ಗೋವಿಂದರಾಜನಗರ ಮಸೀದಿಯಲ್ಲಿ ಲೌಡ್ಸ್ಪೀಕರ್ ಬಳಕೆ: KSPCBಗೆ ಹೈಕೋರ್ಟ್ ತರಾಟೆ
ಗೋವಿಂದರಾಜನಗರ ಮಸೀದಿಯಲ್ಲಿ ಲೌಡ್ ಸ್ಪೀಕರ್ ಬಳಕೆ ವಿಚಾರವಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಬೆಂಗಳೂರು: ಗೋವಿಂದರಾಜನಗರ ಮಸೀದಿಯಲ್ಲಿ ಲೌಡ್ ಸ್ಪೀಕರ್ ಬಳಕೆ ವಿಚಾರವಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಮಂಡಳಿ ಅಧಿಕಾರಿ ಅಧಿಕಾರವಿಲ್ಲವೆಂದು ಕೈಚೆಲ್ಲಿದ್ದಾರೆ. ಅಧಿಕಾರಿಗಳಿಗೆ ಕಾನೂನಿನ ABCD ಗೊತ್ತಿಲ್ಲ. ತಪ್ಪಿತಸ್ಥರ ಮೇಲೆ ಪ್ರಾಸಿಕ್ಯೂಷನ್ಗೂ ಮುಂದಾಗಿಲ್ಲ. ಲೌಡ್ ಸ್ಪೀಕರ್ನ ಡೆಸಿಬಲ್ ಪರೀಕ್ಷೆಯನ್ನೂ ನಡೆಸಿಲ್ಲ ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿತು.
ನಮ್ಮ ಆದೇಶ ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಲಾಗುವುದು ಎಂದು KSPCB ಅಧ್ಯಕ್ಷರಿಗೆ ಹೈಕೋರ್ಟ್ ಎಚ್ಚರಿಕೆ ನೀಡಿದೆ. ಒಂದು ವಾರದಲ್ಲಿ ಕ್ರಮ ಕೈಗೊಂಡು ಪ್ರಮಾಣಪತ್ರ ಸಲ್ಲಿಸಿ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್ ಕಟ್ಟಪ್ಪಣೆ ಮಾಡಿದೆ.
ರಾಜ್ಯಾದ್ಯಂತ ಮಸೀದಿಗಳಲ್ಲಿ ಕಾನೂನಿನ ರೀತಿಯಲ್ಲಿ ಧ್ವನಿವರ್ಧಕ ತೆರವಿಗೆ ಸುತ್ತೋಲೆ
Published On - 2:57 pm, Mon, 30 November 20