ಬೆಂಗಳೂರು: ಡ್ರಗ್ಸ್ ನಂಟಿಗೆ ಇದೀಗ ರೆಡ್, ಯಲ್ಲೋ, ಗ್ರೀನ್ ಸೆಕ್ಷನ್ ಸೇರ್ಪಡೆಯಾಗಿದೆ. ಅರೆ ಇದೇನಪ್ಪಾ ಡ್ರಗ್ಸ್‌ಗಳಲ್ಲಿ ರೆಡ್, ಯಲ್ಲೋ, ಗ್ರೀನ್ ಅನ್ನೋದು ಸಹ ಇದ್ಯಾ ಅಂದ್ಕೋಬೇಡಿ. ಯಾಕಂದ್ರೆ ಅದು ಡ್ರಗ್ಸ್ ನೇಮ್ ಅಲ್ಲ. ಬದಲಾಗಿ ಡ್ರಗ್ಸ್ ಮಾಫಿಯಾದ ಬೆನ್ನತ್ತಿರುವ ಆಂತರಿಕ ಭದ್ರತಾ ದಳ ತನಿಖೆಗಾಗಿ ಮಾಡಿಕೊಂಡಿರೋ ಹೊಸ ಪ್ಲ್ಯಾನ್.
ದಿನಕ್ಕೊಬ್ಬರ ಹೆಸರು.. ದಿನಕ್ಕೊಂದು ದಿಕ್ಕು.. ದಿನಕ್ಕೊಬ್ಬರ ಮನೆಗೆ ನೋಟಿಸ್.. ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್ ಬಗೆದಷ್ಟು ಆಳಕ್ಕೆ ಹೋಗುತ್ತಿದೆ. ತನ್ನ ವಿಶಾಲವಾದ ಮುಖ ತೆರೆದುಕೊಳ್ಳುತ್ತಿದೆ. ನಟ ನಟಿಯರ ಡ್ರಗ್ಸ್ ದಂಧೆ ಪ್ರಕರಣದ ತನಿಖೆ ಸಿಸಿಬಿಯಿಂದ ಐಎಸ್‌ಡಿವರೆಗೂ ತಲುಪಿದೆ. ಅದರಲ್ಲೂ ಸದ್ದಿಲ್ಲದೆ ಐಎಸ್‌ಡಿ ತನ್ನದೇ ಆಯಾಮದಲ್ಲಿ ತನಿಖೆ ಶುರುವಿಟ್ಟುಕೊಂಡಿದೆ.
ಮೂರು ವಿಭಾಗ ಮಾಡಿ ಐಎಸ್‌ಡಿ ತನಿಖೆ! ತನಿಖೆ ಆರಂಭಿಸಿರುವ ಐಎಸ್‌ಡಿ ತಾರೆಯರು, ಡ್ರಗ್ ಪೆಡ್ಲರ್ , ರಾಜಕೀಯ ಮಕ್ಕಳು, ಈವೇಂಟ್ ಆಯೋಜಕರು ಮತ್ತಿತ್ತರನ್ನ ಮೂರು ಭಾಗಗಳಾಗಿ ವಿಂಗಡಿಸಿ ತನಿಖೆಗೆ ವೇಗ ನೀಡಲಾಗಿದೆ. ಹಾಗಿದ್ರೆ ರೆಡ್, ಯೆಲ್ಲೋ, ಗ್ರೀನ್ ವಿಭಾಗದಲ್ಲಿ ಇರೋರು ಯಾಱರು ಅಂತ ನೋಡೋದಾದ್ರೆ..
ರೆಡ್: ರೆಡ್ ವಿಭಾಗದಲ್ಲಿ ಇರುವವರು ಪ್ರಮುಖ ಡ್ರಗ್ ಪೆಡ್ಲರ್ಗಳು ಮತ್ತು ನಟಿಯರು ಅಂದ್ರೆ ಸಂಜನಾ, ರಾಗಿಣಿ, ವಿರೇನ್ ಖನ್ನಾ, ವೈಭವ್ ಜೈನ್, ಪ್ರಶಾಂತ್ ರಂಕ, ಲೂಮ್ ಪೆಪ್ಪರ್, ಶಿವಪ್ರಕಾಶ್ ಚಪ್ಪಿ, ಪ್ರತೀಕ್ ಶೆಟ್ಟಿ , ಕಿಶೋರ್ ಶೆಟ್ಟಿ, ರವಿ ಶಂಕರ್, ಶ್ರೀನಿವಾಸ್ ಸುಬ್ರಹ್ಮಣ್ಯಂ ರೆಡ್ ವಿಭಾಗಕ್ಕೆ ಸೇರಿಸಲಾಗಿದೆ.
ಇನ್ನು ಯೆಲ್ಲೋ ವಿಭಾಗದಲ್ಲಿ ಇರುವವರು ರೆಡ್ನವರ ಜತೆ ಸಂಪರ್ಕ ಹೊಂದಿದವರು. ಇವರು ಡ್ರಗ್ ಸೇವನ ಮಾಡುವ ಜೊತೆಗೆ ಡ್ರಗ್ ಹಂಚುತ್ತಿದ್ದರು. ಯೆಲ್ಲೋ: ಇನ್ನು, ರಾಹುಲ್, ನಿಯಾಜ್, ಆದಿತ್ಯ ಅಗರ್ವಾಲ್ ಯೆಲ್ಲೋ ಪಟ್ಟಿಯಲ್ಲಿದ್ದಾರೆ.
ಅಂತಿಮವಾಗಿ ಗ್ರೀನ್ ವಿಭಾಗ. ಈ ವಿಭಾಗದಲ್ಲಿ ಇರುವವರಿಗೆ ಯೆಲ್ಲೋ ವಿಭಾಗದ ಸಂಪರ್ಕವಿತ್ತು. ಇವರು ಯಾವಾಗದರೊಮ್ಮೆ ಡ್ರಗ್ ಸೇವನೆ ಮಾಡುವ ಕೆಟಗರಿ. ಇದರಲ್ಲಿರುವವರು.. ಗ್ರೀನ್: ದಿಗಂತ್, ಅಕುಲ್, ಐಂದ್ರಿತಾ ರೈ, ಸಂತೋಷ್ ಕುಮಾರ್, ಯೋಗೀಶ್, ಎನ್.ಸಿ.ಅಯ್ಯಪ್ಪ ,ರಶ್ಮೀಕಾ ಚೆಂಗಪ್ಪರನ್ನ ಗ್ರೀನ್ ವಿಭಾಗಕ್ಕೆ ಸೇರ್ಪಡೆ ಮಾಡಲಾಗಿದೆ.
ಇದು ಸದ್ಯಕ್ಕೆ ವಿಂಗಡಣೆಯಾಗಿದರೋ ವಿಭಾಗವಾಗಿದ್ದು, ತನಿಖಾಧಿಕಾರಿಗಳ ಪ್ರಕಾರ ಪ್ರಕರಣದಲ್ಲಿ ಸಾಕ್ಷಿಗಳು ಲಭ್ಯವಾದಂತೆ ಈಗಿರುವ ಕೆಟಗಿರಿ ಸಹ ಬದಲಾವಣೆಯಾಗಲಿದೆ. ಒಟ್ನಲ್ಲಿ ಇಷ್ಟು ದಿನ ಸಿಸಿಬಿ ಕಡೆಗಿದ್ದ ಗಮನ ಈಗ ಐಎಸ್‌ಡಿಯತ್ತವೂ ನೆಟ್ಟಿದ್ದು, ಹಿರಿತೆರೆಯಿಂದ ಕಿರುತೆರೆಗೂ ವಿಚಾರಣೆ ಬಿಸಿ ಎದುರಾಗಿದೆ.