ಸಾಮಾಜಿಕ ತಾಣಗಳಲ್ಲಿ ಪ್ರಕಟವಾಗುವ ‘ಇಂತಹ’ ಉದ್ಯೋಗ ಜಾಹೀರಾತಿನ ಬಗ್ಗೆ ಎಚ್ಚರ ಎಚ್ಚರಾ!

ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದ ನೇಮಕಾತಿ ಮತ್ತು ಇತರ ನವೀಕರಣಗಳನ್ನು ಆಯಾ ಸಂಸ್ಥೆಗಳ ಅಧಿಕೃತ ವೆಬ್​ಸೈಟ್​ಗಳಲ್ಲಿ ಘೋಷಿಸಲಾಗುತ್ತದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಬಿಡುಗಡೆ ಮಾಡುವ ಉದ್ಯೋಗ ಪತ್ರಿಕೆಯ ಸಾಪ್ತಾಹಿಕ ಆವೃತ್ತಿಯಲ್ಲಿ ಸರ್ಕಾರಿ ಸಂಸ್ಥೆಗಳು ಉದ್ಯೋಗ ಜಾಹೀರಾತುಗಳನ್ನು ಬಿಡುಗಡೆ ಮಾಡುತ್ತವೆ ಎಂದು ಪಿಬಿಐ ಫ್ಯಾಕ್ಟ್​ ಚೆಕ್ ಹೇಳಿದೆ.

ಸಾಮಾಜಿಕ ತಾಣಗಳಲ್ಲಿ ಪ್ರಕಟವಾಗುವ ‘ಇಂತಹ’ ಉದ್ಯೋಗ ಜಾಹೀರಾತಿನ ಬಗ್ಗೆ ಎಚ್ಚರ ಎಚ್ಚರಾ!
ಸಾಂದರ್ಭಿಕ ಚಿತ್ರ
preethi shettigar

| Edited By: sadhu srinath

Dec 02, 2020 | 2:57 PM

ದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ನಕಲಿ ಸುದ್ದಿಗಳನ್ನು ನಂಬಿ ಮೊಸ ಹೋದವರ ಸಂಖ್ಯೆ ಬಹಳ ದೊಡ್ಡದಿದೆ. ಆದರೆ ಎಷ್ಟೇ ಇಂತಹ ನಕಲಿ ಪೋಸ್ಟ್​ಗಳ ಬಗ್ಗೆ ಎಚ್ಚರಿಕೆ ನೀಡಿದರು ಇಂದಿಗೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್ ಸತ್ಯವೆಂದು ನಂಬುವವರಿದ್ದಾರೆ.

ಸದ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ನಕಲಿ ಉದ್ಯೋಗದ ಜಾಹೀರಾತಿನ ವಿರುದ್ಧ ಸರ್ಕಾರದ ಫ್ಯಾಕ್ಟ್ ಚೆಕ್ ಸಂಸ್ಥೆ ಪಿಬಿಐ ಫ್ಯಾಕ್ಟ್ ಚೆಕ್ ಉದ್ಯೋಗಾಕಾಂಕ್ಷಿಗಳಿಗೆ ಎಚ್ಚರಿಕೆ ನೀಡಿದೆ. ನಕಲಿ ಜಾಹೀರಾತೊಂದು ನೇಮಕಾತಿ ಪತ್ರಗಳನ್ನು ಅಬಕಾರಿ ಸಚಿವಾಲಯ ಬಿಡುಗಡೆ ಮಾಡಿದೆ ಎಂದು ಹೇಳಿಕೊಂಡಿದ್ದು, ಅಭ್ಯರ್ಥಿಗಳು ಕೆಲಸ ಪಡೆಯಲು ಬಯಸಿದರೆ ನೋಂದಣಿ ಶುಲ್ಕವಾಗಿ 2,200 ರೂ. ಪಾವತಿಸುವಂತೆ ಕೇಳಿದ್ದಾರೆ.

ಕೆಲವು ತಿಂಗಳ ಹಿಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಪ್ರಕಟಣೆಯದ್ದೆಂದು ಹೇಳಿಕೊಳ್ಳುವ ಇದೇ ರೀತಿಯ ಉದ್ಯೋಗ ನೇಮಕಾತಿ ಪತ್ರದ ನಕಲಿ ಜಾಹೀರಾತು ಪ್ರಸಾರವಾಗಿತ್ತು ಎಂದು ಪಿಬಿಐ ಸಂಸ್ಥೆ ತಿಳಿಸಿದೆ.

ಈ ನೇಮಕಾತಿ ಪತ್ರವು ನಕಲಿಯಾಗಿದ್ದು, ಇಂತಹ ಯಾವುದೇ ಸಚಿವಾಲಯ ಅಥವಾ ಅಬಕಾರಿ ಇಲಾಖೆಯ ಉದ್ಯೋಗಾವಕಾಶದ ಯೋಜನೆ ಕೇಂದ್ರ ಸರ್ಕಾರದ ಅಡಿಯಲ್ಲಿ ಇಲ್ಲ ಎಂದು ಪಿಬಿಐ ಫ್ಯಾಕ್ಟ್​ ಚೆಕ್ ದೃಢಪಡಿಸಿದೆ.

ಈ ನಕಲಿ ಉದ್ಯೋಗ ನೇಮಕಾತಿ ಪತ್ರವು ಲೋಗೊ, ಸಹಿ ಮತ್ತು ಸ್ಟ್ಯಾಂಪ್​ ಹೊಂದಿದ್ದು, ಆ ಮೂಲಕ ಉದ್ಯೋಗಾಕಾಂಕ್ಷಿಗಳನ್ನು ಮೊಸಗೊಳಿಸಲು ಪ್ರಯತ್ನಿಸಲಾಗಿದೆ ಎಂದು ಪಿಬಿಐ ಫ್ಯಾಕ್ಟ್​ ಚೆಕ್ ತಿಳಿಸಿದೆ.

ಆಗಸ್ಟ್​ನಲ್ಲಿ ರೈಲ್ವೆ ಸಚಿವಾಲಯದ ನಕಲಿ ನೇಮಕಾತಿ ಅರ್ಜಿ ಬಗ್ಗೆ ಅಭ್ಯರ್ಥಿಗಳಿಗೆ ಎಚ್ಚರಿಕೆ ನೀಡಿತ್ತು. ಈ ನಕಲಿ ನೇಮಕಾತಿ ಪತ್ರವು ರೈಲ್ವೆಯಲ್ಲಿ 5,000 ಕ್ಕೂ ಹೆಚ್ಚು ಖಾಲಿ ಹುದ್ದೆಗಳು ಲಭ್ಯವಿದ್ದು, ನೇಮಕಾತಿ ನಡೆಸಲು ಖಾಸಗಿ ಕಂಪನಿಯನ್ನು ನೇಮಿಸಲಾಗಿದೆ ಎಂದು ಹೇಳಿಕೊಂಡಿದ್ದಷ್ಟೇ ಅಲ್ಲದೇ ಅರ್ಜಿ ಶುಲ್ಕವಾಗಿ 750 ರೂ. ಪಾವತಿಸುವಂತೆ ತಿಳಿಸಿತ್ತು.

ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದ ನೇಮಕಾತಿ ಮತ್ತು ಇತರ ನವೀಕರಣಗಳನ್ನು ಆಯಾ ಸಂಸ್ಥೆಗಳ ಅಧಿಕೃತ ವೆಬ್​ಸೈಟ್​ಗಳಲ್ಲಿ ಘೋಷಿಸಲಾಗುತ್ತದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಬಿಡುಗಡೆ ಮಾಡುವ ಉದ್ಯೋಗ ಪತ್ರಿಕೆಯ ಸಾಪ್ತಾಹಿಕ ಆವೃತ್ತಿಯಲ್ಲಿ ಸರ್ಕಾರಿ ಸಂಸ್ಥೆಗಳು ಉದ್ಯೋಗ ಜಾಹೀರಾತುಗಳನ್ನು ಬಿಡುಗಡೆ ಮಾಡುತ್ತವೆ ಎಂದು ಪಿಬಿಐ ಫ್ಯಾಕ್ಟ್​ ಚೆಕ್ ಹೇಳಿದೆ.

ಇದನ್ನೂ ಓದಿ: ಆನ್​ಲೈನ್​ ಸುದ್ದಿ ವೆಬ್​ಸೈಟ್​ಗಳಿಗೆ ಅಂಕುಶ; ನೋಂದಣಿ ಇನ್ನು ಕಡ್ಡಾಯ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada