ಟೆಸ್ಟ್ ಡ್ರೈವ್‌ಗೆ ಬೈಕ್ ತಗೊಂಡು ಪರಾರಿಯಾಗುತ್ತಿದ್ದ ಖದೀಮ ಪೊಲೀಸರ ಬಲೆಗೆ

| Updated By: ಸಾಧು ಶ್ರೀನಾಥ್​

Updated on: Dec 02, 2020 | 3:09 PM

ಬೈಕ್ ಮಾರುವ ಯೋಜನೆ ಇದೆಯಾ.. OLXನಲ್ಲಿ ಜಾಹೀರಾತು ಹಾಕಿದ್ದೀರಾ ಹಾಗಾದ್ರೆ ಇಂತಹ ಖದೀಮರ ಬಗ್ಗೆ ಎಚ್ಚರವಿರಲಿ. ಯಾಕಂದ್ರೆ ಈತ ಮಾಲೀಕರ ಮುಂದೆಯೇ ಅವರ ಬೈಕನ್ನ ರಾಜಾರೋಷವಾಗಿ ಕದಿಯುತ್ತಾನೆ. ಆದ್ರೆ ಟೆನ್ಶನ್ ಬೇಡ. ಪೊಲೀಸರ ಕೈಯಲ್ಲಿ ಆರೋಪಿ ಲಾಕ್ ಆಗಿದ್ದಾನೆ.

ಟೆಸ್ಟ್ ಡ್ರೈವ್‌ಗೆ ಬೈಕ್ ತಗೊಂಡು ಪರಾರಿಯಾಗುತ್ತಿದ್ದ ಖದೀಮ ಪೊಲೀಸರ ಬಲೆಗೆ
ಬೈಕ್ ಟೆಸ್ಟ್ ಡ್ರೈವ್‌ಗೆ ಕೇಳಿ ಪರಾರಿಯಾಗುತ್ತಿದ್ದ ಖದೀಮ ಅರೆಸ್ಟ್.
Follow us on

ತುಮಕೂರು: ಬೈಕ್ ಮಾರುವ ಯೋಜನೆ ಇದೆಯಾ..? OLX ನಲ್ಲಿ ಜಾಹೀರಾತು ಹಾಕಿದ್ದೀರಾ? ಹಾಗಾದ್ರೆ ಇಂತಹ ಖದೀಮರ ಬಗ್ಗೆ ಎಚ್ಚರವಿರಲಿ. ಯಾಕಂದ್ರೆ ಈತ ಮಾಲೀಕರ ಮುಂದೆಯೇ ಅವರ ಬೈಕನ್ನ ರಾಜಾರೋಷವಾಗಿ ಕದಿಯುತ್ತಾನೆ. ಆದ್ರೆ ಟೆನ್ಶನ್ ಬೇಡ. ಪೊಲೀಸರ ಕೈಯಲ್ಲಿ ಆರೋಪಿ ಲಾಕ್ ಆಗಿದ್ದಾನೆ.

ಬೈಕ್ ಟೆಸ್ಟ್ ಡ್ರೈವ್‌ಗೆ ಕೇಳಿ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ತಿಲಕ್ ಪಾರ್ಕ್, ಕ್ಯಾತ್ಸಂದ್ರ ಪೊಲೀಸರು ಬಂಧಿಸಿದ್ದಾರೆ. ತುಮಕೂರಿನ ಹುಸೇನ್(30) ಬಂಧಿತ ಆರೋಪಿ. ಹುಸೇನ್ OLX ನಲ್ಲಿ ಜಾಹೀರಾತು ನೋಡಿ ಬೈಕ್ ಖರೀದಿಗೆ ಹೋಗ್ತಿದ್ದ.

ಬಳಿಕ ಬೈಕ್ ಮಾಲೀಕರನ್ನ ಭೇಟಿ ಮಾಡಿ ಟೆಸ್ಟ್ ಡ್ರೈವ್‌ಗೆ ಹೋಗಿ ಬರ್ತೀನಿ ಅಂತಾ ಬೈಕ್ ಕದ್ದು ಪರಾರಿಯಾಗುತ್ತಿದ್ದ. ಇದೇ ರೀತಿ ತುಮಕೂರು ಜಿಲ್ಲೆಯ ವಿವಿಧೆಡೆ ಹಲವು ಬೈಕ್​ಗಳನ್ನು ಎಗರಿಸಿದ್ದಾನೆ. ತಿಲಕ್ ಪಾರ್ಕ್ ಮತ್ತು ಕ್ಯಾತ್ಸಂದ್ರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಒಟ್ಟು ಐದು ಬೈಕ್​ಗಳನ್ನ ವಶ‌ಕ್ಕೆ ಪಡೆಯಲಾಗಿದೆ.