ಸಾರ್ವಜನಿಕ ಶೌಚಾಲಯ ಬಳಸಿ ಹಣ ನೀಡದಿದ್ದಕ್ಕೆ ರಾಡ್​ನಿಂದ ಹಲ್ಲೆ!

ನೆಲಮಂಗಲ: ಸಾರ್ವಜನಿಕ ಶೌಚಾಲಯ ಬಳಸಿ ಹಣ ನೀಡದ ಹಿನ್ನೆಲೆಯಲ್ಲಿ ಬಸ್ ಚಾಲಕನ ತಲೆಗೆ ರಾಡ್‌ನಿಂದ ಹಲ್ಲೆ ಮಾಡಿರುವ ಘಟನೆ ನೆಲಮಂಗಲ ನಗರ ಬಸ್ ನಿಲ್ದಾಣದಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಶೌಚಾಲಯ ಬಳಸಿ ಹಣ ನೀಡಲಿಲ್ಲ ಎಂದು ಶೌಚಾಲಯ ನಿರ್ವಹಣೆ ಮಾಡುತ್ತಿದ್ದ ರಾಜೇಶ್‌ ಎಂಬಾತ ಬಸ್ ಚಾಲಕ ವೆಂಕಟೇಶ್ ಮೇಲೆ ರಾಡ್​ನಿಂದ ಹಲ್ಲೆ ಮಾಡಿದ್ದಾರೆ. ಗಾಯಾಳು ವೆಂಕಟೇಶ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ರಾಜೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ನೆಲಮಂಗಲ […]

ಸಾರ್ವಜನಿಕ ಶೌಚಾಲಯ ಬಳಸಿ ಹಣ ನೀಡದಿದ್ದಕ್ಕೆ ರಾಡ್​ನಿಂದ ಹಲ್ಲೆ!

Updated on: Sep 23, 2020 | 8:32 AM

ನೆಲಮಂಗಲ: ಸಾರ್ವಜನಿಕ ಶೌಚಾಲಯ ಬಳಸಿ ಹಣ ನೀಡದ ಹಿನ್ನೆಲೆಯಲ್ಲಿ ಬಸ್ ಚಾಲಕನ ತಲೆಗೆ ರಾಡ್‌ನಿಂದ ಹಲ್ಲೆ ಮಾಡಿರುವ ಘಟನೆ ನೆಲಮಂಗಲ ನಗರ ಬಸ್ ನಿಲ್ದಾಣದಲ್ಲಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಶೌಚಾಲಯ ಬಳಸಿ ಹಣ ನೀಡಲಿಲ್ಲ ಎಂದು ಶೌಚಾಲಯ ನಿರ್ವಹಣೆ ಮಾಡುತ್ತಿದ್ದ ರಾಜೇಶ್‌ ಎಂಬಾತ ಬಸ್ ಚಾಲಕ ವೆಂಕಟೇಶ್ ಮೇಲೆ ರಾಡ್​ನಿಂದ ಹಲ್ಲೆ ಮಾಡಿದ್ದಾರೆ. ಗಾಯಾಳು ವೆಂಕಟೇಶ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ರಾಜೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.