ಸೋಲಿನಲ್ಲೂ ಧೋನಿ ಹ್ಯಾಟ್ರಿಕ್ ಸಿಕ್ಸರ್.. ಏನಿದು ಸತತ 2ನೇ ವರ್ಷ ಧೋನಿ ಸಿಟ್ಟಿನ ಗುಟ್ಟು!

[lazy-load-videos-and-sticky-control id=”b7P3V9xPm9c”] ಚೆನ್ನೈ ತಂಡದ ಸೋಲಿನಲ್ಲೂ ಅಭಿಮಾನಿಗಳಿಗೆ ಥ್ರಿಲ್ ನೀಡಿದ್ದು ಧೋನಿ ಸಿಡಿಸಿದ ಅದ್ದೂರಿ ಸಿಕ್ಸರ್​ಗಳು. ಕೊನೆ ಓವರ್ ಮಾಡೋಕೆ ಬಂದ ಟಾಮ್ ಕರ್ರನ್ ಓವರ್​ನಲ್ಲಿ ಧೋನಿ, ಒಂದಲ್ಲಾ ಎರಡಲ್ಲಾ.. ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ್ರು. ಧೋನಿಯ ಈ ಹ್ಯಾಟ್ರಿಕ್ ಸಿಕ್ಸರ್ ಚೆನ್ನೈ ಅಭಿಮಾನಿಗಳಿಗೆ, ಸೋಲ್ತೀವಿ ಅನ್ನೋ ಬೇಸರವನ್ನು ಕಡಿಮೆ ಮಾಡಿತು. ಇಂಟ್ರಸ್ಟಿಂಗ್ ವಿಷ್ಯ ಏನಂದ್ರೆ, ಧೋನಿ ಸಿಡಿಸಿದ ಮೂರು ಸಿಕ್ಸರ್​ಗಳು ಸ್ಟೇಡಿಯಂ ದಾಟಿ ರಸ್ತೆಗೆ ಬಿತ್ತು. ಶಾರ್ಜಾದಲ್ಲಿ ಧೋನಿ ರಸ್ತೆಗೆ ಸಿಡಿಸಿದ ಒಂದು ಬಾಲ್ ಅನ್ನ ಪಾದಚಾರಿಯೊಬ್ಬ […]

ಸೋಲಿನಲ್ಲೂ ಧೋನಿ ಹ್ಯಾಟ್ರಿಕ್ ಸಿಕ್ಸರ್.. ಏನಿದು ಸತತ 2ನೇ ವರ್ಷ ಧೋನಿ ಸಿಟ್ಟಿನ ಗುಟ್ಟು!
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Sep 24, 2020 | 1:17 PM

[lazy-load-videos-and-sticky-control id=”b7P3V9xPm9c”]

ಚೆನ್ನೈ ತಂಡದ ಸೋಲಿನಲ್ಲೂ ಅಭಿಮಾನಿಗಳಿಗೆ ಥ್ರಿಲ್ ನೀಡಿದ್ದು ಧೋನಿ ಸಿಡಿಸಿದ ಅದ್ದೂರಿ ಸಿಕ್ಸರ್​ಗಳು. ಕೊನೆ ಓವರ್ ಮಾಡೋಕೆ ಬಂದ ಟಾಮ್ ಕರ್ರನ್ ಓವರ್​ನಲ್ಲಿ ಧೋನಿ, ಒಂದಲ್ಲಾ ಎರಡಲ್ಲಾ.. ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ್ರು. ಧೋನಿಯ ಈ ಹ್ಯಾಟ್ರಿಕ್ ಸಿಕ್ಸರ್ ಚೆನ್ನೈ ಅಭಿಮಾನಿಗಳಿಗೆ, ಸೋಲ್ತೀವಿ ಅನ್ನೋ ಬೇಸರವನ್ನು ಕಡಿಮೆ ಮಾಡಿತು.

ಇಂಟ್ರಸ್ಟಿಂಗ್ ವಿಷ್ಯ ಏನಂದ್ರೆ, ಧೋನಿ ಸಿಡಿಸಿದ ಮೂರು ಸಿಕ್ಸರ್​ಗಳು ಸ್ಟೇಡಿಯಂ ದಾಟಿ ರಸ್ತೆಗೆ ಬಿತ್ತು. ಶಾರ್ಜಾದಲ್ಲಿ ಧೋನಿ ರಸ್ತೆಗೆ ಸಿಡಿಸಿದ ಒಂದು ಬಾಲ್ ಅನ್ನ ಪಾದಚಾರಿಯೊಬ್ಬ ನಿಧಿಯೇ ಸಿಕ್ತು ಅಂತಾ ತಗೊಂಡು ಹೋಗಿದ್ದಾನೆ.

ಅಂಪೈರ್ ಎಡವಟ್ಟು.. ಕೆಂಡಾಮಂಡಲವಾದ ಧೋನಿ! ಧೋನಿ ಸಿಕ್ಸರ್​ಗಳನ್ನ ಕಣ್ತುಂಬಿಸಿಕೊಂಡ ಅಭಿಮಾನಿಗಳು ಖುಷಿಯಾದ್ರೆ, ಇದಕ್ಕೂ ಮುನ್ನ ಧೋನಿಯ ಉಗ್ರಕೋಪವನ್ನ ನೋಡಿ ದಂಗಾಗಿದ್ರು. ದೀಪಕ್ ಚಹರ್ ಮಾಡುತ್ತಿದ್ದ 18ನೇ ಓವರ್​ನ 5ನೇ ಎಸೆತದಲ್ಲಿ ಟಾಮ್ ಕರ್ರನ್, ಎಡ್ಜ್ ಆಗಿ ಕೀಪರ್ ಧೋನಿಗೆ ಕ್ಯಾಚ್ ನೀಡಿರ್ತಾರೆ. ಆನ್​ಫೀಲ್ಡ್ ಅಂಪೈರ್ ಕರ್ರನ್ ಔಟ್ ಎಂದು ತೀರ್ಪು ನೀಡ್ತಾರೆ. ಇದಾದ ಬಳಿಕ ಅಂಪೈರ್​ಗಳಾದ ವಿನೀತ್ ಕುಲಕರ್ಣಿ ಮತ್ತು ಸಂಶುದ್ದೀನ್ ಥರ್ಡ್ ಅಂಪೈರ್ ಮೊರೆ ಹೋಗ್ತಾರೆ. ಇದು ಧೋನಿ ಕೋಪ ನೆತ್ತಿಗೇರುವಂತೆ ಮಾಡಿತ್ತು. ಅಲ್ಲಾ ನಿಮಗೆ ಗೊತ್ತಿಲ್ಲಾ ಅಂದ್ರೆ ಥರ್ಡ್ ಅಂಪೈರ್ ಮೊರೆ ಹೋಗಿ. ಗೊತ್ತಿಲ್ಲದೇ ಔಟ್ ಎಂದು ಕೊಟ್ಟು, ಈವಾಗ ಥರ್ಡ್ ಅಂಪೈರ್ ಮೊರೆ ಹೋಗ್ತೀರಲ್ಲ. ಇದು ಸರಿನಾ ಅಂತಾ ಕ್ಲಾಸ್ ತಗೆದುಕೊಂಡ್ರು. [yop_poll id=”1″]

ಏನಿದು ಸತತ 2ನೇ ವರ್ಷ ಧೋನಿ ಸಿಟ್ಟಿನ ಗುಟ್ಟು? ಕಳೆದ ಐಪಿಎಲ್ ಸೀಸನ್​ನಲ್ಲೂ ಧೋನಿ, ಇದೇ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೆರಳಿ ಕೆಂಡಾಮಂಡಲವಾಗಿದ್ರು. ಅಂಪೈರ್​ಗಳ ತಪ್ಪು ಡಗೌಟ್​ನಲ್ಲಿದ್ದ ಮಾಹಿ ಮೈದಾನಕ್ಕೆ ಬರುವಂತೆ ಮಾಡಿತ್ತು. ಆವತ್ತು ಬೆನ್ ಸ್ಟೋಕ್ಸ್ ಮಾಡುತ್ತಿದ್ದ ಕೊನೆ ಓವರ್​ನ 4ನೇ ಎಸೆತವನ್ನ ಅಂಪೈರ್ ಉಲ್ಲಾಸ್ ನೋ ಬಾಲ್ ಅಂತಾ ಸನ್ನೆ ಮಾಡಿದ್ರು. ಅದೇ ಬಾಲ್​ನಲ್ಲಿ ಜಡೇಜಾ ಮತ್ತು ಸ್ಯಾಂಟ್ನರ್ ಎರಡು ರನ್ ತಗೆದಿದ್ರು. ಆದ್ರೆ ತಕ್ಷಣ ಲೆಗ್ ಅಂಪೈರ್ ಬ್ರೂಸ್ ಇದು ನೋ ಬಾಲ್ ಅಲ್ಲಾ ಅಂತಾ ಉಲ್ಟಾ ಹೊಡೆದ್ರು. ಇದು ಧೋನಿ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಇದೀಗ ಅದೇ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲೇ ಧೋನಿ ಸತತ 2ನೇ ವರ್ಷವೂ ಉಗ್ರರೂಪ ತಾಳಿದ್ದಾರೆ. ಎರಡು ಬಾರಿಯೂ ಅಂಪೈರ್​ನ ತಪ್ಪೇ ಧೋನಿ ತಾಳ್ಮೆ ಕಳೆದುಕೊಳ್ಳೋ ಹಾಗೇ ಮಾಡಿದೆ.

Published On - 9:22 am, Wed, 23 September 20