AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರ ಗಳಿಕೆ ದುಪ್ಪಟ್ಟು ಅಲ್ಲ; ಅರ್ಧದಷ್ಟು ಇಳಿಕೆ! ಇದು ‘ಸೂಟ್ ಬೂಟ್ ಕೀ ಸರ್ಕಾರ್’ ಕೊಡುಗೆ ಎಂದ ರಾಹುಲ್ ಗಾಂಧಿ

ಹೊಸ ಕೃಷಿ ಕಾಯ್ದೆಗಳಿಂದ ರೈತರಿಗೆ ದುಪ್ಪಟ್ಟು ಲಾಭ ಸಿಗಲಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ನಿಜವಾಗಿ ಅವರ ಹಣಗಳಿಕೆಯ ಪ್ರಮಾಣ ಅರ್ಧದಷ್ಟು ಇಳಿಕೆಯಾಗಿದೆ.

ರೈತರ ಗಳಿಕೆ ದುಪ್ಪಟ್ಟು ಅಲ್ಲ; ಅರ್ಧದಷ್ಟು ಇಳಿಕೆ! ಇದು ‘ಸೂಟ್ ಬೂಟ್ ಕೀ ಸರ್ಕಾರ್’ ಕೊಡುಗೆ ಎಂದ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on:Apr 07, 2022 | 5:42 PM

Share

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಪರ ಮಾತನಾಡಿರುವ ರಾಹುಲ್ ಗಾಂಧಿ, ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಹೊಸ ಕೃಷಿ ಕಾಯ್ದೆಗಳಿಂದ ರೈತರಿಗೆ ದುಪ್ಪಟ್ಟು ಲಾಭ ಸಿಗಲಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ನಿಜವಾಗಿ ಅವರ ಹಣ ಗಳಿಕೆಯ ಪ್ರಮಾಣ ಅರ್ಧದಷ್ಟು ಇಳಿಕೆಯಾಗಿದೆ ಎಂದಿದ್ದಾರೆ.

ಸರ್ಕಾರದ ಆಪ್ತಮಿತ್ರರ ಗುಂಪು ನಾಲ್ಕು ಪಾಲು ಹಣ ಮಾಡಿಕೊಂಡಿದೆ ಎಂದೂ ಆರೋಪಿಸಿರುವ ರಾಹುಲ್, ಕೇಂದ್ರವನ್ನು ಸೂಟ್ ಬೂಟ್ ಸರ್ಕಾರ್ ಎಂದು ಕರೆದಿದ್ದಾರೆ. ಲೂಟಿ ಮಾಡುವ, ಸುಳ್ಳಿನ ಸರ್ಕಾರ ಎಂದಿದ್ದಾರೆ.

ಪಂಜಾಬ್ ಮತ್ತು ಹರ್ಯಾಣ ಭಾಗದ ರೈತರು ದೆಹಲಿಯ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರದ ಹೊಸ ಕೃಷಿ ಕಾಯ್ದೆಯ ವಿರುದ್ಧ ಸಮರ ಸಾರಿದ್ದಾರೆ.

ಇದನ್ನೂ ಓದಿ: ರೈತ ಹೋರಾಟದ ಪರ ಮಾತನಾಡಿದ ಕೆನಡಾ ಪ್ರಧಾನಿ: ಆಂತರಿಕ ವಿಚಾರಗಳ ಬಗ್ಗೆ ಅನಗತ್ಯ ಮಾತು ಬೇಡ ಎಂದ ಭಾರತ

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಲೋಕಸಭಾ ಸದಸ್ಯ ರಾಹುಲ್ ಗಾಂಧಿ, ರೈತರ ಮೇಲೆ ಪೊಲೀಸರು ದಾಳಿ ನಡೆಸಿರುವ ವೀಡಿಯೋ ಹಂಚಿಕೊಂಡಿದ್ದಾರೆ. ವೀಡಿಯೋದ ಹಿನ್ನೆಲೆ ಧ್ವನಿಯಾಗಿ ‘ರೈತರ ಸಮಸ್ಯೆಗಳನ್ನು ಪರಿಹರಿಸುತ್ತೇವೆ. ಅವರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ’ ಎಂದ ಮೋದಿ ಭಾಷಣದ ತುಣುಕನ್ನು ಬಳಸಿಕೊಂಡಿದ್ದಾರೆ.

ಇದನ್ನೂ ಓದಿ: ಹೊಸ ಕೃಷಿ ಕಾಯ್ದೆಯ ಬಗ್ಗೆ ರೈತರ ಹಾದಿ ತಪ್ಪಿಸಲಾಗುತ್ತಿದೆ: ವಾರಣಾಸಿಯಲ್ಲಿ ಪ್ರಧಾನಿ ಮೋದಿ ಹೇಳಿಕೆ

Published On - 2:48 pm, Wed, 2 December 20