ಐಫೋನ್​ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿ, ಬೈಕ್ ಕೈಕೊಟ್ಟಾಗ ಪೊಲೀಸರಿಗೆ ಸಿಕ್ಕಿಬಿದ್ದ

|

Updated on: Nov 30, 2020 | 3:11 PM

ಬೆಂಗಳೂರು: ಐಷಾರಾಮಿ ಐಫೋನ್​ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ಉಮ್ಮರ್ ಬಂಧಿತ ಆರೋಪಿ. iPhone ಬ್ರಾಂಡ್ ಅಂದ್ರೆನೆ ಒಂದು ರೀತಿಯ ರಿಚ್ ಫೀಲ್ ಆಗುತ್ತೆ. ಯಾಕಂದ್ರೆ ಈ ಐಫೋನ್​ಗಳು ದರದಿಂದ ಹಿಡಿದು ಬಳಕೆ ಮಾಡುವವರೆಗೂ ಸಾಮಾನ್ಯ ಫೋನ್​ಗಳಿಗಿಂತ ಡಿಫ್ರೆಂಟ್ ಹಾಗೂ ದುಬಾರಿ. ಹೀಗಾಗಿ ಐಫೋನ್​ಗಳ ಮೇಲೆ ಕಣ್ಣು ಹಾಕಿದ ಈ ಖತರ್ನಾಕ್ ಖದೀಮ ಅವುಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ. ಆದ್ರೆ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈತ ಬರೋಬ್ಬರಿ 13 […]

ಐಫೋನ್​ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿ, ಬೈಕ್ ಕೈಕೊಟ್ಟಾಗ ಪೊಲೀಸರಿಗೆ ಸಿಕ್ಕಿಬಿದ್ದ
ಐಫೋನ್ ಕಳ್ಳ ಮೊಹಮ್ಮದ್ ಉಮರ್
Follow us on

ಬೆಂಗಳೂರು: ಐಷಾರಾಮಿ ಐಫೋನ್​ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ಉಮ್ಮರ್ ಬಂಧಿತ ಆರೋಪಿ.

iPhone ಬ್ರಾಂಡ್ ಅಂದ್ರೆನೆ ಒಂದು ರೀತಿಯ ರಿಚ್ ಫೀಲ್ ಆಗುತ್ತೆ. ಯಾಕಂದ್ರೆ ಈ ಐಫೋನ್​ಗಳು ದರದಿಂದ ಹಿಡಿದು ಬಳಕೆ ಮಾಡುವವರೆಗೂ ಸಾಮಾನ್ಯ ಫೋನ್​ಗಳಿಗಿಂತ ಡಿಫ್ರೆಂಟ್ ಹಾಗೂ ದುಬಾರಿ. ಹೀಗಾಗಿ ಐಫೋನ್​ಗಳ ಮೇಲೆ ಕಣ್ಣು ಹಾಕಿದ ಈ ಖತರ್ನಾಕ್ ಖದೀಮ ಅವುಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ. ಆದ್ರೆ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈತ ಬರೋಬ್ಬರಿ 13 ಪ್ರಕರಣದಲ್ಲಿ ಭಾಗಿಯಾಗಿದ್ದ. ಕದ್ದ ಫೋನ್​ಗಳನ್ನ ಕಡಿಮೆ ಬೆಲೆಗೆ ಮಾರಾಟ ಮಾಡ್ತಿದ್ದ.

ಬೈಕ್ ಕೈಕೊಟ್ಟಾಗ ಪೊಲೀಸರಿಗೆ ಸಿಕ್ಕಿಬಿದ್ದ
ಬೈಕ್​ನಲ್ಲಿ ಬಂದು ಗಾಂಧಿನಗರದಲ್ಲಿ ನಿಂತಿದ್ದ ಕಿರಣ್ ಎಂಬುವವರ ಐಫೋನ್ ಕಸಿದು ಎಸ್ಕೇಪ್ ಆಗಲು ಯತ್ನಿಸುವ ವೇಳೆ ಕಳ್ಳನ ಬೈಕ್ ಕೈಕೊಟ್ಟ ಹಿನ್ನೆಲೆಯಲ್ಲಿ ಪೊಲೀಸರ ಕೈಗೆ ಲಾಕ್ ಆಗಿದ್ದಾನೆ. ಸದ್ಯ ಆರೋಪಿಯನ್ನ ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ವಿರುದ್ಧ ಬ್ಯಾಟರಾಯನಪುರ, ಚಂದ್ರಾಲೇಔಟ್, ವಿವಿ ಪುರಂ, ಶಂಕರಪುರಂ, ವಿಜಯನಗರ ಸೇರಿ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು.

ರಸ್ತೆ ಮೇಲೆ ಬಿದ್ದಿದ್ದ iPhoneನ ವಾಪಸ್​ ಮಾಡಿದ ಕಾರ್ಮಿಕನಿಗೆ ಖಾಕಿಯಿಂದ ಸನ್ಮಾನ, ಎಲ್ಲಿ?