AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಚಿನ್ನ’ ತಂದ ನೀವಾರ್​ ಚಂಡಮಾರುತ; ಸಮುದ್ರ ತೀರಕ್ಕೆ ಮೀನುಗಾರರು ದೌಡು

ಪೂರ್ವ ಗೋದಾವರಿಯ ಯು ಕೋಠಾಪಲ್ಲಿ ಮಂಡಲ್ ವ್ಯಾಪ್ತಿಯ ಹಳ್ಳಿಯಲ್ಲಿರುವ ಮೀನುಗಾರರಂತೂ ಬೀಚ್​ನಲ್ಲಿ ಬಿದ್ದ ಚಿನ್ನ ಆಯ್ದುಕೊಳ್ಳಲು ತರಾತುರಿಯಿಂದ ಓಡಿದ್ದಾರೆ. ಮುಂಜಾನೆ ಆರುಗಂಟೆಯಿಂದ, ಸಂಜೆಯವರೆಗೂ ಈ ಕಾಯಕ ಮುಂದುವರಿದಿತ್ತು.

‘ಚಿನ್ನ’ ತಂದ ನೀವಾರ್​ ಚಂಡಮಾರುತ; ಸಮುದ್ರ ತೀರಕ್ಕೆ ಮೀನುಗಾರರು ದೌಡು
ಸಮುದ್ರ ತೀರದಲ್ಲಿ ಸಿಕ್ಕ ಹಳದಿ ಬಣ್ಣದ ಮಣಿ...
Lakshmi Hegde
|

Updated on:Nov 30, 2020 | 3:55 PM

Share

ನಿವಾರ್ ಚಂಡಮಾರುತದ ನಂತರ ಜನರು ಸಮುದ್ರತೀರಕ್ಕೆ ಓಡಿದ ಘಟನೆ ಆಂಧ್ರಪ್ರದೇಶದ ಪೂರ್ವಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಸಮುದ್ರದಲ್ಲಿ ಅಲೆಗಳು ಅಬ್ಬರಿಸುತ್ತಿದ್ದರೂ ಲೆಕ್ಕಿಸದೆ ಜನರು ಉಪ್ಪಡಾ ಬೀಚ್​ನಲ್ಲಿ ಚಿನ್ನ ಆಯ್ದುಕೊಳ್ಳಲು ತಾಮುಂದು-ನಾಮುಂದು ಎನ್ನುತ್ತಿದ್ದರು ಎಂದು ವರದಿಯಾಗಿದೆ.

ಬೀಚ್​ನಲ್ಲಿ ಪತ್ತೆಯಾದ ಹಳದಿ ಬಣ್ಣದ (ಚಿನ್ನವನ್ನು ಹೋಲುವ) ಸಣ್ಣ ಮಣಿಯ ಫೋಟೋವನ್ನು ಸ್ಥಳೀಯರೊಬ್ಬರು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಚಿನ್ನಕ್ಕಾಗಿ 100ಕ್ಕೂ ಹೆಚ್ಚು ಮಂದಿ ಉಪ್ಪಡಾ ಬೀಚ್​ಗೆ ಆಗಮಿಸಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡರು ಎಂದು ತಿಳಿಸಿದ್ದಾರೆ.

ಹೇಗೆ ಸಿಕ್ತು ಈ ಚಿನ್ನ? ಈ ಭಾಗದಲ್ಲಿದ್ದ ಹಲವು ಪುರಾತನ, ಪ್ರಮುಖ ದೇವಸ್ಥಾನಗಳು ಕಾಲಕ್ರಮೇಣ ಸಮುದ್ರದಲ್ಲಿ ಮುಳುಗಿಹೋಗಿ, ಧ್ವಂಸಗೊಂಡಿವೆ. ಇದೀಗ ನಿವಾರ್​ ಚಂಡಮಾರುತದಿಂದ ದೊಡ್ಡದೊಡ್ಡ ಅಲೆಗಳು ಸಾಗರದೊಳಗಿಂದ ಏಳುತ್ತಿವೆ. ಹೀಗಾಗಿ ಸಮುದ್ರದ ಅಡಿಯಲ್ಲಿರಬಹುದಾದ ದೇಗುಲಗಳ ವಿಗ್ರಹದಲ್ಲಿರುವ ಆಭರಣಗಳು ಅಲೆಗಳೊಂದಿಗೆ ತೀರಕ್ಕೆ ಬರುತ್ತಿವೆ ಎಂದು ಸ್ಥಳೀಯರು ಅಂದಾಜಿಸಿದ್ದಾರೆ.

ಮೀನುಗಾರರು ಫುಲ್ ಖುಷ್​ ಪೂರ್ವ ಗೋದಾವರಿಯ ಯು ಕೋಠಾಪಲ್ಲಿ ಮಂಡಲ್ ವ್ಯಾಪ್ತಿಯ ಹಳ್ಳಿಯಲ್ಲಿರುವ ಮೀನುಗಾರರಂತೂ ಬೀಚ್​ನಲ್ಲಿ ಬಿದ್ದ ಚಿನ್ನ ಆಯ್ದುಕೊಳ್ಳಲು ತರಾತುರಿಯಿಂದ ಓಡಿದ್ದಾರೆ. ಮುಂಜಾನೆ ಆರುಗಂಟೆಯಿಂದ, ಸಂಜೆಯವರೆಗೂ ಈ ಕಾಯಕ ಮುಂದುವರಿದಿತ್ತು. ಬಲವಾಗಿ ಗಾಳಿಬೀಸುತ್ತಿದ್ದರೂ ಲೆಕ್ಕಿಸದೆ ಮಹಿಳೆಯರು, ಮಕ್ಕಳು ಬೀಚ್​ನಲ್ಲಿ ಗುಂಪುಗೂಡಿದ್ದರು. ಅನೇಕರಿಗೆ ಹಳದಿ ಬಣ್ಣದ ಮಣಿಗಳು ಸಿಕ್ಕಿವೆ. ಆದರೆ ಅದು ಚಿನ್ನವೇ ಹೌದೋ..ಅಲ್ಲವೋ ಎಂಬುದಿನ್ನೂ ದೃಢವಾಗಿಲ್ಲ.

ಪ್ರತಿ ಚಂಡಮಾರುತವೂ ಚಿನ್ನ ಅಥವಾ ಇನ್ಯಾವುದಾದರೂ ಬೆಲೆಬಾಳುವ ವಸ್ತುಗಳನ್ನು ತೀರಕ್ಕೆ ತರುತ್ತದೆ ಎಂದು ನಂಬುವ ಮೀನುಗಾರರು, ಈ ಬಾರಿ ಚಂಡಮಾರುತದ ಬಳಿಕವೂ ಬೀಚ್​ನಲ್ಲಿ ಹುಡುಕಾಟ ನಡೆಸಿದ್ದರು.

ಇದನ್ನೂ ಓದಿ:  ನಿವಾರ್​ ಚಂಡಮಾರುತದ ಪ್ರಭಾವ: ಬೆಂಗಳೂರಿನಲ್ಲಿ ಚಳಿ, ತಮಿಳುನಾಡಿನಲ್ಲಿ 3 ಸಾವು, ಆಂಧ್ರದಲ್ಲಿ ಭಾರಿ ಮಳೆ

Published On - 3:50 pm, Mon, 30 November 20

ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ಯಾವ ಕಾಲದ್ದು ಗೊತ್ತಾ?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ಯಾವ ಕಾಲದ್ದು ಗೊತ್ತಾ?
2 ಮದುವೆ ವಿಚಾರ ಗೊದ್ದಿದ್ದೇ ವಿವಾಹ: ಪತಿ ಆರೋಪಕ್ಕೆ ಮೇಘಶ್ರೀ ಕೌಂಟರ್​​
2 ಮದುವೆ ವಿಚಾರ ಗೊದ್ದಿದ್ದೇ ವಿವಾಹ: ಪತಿ ಆರೋಪಕ್ಕೆ ಮೇಘಶ್ರೀ ಕೌಂಟರ್​​
ನಿವೃತ್ತಿ ಬೆನ್ನಲ್ಲೇ ಅಬ್ಬರಿಸಿದ ಉಸ್ಮಾನ್ ಖ್ವಾಜಾ
ನಿವೃತ್ತಿ ಬೆನ್ನಲ್ಲೇ ಅಬ್ಬರಿಸಿದ ಉಸ್ಮಾನ್ ಖ್ವಾಜಾ
ಸ್ಯಾಂಡಲ್​ವುಡ್​ ನಟಿ, ಉದ್ಯಮಿ ನಂಟಿನ ಕೇಸ್​ಗೆ ಬಿಗ್​​ ಟ್ವಿಸ್ಟ್
ಸ್ಯಾಂಡಲ್​ವುಡ್​ ನಟಿ, ಉದ್ಯಮಿ ನಂಟಿನ ಕೇಸ್​ಗೆ ಬಿಗ್​​ ಟ್ವಿಸ್ಟ್
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
2 ಶತಕಗಳೊಂದಿಗೆ ಹೊಸ ಇತಿಹಾಸ ಬರೆದ ರಯಾನ್ ರಿಕೆಲ್ಟನ್
2 ಶತಕಗಳೊಂದಿಗೆ ಹೊಸ ಇತಿಹಾಸ ಬರೆದ ರಯಾನ್ ರಿಕೆಲ್ಟನ್
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ