುತ್ತಿದೆ. ಬಟ್ ಇದಕ್ಕೆ ಮಾಲ್ಗಳ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಾಲ್ಗಳು ಆರಂಭವಾಗಿ ಕೇವಲ ಎರಡು ವಾರಗಳಾಗಿದೆ. ಮತ್ತೆ ಲಾಕ್ಡೌನ್ ಜಾರಿ ಮಾಡಿದ್ರೆ ತುಂಬಾ ತೊಂದರೆಯಾಗುತ್ತೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸದ್ಯಕ್ಕೆ ಕೇವಲ 10% ರಷ್ಟು ಮಾತ್ರ ಜನರು ಮಾಲ್ಗಳಿಗೆ ಭೇಟಿ ಕೊಡ್ತಿದ್ದಾರೆ. ವ್ಯಾಪಾರ ವಹಿವಾಟಿಲ್ಲದೆ ಮಳಿಗೆಗಳು ಬಿಕೋ ಎನ್ನುತ್ತಿವೆ. ಹಾಗಾಗಿ ಸದ್ಯಕ್ಕೆ ಲಾಕ್ಡೌನ್ ಜಾರಿಗೊಳಿಸುವುದು ಬೇಡ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಬೇಕಿದ್ದರೆ ಮತ್ತಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳೋಕೆ ರೆಡಿ. ಜೊತೆಗೆ ಸರ್ಕಾರದ ಈಗಿನ ನಿಯಮಗಳನ್ನ ಚಾಚೂ ತಪ್ಪದೆ ಪಾಲಿಸುತ್ತೇವೆ ಎಂದು ನಗರದ ಮಾಲ್ವೊಂದರ ಮ್ಯಾನೇಜರ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
Published On - 5:42 pm, Tue, 23 June 20