ಅಕ್ರಮವಾಗಿ ಕೇರಳಕ್ಕೆ ಸಾಗಿಸ್ತಿದ್ದ 500 ಮೂಟೆ ಪಡಿತರ ಅಕ್ಕಿ ವಶ, ಎಲ್ಲಿ?

ಮೈಸೂರು: ಕೊರೊನಾ ಲಾಕ್​ಡೌನ್ ನಡುವೆಯೂ ಅಕ್ರಮವಾಗಿ ಸಾಗಿಸ್ತಿದ್ದ 500 ಮೂಟೆ ಪಡಿತರ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೇರಳ ಮೂಲದ ಲಾರಿಯಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ರೈಸ್ ಮಿಲ್‌ನಿಂದ ನಂಜನಗೂಡು ಮಾರ್ಗವಾಗಿ ಕೇರಳಕ್ಕೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸಲಾಗುತ್ತಿತ್ತು. ಈ ವೇಳೆ ಕಾರ್ಯಾಚರಣೆಗೆ ಇಳಿದಿದ್ದ ನಂಜನಗೂಡಿನ ಆಹಾರ ಇಲಾಖೆ ಮತ್ತು ಪೊಲೀಸರು ನಂಜನಗೂಡು ಪಟ್ಟಣದ ಹೆಜ್ಜಿಗೆ ಸೇತುವೆಯ ಬಳಿ ಸುಮಾರು 500 ಅಕ್ಕಿ ಮೂಟೆ ಸಾಗಿಸುತ್ತಿದ್ದ ಲಾರಿ ಹಾಗೂ ಕೇರಳ ಮೂಲದ ನಿಜಾಮುದ್ದೀನ್​ನನ್ನು […]

ಅಕ್ರಮವಾಗಿ ಕೇರಳಕ್ಕೆ ಸಾಗಿಸ್ತಿದ್ದ 500 ಮೂಟೆ ಪಡಿತರ ಅಕ್ಕಿ ವಶ, ಎಲ್ಲಿ?
Follow us
ಸಾಧು ಶ್ರೀನಾಥ್​
|

Updated on:May 13, 2020 | 12:55 PM

ಮೈಸೂರು: ಕೊರೊನಾ ಲಾಕ್​ಡೌನ್ ನಡುವೆಯೂ ಅಕ್ರಮವಾಗಿ ಸಾಗಿಸ್ತಿದ್ದ 500 ಮೂಟೆ ಪಡಿತರ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೇರಳ ಮೂಲದ ಲಾರಿಯಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ರೈಸ್ ಮಿಲ್‌ನಿಂದ ನಂಜನಗೂಡು ಮಾರ್ಗವಾಗಿ ಕೇರಳಕ್ಕೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸಲಾಗುತ್ತಿತ್ತು.

ಈ ವೇಳೆ ಕಾರ್ಯಾಚರಣೆಗೆ ಇಳಿದಿದ್ದ ನಂಜನಗೂಡಿನ ಆಹಾರ ಇಲಾಖೆ ಮತ್ತು ಪೊಲೀಸರು ನಂಜನಗೂಡು ಪಟ್ಟಣದ ಹೆಜ್ಜಿಗೆ ಸೇತುವೆಯ ಬಳಿ ಸುಮಾರು 500 ಅಕ್ಕಿ ಮೂಟೆ ಸಾಗಿಸುತ್ತಿದ್ದ ಲಾರಿ ಹಾಗೂ ಕೇರಳ ಮೂಲದ ನಿಜಾಮುದ್ದೀನ್​ನನ್ನು ವಶಕ್ಕೆ ಪಡೆದಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 9:19 am, Wed, 13 May 20