AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದಲೂರು ಕೆರೆ ತುಂಬುವವರೆಗೂ ನೀರು ಹರಿಯಲಿದೆ: ಶಿರಾ ಶಾಸಕ ರಾಜೇಶ್​ಗೌಡ

ಕಳ್ಳಂಬೆಳ್ಳ ಕೆರೆಯಲ್ಲಿ ಈಗಾಗಲೇ ನೀರು ಸಂಗ್ರಹಣೆಯಾಗಿದೆ. 190 mcftಯಷ್ಟು ಸಂಗ್ರಹಣೆಯಾಗಿದೆ. ಹೀಗಾಗಿ, ಕಳ್ಳಂಬೆಳ್ಳ ಕೆರೆಯಿಂದ ನೀರು ಹರಿಸಲಾಗಿದೆ‌.

ಮದಲೂರು ಕೆರೆ ತುಂಬುವವರೆಗೂ ನೀರು ಹರಿಯಲಿದೆ: ಶಿರಾ ಶಾಸಕ ರಾಜೇಶ್​ಗೌಡ
ಡಾ. ರಾಜೇಶ್​ ಗೌಡ (ಎಡ); ಮದಲೂರು ಕೆರೆ (ಬಲ)
KUSHAL V
|

Updated on:Nov 30, 2020 | 4:33 PM

Share

ತುಮಕೂರು: ಕಳ್ಳಂಬೆಳ್ಳ ಕೆರೆಯಲ್ಲಿ ಈಗಾಗಲೇ 190 mcftಯಷ್ಟು ಸಂಗ್ರಹವಾಗಿದೆ. ಹೀಗಾಗಿ, ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆ ನೀರು ಹರಿಸಲಾಗಿದೆ‌. ಉಪಚುನಾವಣೆಯಲ್ಲಿ ಮದಲೂರು ಕೆರೆಗೆ ನೀರು ಬಿಡ್ತಿವಿ ಅಂತಾ ಹೇಳಲಾಗಿತ್ತು. ಭರವಸೆಯಂತೆ ನೀರು ರಿಲೀಸ್ ಮಾಡಲಾಗಿದೆ ಎಂದು ಮದಲೂರು ಕೆರೆಗೆ ಹೇಮಾವತಿ ನೀರು ರಿಲೀಸ್ ಹಿನ್ನೆಲೆಯಲ್ಲಿ ಟಿವಿ9 ಗೆ ಶಿರಾ ಶಾಸಕ ಡಾ.ರಾಜೇಶ್ ಗೌಡ ಪ್ರತಿಕ್ರಿಯಿಸಿದ್ದಾರೆ.

ಇನ್ನೂ ಒಂದೂವರೆ ತಿಂಗಳ ಕಾಲ ಅಂದರೆ, ಮದಲೂರು ಕೆರೆ ಭರ್ತಿಯಾಗುವವರೆಗೂ ನೀರು ಹರಿಯಲಿದೆ ಎಂದು ಶಾಸಕರು ಹೇಳಿದರು. ಕೆರೆಗೆ ನೀರು ಬಿಟ್ಟಿದ್ದಕ್ಕೆ ಸಿಎಂ ಯಡಿಯೂರಪ್ಪ ಹಾಗೂ ಸರ್ಕಾರಕ್ಕೆ ಧನ್ಯವಾದಗಳು. ಶಿರಾ ಕ್ಷೇತ್ರದ ಜನರ ಪರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸೇರಿದಂತೆ ಹೋರಾಟಗಾರರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.

ಮದಲೂರು ಕೆರೆಗೆ ನೀರು ಬಿಡಲು ಕುಣಿಗಲ್ ಶಾಸಕ ಡಾ.ರಂಗನಾಥ ವಿರೋಧ ವಿಚಾರವಾಗಿ ಮಾತನಾಡಿದ ಅವರು, ರೈತರು ಅಂದ್ರೆ ಎಲ್ಲಾ ಭಾಗದಲ್ಲಿಯೂ ಒಂದೇ. ಕುಣಿಗಲ್​ನಲ್ಲಿ 38 ಕೆರೆಗಳಿಗೆ ಹೇಮಾವತಿ ಬರ್ತಿದೆ‌. ನಾವು ಕೇಳ್ತಿರೋದು ಎರಡು ಕೆರೆಗೆ ಮಾತ್ರ. ಶಿರಾ ಹಾಗೂ ಮದಲೂರಿಗೆ ಕೇಳಿದ್ದೇವೆ‌. ಕುಣಿಗಲ್ ಶಾಸಕರಿಗೆ ಮನವಿ ಮಾಡ್ತೀವಿ. ಸೌಹಾರ್ದ ರೀತಿಯಲ್ಲಿ ಇತ್ಯರ್ಥ ಮಾಡಿಕೊಳ್ಳೋಣ ಎಂದು ಹೇಳಿದರು.

ಶಿರಾಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ಶಾಶ್ವತ ನೀರಾವರಿ ಸಿಗೋವರೆಗೂ ಸಹಕರಿಸಿ ಅಂತಾ ರಂಗನಾಥರಿಗೆ ಕೇಳಿಕೊಳ್ತಿನಿ ಎಂದು ಶಿರಾದಲ್ಲಿ ಟಿವಿ9ಗೆ ಡಾ.ರಾಜೇಶ್ ಗೌಡ ಹೇಳಿದರು.

ಕೊಟ್ಟ ಮಾತು ಉಳಿಸಿಕೊಂಡ ಸಿಎಂ BSY: ಮದಲೂರು ಕೆರೆಗೆ ಹರಿದುಬಂತು ಹೇಮಾವತಿ ನೀರು

‘ಮದಲೂರು ಕೆರೆಗೆ 6 ತಿಂಗಳಲ್ಲಿ ನೀರು ಹರಿಸುತ್ತಾರಂತಾ? ಅಲ್ಲಿವರೆಗೂ BSY ಇರ್ತಾರೋ ಇಲ್ವೋ ಗೊತ್ತಿಲ್ಲ’

ಮದಲೂರು ಕೆರೆಗೆ ನೀರು ಹರಿಸುವ ಯೋಜನೆ ಸ್ಥಗಿತ ಮಾಡಿದ್ದೇ ಯಡಿಯೂರಪ್ಪ-TB ಜಯಚಂದ್ರ ಕಿಡಿ

ಶಿರಾ ಉಪಸಮರ: ಮದಲೂರು ಕೆರೆ ಮೇಲೆ ಕೈ-ಕಮಲ-ದಳ ತ್ರಿಕೋನ ಪ್ರೇಮ! ಹೇಗೆ?

Published On - 3:32 pm, Mon, 30 November 20